SANJAY DUTT:ಡ್ರಗ್ಸ್ ಸೇವನೆಯಿಂದ 10 ವರ್ಷಗಳ ಕಾಲ ಒಂದು ಕೋಣೆಯಲ್ಲಿದ್ದೆ..!

ಡ್ರಗ್ಸ್ ಸೇವನೆಯಿಂದ ಒಂದಲ್ಲ‌, ಎರಡಲ್ಲ ಹತ್ತು ವರ್ಷಗಳ ಕಾಲ ನಾನು ಒಂದು ಕೋಣೆಯಲ್ಲಿ, ಬಾತ್‌ ರೋಮ್‌ ನಲ್ಲಿ ಜೀವನ ಕಳೆದುಬಿಟ್ಟೆ ಎಂದು ನಟ ಸಂಜಯ್ ದತ್ ಹೇಳಿದ್ದಾರೆ.

ಹಿಂದಿಯ ದಸ್ ಕಾ ದಮ್ ಶೋ ನಲ್ಲಿ ಡ್ರಗ್ಸ್ ಸೇವನೆಯ ಕಾಲಘಟ್ಟವನ್ನು ನೆನೆಸಿಕೊಂಡ ನಟ ಸಂಜಯ್ ದತ್,
ಡ್ರಗ್ಸ್‌ ತೆಗೆದುಕೊಂಡರೆ ಮಹಿಳೆಯರ ದೃಷ್ಟಿಯಲ್ಲಿ ಕೂಲ್‌ ಆಗಿ ಕಾಣಿಸುತ್ತೇನೆ ಅಂದುಕೊಂಡಿದ್ದೆ. ಹೀಗಾಗಿ ಡ್ರಗ್ಸ್‌ ಸೇವನೆ ಆರಂಭಿಸಿದ್ದೆ. ಒಂದಲ್ಲ‌, ಎರಡಲ್ಲ ಹತ್ತು ವರ್ಷಗಳ ಕಾಲ ನಾನು ಒಂದು ಕೋಣೆಯಲ್ಲಿ, ಬಾತ್‌ ರೋಮ್‌ ನಲ್ಲಿ ಜೀವನ ಕಳೆದುಬಿಟ್ಟೆ. ಶೂಟಿಂಗ್‌ ನಲ್ಲಿ ಕೂಡ ಆಸಕ್ತಿ ಇರಲಿಲ್ಲ. ನಾನು ರಿಹ್ಯಾಬಿಟೇಶನ್‌ ನಿಂದ ಬಂದ ಮೇಲೆ ನನ್ನನ್ನು ವ್ಯಸನಿ ಅಂತಾ ಕರೀತಾ ಇದ್ರು. ಆದ್ರೆ ನಾನು ಯೋಚಿಸಿದೆ ಇದು ತಪ್ಪು ಅಂತ. ಇಂದು ಎಲ್ಲವೂ ಬದಲಾಗಿದೆ ಎಂದು ಗತವನ್ನು ಸಂಜಯ್‌ ದತ್ ಹೀಗೆ ಮೆಲುಕು ಹಾಕಿದರು.

ಮುಂದುವರೆದು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಒಮ್ಮೆ ಡ್ರಗ್ಸ್‌ ಸೇವಿಸಿ ನನ್ನ ರೂಮ್‌ ನಲ್ಲಿ ಮಲಗಿದ್ದೆ. ಅದು 7-8 ಗಂಟೆಯ ಹೊತ್ತು. ನಾನು ನಿದ್ದೆಯಿಂದ ಏದ್ದೇಳುವಾಗ ನನಗೆ ತುಂಬಾ ಹಸಿವಾಗಿತ್ತು. ಎದ್ದವನೇ ನನ್ನ ಮನೆಯ ಕೆಲಸದವನಿಗೆ ಹೇಳಿದೆ, ನನಗೆ ತುಂಬಾ ಹಸಿವಾಗ್ತಿದೆ. ಊಟ ತಂದು ಕೊಡು ಅಂತ. ಆದ್ರೆ ಆತ, ಎರಡು ದಿನದ ನಂತರ ನೀವು ಊಟ ಕೇಳುತ್ತಿದ್ದೀರಿ ಎನ್ನುತ್ತಾ ಅಳಲು ಶುರು ಮಾಡಿದ. ನನಗೆ ಆಶ್ಚರ್ಯವಾಯ್ತು. ಎರಡು ದಿನಗಳಾ? ಹೇಗೆ? ನಾನು ನಿನ್ನೆ ಮಲಗಿದ್ದೆ ಅಷ್ಟೇ ಎಂದಾಗ, ನೌಕರ, ಅಲ್ಲ ನೀವು ಎರಡು ದಿನಗಳ ಹಿಂದೆ ಮಲಗಿದ್ದೀರಿ. ನಿಮಗೆ ಪ್ರಜ್ಞೆಯೇ ಇರಲಿಲ್ಲ ಎಂದಿದ್ದ ಅಳುತ್ತಾ. ಆಗ ನನಗೆ ಡ್ರಗ್ಸ್‌ ಅನ್ನೋದು ವ್ಯರ್ಥ, ಜೀವನದ ಅಮಲೇ ಉತ್ತಮ ಅನ್ನೋದು ಅರ್ಥವಾಯ್ತು. ಇದಾಗ ಬಳಿಕ ನಾನು ಡ್ರಗ್ಸ್‌ ತ್ಯಜಿಸಲು ನಿರ್ಧರಿಸಿದೆ ಎಂದು ಅನುಭವ ಹಂಚಿಕೊಂಡರು.

More News