ಇಂದೋರ್ ಒಬ್ಬ ಸ್ನೇಹಿತನಿಗಾಗಿ ಮೂವರು ವಿದ್ಯಾರ್ಥಿನಿಯರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ವರದಿಯಾಗಿದೆ. ವಿಷ ಸೇವಿಸಿದ ಮೂವರ ಪೈಕಿ
ಇಬ್ಬರು ಮೃತಪಟ್ಟಿದ್ದು, ಒಬ್ಬ ವಿದ್ಯಾರ್ಥಿನಿಯ ಸ್ಥಿತಿ ಚಿಂತಾಚನಕವಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಈ ಮೂವರು ವಿದ್ಯಾರ್ಥಿನಿಯರು ಸಮಾನ ವಯಸ್ಕರು ಅದಕ್ಕಿಂತ ಮಿಗಿಲಾಗಿ ಆತ್ಮೀಯ ಸ್ನೇಹಿತರು ಕೂಡ ಆಗಿದ್ದಾರೆ. ಇವರು ಸೀಹೋರ್ ಜಿಲ್ಲೆಯ ಅಶ್ತ ಎಂಬ ಊರಿನಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಮೃತರ ಪೈಕಿ ಓರ್ವ ವಿದ್ಯಾರ್ಥಿನಿಗೆ ಇಂದೋರ್‌ನಲ್ಲಿ ಸ್ನೇಹಿತನಿದ್ದ. ಅವನು ಕೆಲವು ದಿನಗಳಿಂದ ಆಕೆಯ ಮೇಲೆ ಮುನಿಸಿಕೊಂಡು ಫೋನ್‌ನಲ್ಲಿ ಮಾತನಾಡುತ್ತಿರಲಿಲ್ಲ. ಇದರಿಂದ ಮನನೊಂದ ಆಕೆ ಮುಖಾಮುಖಿ ಭೇಟಿಯಾಗಲು ಮುಂದಾಗಿದ್ದಾಳೆ. ನಿನ್ನೆ ಶಾಲೆಗೆ ಚಕ್ಕರ್ ಹಾಕಿ ಆತ್ಮೀಯ ಸ್ನೇಹಿತೆಯರ ಜೊತೆ 100 ಕಿ.ಮೀ ದೂರದ ಇಂದೋರ್‌ಗೆ ಬಸ್‌ನಲ್ಲಿ ತೆರಳಿದ್ದಾರೆ.
ಇನ್ನು ಇಂದೋರ್‌ನಲ್ಲಿ ಆತ್ಮೀತ ಸ್ನೇಹಿತ ಸಿಗದಿದ್ದರೆ ತನ್ನ ಜೊತೆಗಿದ್ದ ಸ್ನೇಹಿತೆಯರ ಜೊತೆ ವಿಷ ಕುಡಿದು ಸಾಯಲು ನಿರ್ಧರಿಸಿದ್ದಾಳೆ. ಆಶ್ತಾ ಎಂಬ ಊರಿನಲ್ಲೇ ವಿಷದ ಬಾಟಲಿಯನ್ನು ಖರೀದಿಸಿದ್ದಾರೆ. ಬಳಿಕ ಇಂದೋರ್ ಗೆ ತೆರಳಿ ಸ್ನೇಹಿತನನ್ನ ಸಂಪರ್ಕಿಸಿದ್ದಾರೆ.
ಭವಾರ್‌ಕೌನ್ ಪ್ರದೇಶದಲ್ಲಿರುವ ಉದ್ಯಾನವನವೊಂದರಲ್ಲಿ ಆತನಿಗಾಗಿ ಕಾದು ಕುಳಿತಿದ್ದಾರೆ. ಎಷ್ಟು ಸಮಯ ಕಾದರು ಅವನು ಬಾರದ ಹಿನ್ನೆಲೆ ಮನನೊಂದು ವಿಷ ಕುಡಿದಿದ್ದಾಳೆ. ನಂತರ ಮತ್ತೊಬ್ಬ ಸ್ನೇಹಿತೆ ತನ್ನ ಮನೆಯಲ್ಲಿ ಗಂಭೀರ ತೊಂದರೆಗಳಿರುವುದಾಗಿ ಹೇಳಿ ವಿಷ ಸೇವಿಸಿದ್ದಾಳೆ. ನಂತರ ಉಳಿದ ಕೊನೆಯ ಸ್ನೇಹಿತ ಕೂಡ ಇಬ್ಬರು ಆತ್ಮೀಯ ಸ್ನೇಹಿತೆಯರು ಕಣ್ಣ ಮುಂದೆ ವಿಷ ಸೇವಿಸಿದ್ದ ನೋವು ತಾಳಲಾರದೆ ದುಖಃದಲ್ಲಿ ವಿಷ ಕುಡಿದಿದ್ದಾಳೆ.
ಕೊನೆಯಲ್ಲಿ ವಿಷ ಸೇವಿಸಿದ್ದ ವಿದ್ಯಾರ್ಥಿನಿ ಜೀವನ್ಮರಣದ ಜೊತೆ ಹೋರಾಡುತ್ತಿದ್ದಾಳೆ. ಹೀಗಾಗಿ ಇಷ್ಟು ವಿಚಾರಗಳನ್ನ ಆಕೆಯ ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಷ ಸೇವಿಸಿ ನೆಲಕ್ಕೆ ಉರುಳಿ ಒದ್ದಾಡುತ್ತಿದ್ದ ವಿದ್ಯಾರ್ಥಿಗಳನ್ನ ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.




