‘KANTARA’ SUCCESS: ಸಿನಿಮಾ ಸಕ್ಸನ್ ಅನ್ನು ಹೆಂಡತಿಗೆ ಅರ್ಪಿಸಿದ ರಿಷಬ್

ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸೇರಿದಂತೆ ಇನ್ನಿತರೆ ಭಾಷೆಗಳಲ್ಲಿ ದೇಶ-ವಿದೇಶಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾದ ಗೆಲುವನ್ನು ನಿರ್ದೇಶಕ ಹಾಗೂ ನಟ ರಿಷಬ್‌ ಶೆಟ್ಟಿ ತನ್ನ ಪತ್ನಿಗೆ ಅರ್ಪಿಸಿದ್ದಾರೆ. ಸಿನಿಮಾದಲ್ಲಿ ರಿಷಬ್‌ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಕಾಸ್ಟೂಮ್‌ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಸಿನಿಮಾ ಗೆಲ್ಲಲು ಆಕೆಯ ಶ್ರಮವೂ ಇದೆಎಂದು ಬಣ್ಣಿಸಿರುವ ರಿಷಬ್‌ ಈ ಗೆಲುವನ್ನು ಆಕೆಗೆ ಸಮರ್ಪಿಸುವೆ ಎಂದು ಸೋಶೀಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಹಲವಾರು ವಿವಾದಗಳ ನಡುವೆಯೇ ಕಾಂತಾರ ಸಿನಿಮಾ ಗೆದ್ದಿದೆ. ಈ ಹಿನ್ನಲೆಯಲ್ಲಿ ಪ್ರಗತಿ ಶೆಟ್ಟಿಅವರನ್ನು ಮೊದಲ ಬಾರಿಗೆ ಭೇಟಿಯಾದ ಫೋಟೋ ಮತ್ತು ಇಂದು ಕಾಂತಾರ ಸಕ್ಸಸ್ ವೇಳೆಯಲ್ಲಿ ವಿಮಾನದಲ್ಲಿ ಹಾರಾಟ ಮಾಡುತ್ತಿರುವ ಫೋಟೋ ಎರಡನ್ನೂ ಹಂಚಿಕೊಂಡಿರುವ ರಿಷಬ್, ತಮ್ಮ ಗೆಲುವಿಗೆ ಪ್ರಗತಿ ಕೂಡ ಕಾರಣವೆಂದು ಹೆಂಡತಿಯನ್ನು ಹಾಡಿ ಹೊಗಳಿದ್ದಾರೆ. ಪತ್ನಿಯ ಸಹಾಯವನ್ನು ಕೊಂಡಾಡಿದ್ದಾರೆ.


ಬಾಲಿವುಡ್ ಬಾಕ್ಸ್ ಆಪೀಸ್ ನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿರುವ ಸಿನಿಮಾ ಕಾಂತಾರ. ಈವರೆಗೂ ಚಿತ್ರದಿಂದ ಅಂದಾಜು 50 ಕೋಟಿ ಬಂದಿದೆ ಅಂತ ಅಂದಾಜಿಸಲಾಗಿದೆ. ಆದರೆ, ಸಿನಿಮಾ ತಂಡದಿಂದ ಈ ಬಗ್ಗೆ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇನ್ನು ರಿಷಬ್ ಶೆಟ್ಟಿ ವಿಮಾನದಲ್ಲಿ ಓಡಾಡುತ್ತಿರುವ ಫೋಟೋವನ್ನು ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ. ರಿಷಬ್ ವಿಮಾನದಲ್ಲಿ ಪ್ರಯಾಣದ ಮಾಡುತ್ತಿರುವ ಫೋಟೋ ಬಳಸಿಕೊಂಡು ಡಾಲಿ ಧನಂಜಯ್ ಅವರ ಪೇಮಸ್ ಆದ ಡೈಲಾಗ್ ಬಡವರ ಮಕ್ಕಳು ಬೆಳಿಬೇಕು ಎಂದು ಬರೆಯುವ ಮೂಲಕ ರಿಷಬ್ ರನ್ನು ಕೊಂಡಾಡುತ್ತಿದ್ದು, ಪರೋಕ್ಷವಾಗಿ ಡಾಲಿಗೆ ಟಾಂಗ್ ಕೊಟ್ಟಿದ್ದಾರೆ..

More News