BASAVALINGA SWAMIJI: ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ: ಮತ್ತೊಬ್ಬ ಸ್ವಾಮೀಜಿಯಿಂದಲೇ ಸಂಚು:

ರಾಮನಗರ: ಮಾಗಡಿಯ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ‌‌. ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ಎಂಜಿನಿಯರಿಂಗ್ ವಿದ್ಯಾರ್ಥಿನಿ ನೀಲಾಂಬಿಕೆ ಹಾಗೂ ವಕೀಲ ಮಹದೇವಯ್ಯ ಬಂಧಿತರು.

ಬಸವಲಿಂಗ ಶ್ರೀಗಳಿಗೂ ಹಾಗೂ ಆರೋಪಿ ಕಣ್ಣೂರು ಶ್ರೀಗಳಿಗೂ ವೈಷಮ್ಯ ಇತ್ತು. ಈ ಹಿನ್ನೆಲೆಯಲ್ಲಿ ಯುವತಿಯನ್ನು ಬಳಸಿಕೊಂಡು ಕಣ್ಣೂರು ಶ್ರೀಗಳು ಹನಿಟ್ರ್ಯಾಪ್ ಮಾಡಿಸಿದ್ದರು. ಯುವತಿಯು ಬಸವಲಿಂಗ ಸ್ವಾಮೀಜಿ ಜೊತೆ ವಿಡಿಯೊ ಚಾಟಿಂಗ್‌ ಮಾಡಿದ್ದು, ಅದನ್ನು ವಕೀಲ ಮಹದೇವಯ್ಯರಿಗೆ ನೀಡಿದ್ದರು. ಮಹದೇವಯ್ಯ  ಅದನ್ನು ಸಿ.ಡಿ. ಮಾಡಿ ಮುಖಂಡರಿಗೆ ಹಂಚಿದ್ದರು ಎಂದು ಆರೋಪಿಸಲಾಗಿದೆ.

More News