KGF YASH: ಬಾಲಿವುಡ್ ಕಡೆಗೆ KGF ಖ್ಯಾತಿಯ ರಾಕಿಭಾಯ್ ನಡೆ??

ಕನ್ನಡ ಸಿನಿಮಾ ರಂಗದ ಜನಪ್ರಿಯ ನಟ, ದೇಶ – ವಿದೇಶಗಳಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟ ರಾಕಿಭಾಯ್ ಅಲಿಯಾಸ್ ಯಶ್‌‌ ಹೆಸರು ಬಾಲಿವುಡ್ ನ ಎರಡು ದೊಡ್ಡ ಪ್ರಾಜೆಕ್ಟ್ ಗಳಿಗೆ ಕೇಳಿ ಬರುತ್ತಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಮುಂದಾಳತ್ವ ವಹಿಸಿದ್ದು, ಕನ್ನಡದಲ್ಲಿ ‌ನಿರ್ಮಾಣಗೊಂಡು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಬಾಕ್ಸ್ ಆಪೀಸ್ ನಲ್ಲಿ ಸದ್ದು ಮಾಡಿದ ಸಿನಿಮಾ ಕೆ ಜಿ ಎಫ್. ಇದರ ಬಳಿಕ ಯಶ್ ದೊಡ್ಡ ಮಟ್ಟದಲ್ಲಿ ಪ್ರಚಾರಗೊಂಡರು. ರಾಕಿಂಗ್ ಸ್ಟಾರ್ ಅವರಿಗೆ ನ್ಯಾಷನಲ್​ ಲೆವೆಲ್​ನಲ್ಲಿ ರಾಕಿ ಭಾಯ್​ ಇಮೇಜ್ ತಂದು ಕೊಂಡರು. ರೋಮ್ಯಾಂಟಿಕ್ ಹೀರೋ ಲುಕ್​ನಲ್ಲೇ ಮಿಂಚುತ್ತಿದ್ದ ಯಶ್ ಅವರನ್ನು ಖಡಕ್ ಅವತಾರದಲ್ಲಿ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಕೆಜಿಎಫ್ ಸಿನಿಮಾದ ನಂತರ ಹೊಸ ಸಿನಿಮಾ ಮಾಡುವ ಕಡೆಗೆ ಚಿಂತನೆ ನಡೆಸಿದ್ದಾರೆ.

ಆದರೆ, ಯಾವ ಸಿನಿಮಾ, ಯಾರ ಜೊತೆ ಸೇರಿ ಮಾಡುತ್ತಾರೆ ಎಂಬುದರ ಕುರಿತು ನಿಖರತೆ ಇಲ್ಲ. ಅಭಿಮಾನಿಗಳಲ್ಲಿ ಮುಂದಿನ ಸಿನಿಮಾ ಕುರಿತು ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಲ್ಲದೆ ಬಾಲಿವುಡ್ ನಲ್ಲಿಯೂ ಹೆಸರುವಾಸಿಯಾದ ನಟ ಯಶ್ ಅಲ್ಲಿಯೂ ಸಹ ಅನೇಕ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಹಿಂದಿಯಲ್ಲಿ ಕೆಲವು ನಿರ್ದೇಶಕರು ಯಶ್ ಜೊತೆಗೂಡಿ ಹಿಂದಿಯಲ್ಲಿ ಸಿನಿಮಾ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದ್ದು, ಅದಕ್ಕೆ ಪೂರ್ವ ತಯಾರಿ ಸಹ ನಡೆಯುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಬ್ರಹ್ಮಾಸ್ತ್ರ ಸೀಕ್ವೆಲ್‌ನಲ್ಲಿ ಯಶ್ : ಬಾಲಿವುಡ್ ನ ಬಾಕ್ಸ್ ಆಪೀಸ್ ನಲ್ಲಿ ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಅಟ್ಟಡಗಿಸಿದ್ದು ಎಲ್ಲರಿಗೂ ತಿಳಿದ ಸಂಗತಿ‌. ಈ ಚಿತ್ರದ ಸೀಕ್ವೆಲ್ ಬಗ್ಗೆಯೂ ಚರ್ಚೆ ನಡೀತಿದೆ. ಮೊದಲ ಭಾಗದಲ್ಲಿ ರಣ್‌ಬೀರ್ ಕಪೂರ್ ಶಿವ ಆಗಿ ದರ್ಬಾರ್ ನಡೆಸಿದರು. ಎರಡನೇ ಭಾಗದಲ್ಲಿ ದೇವ್ ಆರ್ಭಟ ನಡೆಯಲಿದೆ. ಯಾರು ದೇವ್ ಪಾತ್ರವನ್ನು ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹೃತಿಕ್ ರೋಷನ್ ಸೇರಿದಂತೆ ಬಾಲಿವುಡ್‌ನ ಕೆಲ ನಟರ ಹೆಸರುಗಳು ಕೇಳಿಬರ್ತಿತ್ತು. ಈಗ ಆ ಲಿಸ್ಟ್‌ಗೆ ಯಶ್ ಹೆಸರು ಸೇರಿಕೊಂಡಿದೆ ಎಂದು ತಿಳಿಯಲಾಗಿದೆ.
ಇನ್ನೂ ಯಶ್ ಜೊತೆ ಸಿನಿಮಾ ಮಾಡಲು ಎಕ್ಸೆಲ್ ಸಂಸ್ಥೆ ಪ್ರಯತ್ನಿಸುತ್ತಿದೆ. ಈ ಹಿಂದೆ ಕೆಜಿಎಫ್ ಹಿಂದಿ ವರ್ಷನ್ ಬಂದ ಸಂದರ್ಭದಲ್ಲಿ ಮಹಾಭಾರತ ಕಾವ್ಯ ಆಧರಿಸಿ ಸಿನಿಮಾ ಮಾಡಲು ಮುಂದಾಗಿತ್ತು. ಅದಕ್ಕೆ ಓಂ ಪ್ರಕಾಶ್ ಮೆಹ್ರಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ.
ಕರ್ಣನ ಕಥೆಯನ್ನು ಆಧರಿಸಿ 2 ಭಾಗಗಳಾಗಿ ಸಿನಿಮಾ ಮಾಡುವ ಪ್ರಯತ್ನ ನಡೀತಿದ್ದು, ಕರ್ಣನ ಪಾತ್ರಕ್ಕೆ ಯಶ್ ಹೆಸರು ಪರಿಶೀಲನೆ ನಡೆಸುತ್ತಿದ್ದಾರಂತೆ. ಈ ಬಗ್ಗೆ ಚರ್ಚೆ ನಡೀತಿದೆ ಎನ್ನುವ ಗುಸುಗುಸು ಬಾಲಿವುಡ್‌ನಲ್ಲಿ ಆರಂಭವಾಗಿದೆ.
ಇನ್ನು ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ನಿರ್ದೇಶನದಲ್ಲಿ ಬರಲಿರುವ ಸಿನಿಮಾ ದಲ್ಲಿ ಯಶ್ ನಟಿಸ್ತಾರೆ ಎನ್ನುವ ಮಾತುಗಳು ಹಲವು ದಿನಗಳಿಂದ ಹರಿದಾಡುತ್ತಿದೆ. ಯಶ್ ಗಾಗಿಯೇ ನರ್ತನ್ ಕಥೆ ಮಾಡಿದ್ದು ನಿಜ. ಆದರೆ ಕಥೆ ಇಷ್ಟವಾಗದ ಕಾರಣ ತಿದ್ದಿ ತೀಡುವ ಕೆಲಸ ನಡೀತಾನೇ ಇದೆ. ಯಾವಾಗ ಕಥೆ ಅಂತಿಮ ಆಗುತ್ತೋ ಗೊತ್ತಿಲ್ಲ. ಇತ್ತೀಚೆಗೆ ತಮಿಳು ನಿರ್ದೇಶಕ ಶಂಕರ್ ನಿರ್ದೇಶನದ ಚಿತ್ರದಲ್ಲಿ ಯಶ್ ನಟಿಸ್ತಾರೆ ಎನ್ನುವು ವದಂತಿಯೂ ಸುಳಿದಾಡುತ್ತಿವೆ.

ಯಶ್ ಜನ್ಮದಿನಕ್ಕೆ ಘೋಷಣೆ : ನಟ ಯಶ್ ತನ್ನ ಹುಟ್ಟು ಹಬ್ಬದ ದಿನದಂದು ಹೊಸ ಸಿನಿಮಾ ಘೋಷಣೆ ಮಾಡುವ ಸಂಭವವಿದೆ. ಅದಕ್ಕಾಗಿ ಯಶ್ ಅಭಿಮಾನಿಗಳು ಕಾತುರದಲ್ಲಿದ್ದಾರೆ. ಜನವರಿ 8ಕ್ಕೆ ರಾಕಿ ಭಾಯ್ ಹುಟ್ಟಿದ ದಿನ. ಅದೇ ಸಂದರ್ಭಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

#yash #bollywood #kgf #rakhibai #director prasanth neil #two projects

More News