KEMPE GOWDA’S RATH YATRA: ಕೋಲಾರದ ಬಂಗಾರಪೇಟೆಯಲ್ಲಿ ಕೆಂಪೇಗೌಡರ ರಥಯಾತ್ರೆಗೆ ಅದ್ಧೂರಿ ಚಾಲನೆ

ಕೋಲಾರ: ನವೆಂಬರ್ 11 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಹಾಗಾಗಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಎರಡು ದಿನಗಳ ಕಾಲ ಪುಣ್ಯ ಕ್ಷೇತ್ರದಲ್ಲಿ ಮಣ್ಣನ್ನು ಸಂಗ್ರಹಿಸಲಾಗುವುದು ಎಂದು ಬಿಜೆಪಿ ಮುಖಂಡ ಕೆ.ಚಂದ್ರಾರೆಡ್ಡಿ ಹೇಳಿದರು.

ರಾಜ್ಯ ಬಿಜೆಪಿ ಸರ್ಕಾರವು ಕೆಂಪೇಗೌಡರ ರಥಯಾತ್ರಯಂತ ಒಳ್ಳೆಯ ಕಾರ್ಯಕ್ರಮ ಮಾಡುತ್ತಿದೆ. ಈಗಾಗಲೇ ಬಂಗಾರಪೇಟೆ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ರಥಯಾತ್ರೆಗೆ ಚಾಲನೆ ನೀಡಲಾಗಿದೆ. ಕೆಂಪೇಗೌಡರು ಒಂದು ಜಾತಿಗೆ ಸೀಮಿತವಾಗಿಲ್ಲ. ಅವರ ವಿಚಾರಧಾರೆಗಳು ಪ್ರತೀ ಗ್ರಾಮಗಳಿಗೂ ತಲುಪಬೇಕು. ಅದಕ್ಕಾಗಿಯೇ ಕೆಂಪೇಗೌಡರ ರಥಯಾತ್ರೆ ಹಳ್ಳಿ ಹಳ್ಳಿಗೂ ಸಂಚರಿಸುತ್ತಿದೆ ಎಂದರು.

ಕೆಂಪೇಗೌಡರ ಪಲ್ಲಕ್ಕಿಯನ್ನೂ ಸಹ ವಿಶೇಷವಾಗಿ ಅಲಂಕರಿಸಲಾಗಿದ್ದು, ಇನ್ನು ಕಾರ್ಯಕ್ರಮಕ್ಕೆ ಮಂಗಳೂರಿನಿಂದ ವಿಶೇಷವಾಗಿ ಚೆಂಡೆ ಬಳಗವನ್ನು ಕರೆಸಲಾಗಿತ್ತು. ತಮಟೆ ಸದ್ದಿಗೆ ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ಅವರು ಬಿಜೆಪಿ ಮುಖಂಡರ ಜೊತೆ ಸೇರಿ ಸ್ಟೆಪ್ಸ್ ಹಾಕಿದರು.

More News