JAYA BACHCHAN:ದೈಹಿಕ ಆಕರ್ಷಣೆಯಿಲ್ಲದೆ ಜಾಸ್ತಿ ದಿನ ಸಂಬಂಧ ಉಳಿಯಲ್ಲ: ಮೊಮ್ಮಗಳಿಗೆ ಜಯಾ ಬಚ್ಚನ್ ಸಲಹೆ..!

ಸಂಬಂಧ ಅಂತ ಅಂದ್ರೆ ಅದು ಪ್ರೀತಿ ಮತ್ತು ಹೊಂದಾಣಿಕೆ ಇದ್ರೆ ಮಾತ್ರ ಬದುಕಿರಲು ಸಾಧ್ಯ ಎಂದು ಹೇಳುವುದಕ್ಕೆ ಬರಲ್ಲ ಎಂದಿರುವ ಹಿರಿಯ ನಟಿ ಜಯಾ ಬಚ್ಚನ್ ಅವರು, ಸಂಬಂಧಗಳು ದೈಹಿಕ ಆಕರ್ಷಣೆ ಇಲ್ಲದೇ ಜಾಸ್ತಿ ದಿನ ಉಳಿಯಲ್ಲ. ನೀವು ಪ್ರೀತಿ ಮತ್ತು ಹೊಂದಾಣಿಕೆಯ ಮೇಲೆ ಶಾಶ್ವತವಾಗಿ ಜೊತೆಗಿರಲು ಸಾಧ್ಯವಿಲ್ಲ ಎನ್ನುವ ಮೂಲಕ ಚರ್ಚೆಗೆ ಈಡಾಗಿದ್ದಾರೆ. ಅಮಿತಾ ಬಚ್ಚನ್ ಜೊತೆಗೆ ತುಂಬು ಜೀವನ ನಡೆಸಿರುವ ಹಿರಿಯ ನಟಿಯ ಮಾತಿಗೆ ಸಿನಿ ಪ್ರೀಯರು ಹುಬ್ಬೇರಿಸುವಂತಾಗಿದೆ.

ಜಯಾ ಬಚ್ಚನ್ ಅವರ ತಮ್ಮ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರೊಂದಿಗೆ ತನ್ನ ಪಾಡ್ಕಾಸ್ಟ್ “ವಾಟ್ ದಿ ಹೆಲ್ ನವ್ಯಾ”ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರಿಗೆ ನನ್ನ ಮಾತುಗಳು ಬೇಸರ, ಕೋಪ ತರಿಸಬಹುದು, ಆಕ್ಷೇಪಣೆಗಳಿರಬಹುದು. ಆದರೆ, ದೈಹಿಕ ಆಕರ್ಷಣೆ ಮತ್ತು ಹೊಂದಾಣಿಕೆ ಎರಡು ಬಹಳ ಮುಖ್ಯ ಎನಿಸುತ್ತದೆ ಎಂದಿದ್ದಾರೆ.

“ಸಂಬಂಧದಲ್ಲಿ ಪ್ರಯೋಗ ಇರಲಿ”

ನಮ್ಮ ಕಾಲದಲ್ಲಿ ನಾವು ಪ್ರಯೋಗಗಳನ್ನು ಮಾಡಲು ಸಾಧ್ಯವಾಗಲಿಲ್ಲ‌. ನಾವು ಈತರ ಪ್ರಯೋಗ ಮಾಡಲು ಆಗಲಿಲ್ಲ. ಆದರೆ, ಈ ಕಾಲದವರಿಗೆ ಅಂತಹ ಅವಕಾಶ ಇದೆ. ಇವಾಗ ಅದನ್ನು ಮಾಡುತ್ತಾರೆ ಮತ್ತು ಏಕೆ ಮಾಡಬಾರದು? ಎಂಬುದು ದೂರದ ಕಾರಣವಾಗಿದೆ. ಹೀಗಾಗಿ, ದೈಹಿಕ ಆಕರ್ಷಣೆ ಎಂಬ ಅಂಶವು ಈಗ ಬಹಳ ಮುಖ್ಯ ಎಂದು ಹೇಳಿದ್ದಾರೆ.ತಮ್ಮ ಫೋಟೋ ತೆಗೆಯಲು ಬಂದ ಛಾಯಾಗ್ರಾಹಕರಾದ ಪಾಪರಾಜಿಗಳ ಮೇಲೆ ಕೋಪ ಮಾಡಿಕೊಂಡಿರುವ ಕಾರಣದಿಂದಾಗಿ ಜಯಾ ಬಚ್ಚನ್ ಸುದ್ದಿಯಲ್ಲಿದ್ದರು. ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಸಂಬಂಧಗಳು ದೀರ್ಘಕಾಲ ಉಳಿಯಲು ‘ದೈಹಿಕ ಆಕರ್ಷಣೆ’ ಬಹಳ ಮುಖ್ಯ ಎಂದು ಹೇಳಿಕೆ ನೀಡಿದ್ದಾರೆ.

“ನವ್ಯಾಗೆ ಮದುವೆಯಿಲ್ಲದೆ ಮಗು ಆದರೆ ನನಗೆ ಯಾವುದೇ ಸಮಸ್ಯೆಯಿಲ್ಲ”

ಇದೇ ಸಂದರ್ಭದಲ್ಲಿ ಮೊಮ್ಮಗಳು ನವ್ಯಾ ನವೇಲಿ ನಂದಾಗೆ ಮುಂದೆ ಮದುವೆಯಿಲ್ಲದೆ ಮಗು ಆದರೆ ತನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.ನೀವು ನಿಮ್ಮ ಉತ್ತಮ ಸ್ನೇಹಿತನನ್ನು ಮದುವೆಯಾಗುವುದು ಉತ್ತಮ. ಒಳ್ಳೆ ಸ್ನೇಹಿತ ಇದ್ರೆ ಇನ್ನೂ ಚೆನ್ನ. ನೀವುಗಳು ಹಲವಾರು ವಿಷಯಗಳನ್ನು ಚರ್ಚಿಸಬೇಕು ಮತ್ತು ಪರಸ್ಪರರು ಹೇಳಿಕೊಳ್ಳಬೇಕು. ನೀವು ನಿಮ್ಮೊಡನೆ ಮಗುವಾಗಬೇಕು ಎಂದು ಈಗಿನ ಸಂಬಂಧಗಳ ಕುರಿತು ಒಂದಷ್ಟು ಟ್ರಿಕ್ಸ್ ನೀಡಿದ್ದಾರೆ ಜಯಾ ಬಚ್ಚನ್.‌

More News