ಮುಂಬೈ : ಬಹುಭಾಷಾ ನಟಿ ಹನ್ಸಿಕಾ ಹಾಗೂ ಮುಂಬೈ ಮೂಲದ ಉದ್ಯಮಿ ಸೊಹೈಲ್ ಕಥುರಿಯಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ಬಾವಿ ಪತಿ ಪ್ರಪೋಸ್ ಮಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಹನ್ಸಿಕಾ ಅವರ ಮನೆಯಲ್ಲಿ ಈಗಾಗಲೇ ಮದುವೆಯ ಕಳೆ ಆರಂಭಗೊಂಡಿದ್ದು, ಭರದ ಸಿದ್ಧತೆ ನಡೆಯುತ್ತಿದೆ. ಅದರ ನಡುವೆ ಬಾವಿ ಪತಿಯೊಂದಿಗಿನ ಫೋಟೋಗಳನ್ನು ಹಂಚಿಕೊಂಡಿರುವ ನಟಿ ಪ್ರಪೋಸ್ ಮಾಡಿದ ಬಗೆಯನ್ನು ಶೇರ್ ಮಾಡಿದ್ದಾರೆ. ಆ ಮೂಲಕ ಇಬ್ಬರೂ ದಂಪತಿಗಳಾಗುವ ಸಮಯಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿರುವ ಬಿಂದಾಸ್ ಚಿತ್ರದಲ್ಲಿ ನಟಿಯಾಗಿ ಅಭಿನಯಿಸಿದ್ದಾರೆ. ಆ ಸಂದರ್ಭದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು ಹನ್ಸಿಕಾ. ಅದಾದ ಮೇಲೆ ಹಲವಾರು ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾವಿ ಪತಿಯ ಫೋಟೋ ಹಂಚಿಕೊಂಡು ನಟಿಯ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಭಾವಿ ಪತಿ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೊಹೈಲ್ ಅವರು ಮುಂಬಯಿನಲ್ಲಿ ಉದ್ಯಮಿ. ಪ್ರೇಮ ವಿವಾಹ ಎನ್ನಲಾಗುತ್ತಿದ್ದು, ಹೈಫಿಲ್ ಟವರ್ ಬಳಿ ಮಂಡಿಯೂರಿ ರೊಮ್ಯಾಂಟಿಕ್ ಆಗಿ ನಟಿಗೆ ಮ್ಯಾರಿ ಮೀ ಎಂದು ಪ್ರಪೋಸ್ ಮಾಡಿದ್ದಾರೆ. ಹನ್ಸಿಕಾ ಕೂಡ ಖುಷಿಯಿಂದ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ಈ ಜೋಡಿಯ ರೊಮ್ಯಾಂಟಿಕ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮ ಡಿ.3 ರಂ ನಡೆಯಲಿದೆ. ಬಳಿಕ ಕುಟುಂಬದವರು, ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ರಾಜಸ್ತಾನದ ಫೇಮಸ್ ಅರಮನೆಯಲ್ಲಿ ಹಾಗೂ ಮುಂಡೋಟಾ ಕೋಟೆಯಲ್ಲಿ ಮದುವೆ ನಡೆಯಲಿದೆ.
#hansika #actress #suhail #marraige proposal #social media #uploaded