KANTARA: ಕಾಂತಾರ ಸಿನಿಮಾ ಎಫೆಕ್ಟ್: ಅಪರೂಪದ ಕಲಾವಿದರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಭಾರತಾದ್ಯಂತ ಭರ್ಜರಿ ಪ್ರದರ್ಶನ ನಡೆಯುತ್ತಿದೆ. ಬಾಕ್ಸ್ ಆಫೀಸ್ ಕೂಡ ಭರ್ತಿಯಾಗಿದೆ. ಈಗಾಗಲೇ ಅಂದಾಜು 300 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾದ ನೋಡಿದ ನಂತರ ದೈವ ನರ್ತಕರಿಗೆ ಹಲವು ಸೌಲಭ್ಯಗಳು ಒಲಿದು ಬರುತ್ತಿವೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ದೈವನರ್ತಕರಿಗೆ ಮಾಸಾಶನವನ್ನು ಘೋಷಣೆ ಮಾಡಿತ್ತು. ಅದರ ಬಳಿಕ ಮೊದಲ ಬಾರಿಗೆ ದೈವನರ್ತಕರಿಗೆ ಹಾಗೂ ಮುಖ ವೀಣೆ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, ಜನರ ಪ್ರಶಂಸೆಗೆ ಪಾತ್ರವಾಗುತ್ತಿದೆ.

ಉಡುಪಿ ಜಿಲ್ಲೆಯ ಕಾಪುವಿನ ಗುಡ್ಡ ಪಾಣಾರು ದೈವನರ್ತಕ ಗುಡ್ಡಪಾಣಾರಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಆಗಿದೆ. ಯಾವುದೇ ಅರ್ಜಿ ಹಾಕದೇ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ ಎನ್ನುವುದು ಮತ್ತೊಂದು ವಿಶೇಷ.

ರಾಜ್ಯದಲ್ಲೇ, ಅಪರೂಪದಲ್ಲಿ ಅಪರೂಪ ಕಲೆ ಮುಖವೀಣೆ‌. ಹೀಗಾಗಿ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಜನಪದ ಕಲಾವಿದ ಮುಖವೀಣೆ ಅಂಜಿನಪ್ಪನವರಿಗೆ ರಾಜ್ಯ ಸರ್ಕಾರ ಈ ಬಾರಿ ಅಪರೂಪದ ಕಲಾವಿದನನ್ನು ಗುರುತಿಸಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಬಾಯಿಯ ಮೂಲಕ ಹಲವು ತರಹೇವಾರಿ ನಾದಸ್ವರಗಳನ್ನು ನುಡಿಸುವ ಕಲೆಯನ್ನು ಮುಖವೀಣೆ ಕಲೆ ಅಂತಾರೆ. ಅದನ್ನು ಸರಾಗವಾಗಿ ಅಂಜಿನಪ್ಪನವರು ನಾದಸ್ವರಗಳನ್ನು ಬಾಯಿಯ ಮೂಲಕ ನುಡಿಸುತ್ತಿರುವಾಗಲೇ ಒಂದು ಮೂಗಿನ ಹೊಳ್ಳೆಯ ಮೂಲಕ ನೀರು ಒಳಹೋಗಿಸಿ, ಮತ್ತೊಂದು ಮೂಗಿನ ಹೊಳ್ಳೆಯ ಮೂಲಕ ಹೊರಬರಿಸುವಂತಹ ಅಪರೂಪದ ಕಲಾ ಪ್ರದರ್ಶನವನ್ನು ಮೈಗೂಡಿಸಿಕೊಂಡಿದ್ದಾರೆ.

More News