TIRUPATI TEMPLE: 10 ಟನ್ ಬಂಗಾರ ಮತ್ತು ₹2.26 ಲಕ್ಷ ಕೋಟಿ ಒಡೆಯ ತಿರುಪತಿ ತಿಮ್ಮಪ್ಪ: ಆಸ್ತಿ ಘೋಷಣೆ ಶ್ವೇತಪತ್ರ ಹೊರಡಿಸಿದ ಟಿಟಿಡಿ..!

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಮಿತಿಯು ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ದು, ಸ್ಥಿರ ಠೇವಣಿ ಮತ್ತು ಚಿನ್ನದ ಠೇವಣಿ ಸೇರಿದಂತೆ ತನ್ನ ಆಸ್ತಿಯ ಪಟ್ಟಿಯನ್ನು ಘೋಷಿಸಿದೆ. ಪ್ರಸ್ತುತ ಟ್ರಸ್ಟ್ ಬೋರ್ಡ್ ತನ್ನ ಹೂಡಿಕೆ ಮಾರ್ಗಸೂಚಿಗಳನ್ನು 2019ರಿಂದ ಬಲಪಡಿಸಿದೆ ಎಂದು ಟಿಟಿಡಿ ತನ್ನ ಘೋಷಣೆಯಲ್ಲಿ ತಿಳಿಸಿದೆ.

ಟಿಟಿಡಿ ಅಧ್ಯಕ್ಷರು ಹೆಚ್ಚುವರಿ ಹಣವನ್ನು ಆಂಧ್ರಪ್ರದೇಶ ಸರ್ಕಾರದ ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ ಎಂಬ ಸಾಮಾಜಿಕ ಮಾಧ್ಯಮ ವರದಿಗಳನ್ನು ಟ್ರಸ್ಟ್ ನಿರಾಕರಿಸಿದ್ದು, ಟಿಟಿಡಿಯ ಹೆಚ್ಚುವರಿ ಮೊತ್ತವನ್ನು ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಟಿಟಿಡಿ, ಇಂತಹ ಪಿತೂರಿ ಮತ್ತು ಸುಳ್ಳು ಪ್ರಚಾರಗಳನ್ನು ನಂಬಬೇಡಿ ಎಂದು ಭಕ್ತರಲ್ಲಿ ವಿನಂತಿ ಮಾಡಿಕೊಂಡಿದೆ. ಟಿಟಿಡಿ ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿದ ನಗದು ಮತ್ತು ಚಿನ್ನದ ಠೇವಣಿಗಳನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 5,300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 10.3 ಟನ್‌ ಚಿನ್ನದ ಠೇವಣಿ ಇದೆ. ಅಲ್ಲದೇ ಒಟ್ಟು 15,938 ಕೋಟಿ ರೂ. ನಗದು ಠೇವಣಿ ಹೊಂದಿದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ಟ್ರಸ್ಟ್ ಹಂಚಿಕೊಂಡ ಬ್ಯಾಂಕ್‌ವಾರು ಹೂಡಿಕೆಯ ಪ್ರಕಾರ, ಟಿಟಿಡಿ 2019ರಲ್ಲಿ 7,339.74 ಟನ್ ಚಿನ್ನದ ಠೇವಣಿ ಹೊಂದಿದೆ. ಕಳೆದ ಮೂರು ವರ್ಷಗಳಲ್ಲಿ 2.9 ಟನ್‌ ಚಿನ್ನ ಸೇರ್ಪಡೆಗೊಂಡಿದೆ ಎನ್ನಲಾಗಿದೆ. ದೇವಾಲಯದ ಆಸ್ತಿಗಳು ಭಾರತದಾದ್ಯಂತ 7,123 ಎಕರೆಗಳಲ್ಲಿ ಹರಡಿರುವ 960 ಆಸ್ತಿಗಳನ್ನು ಒಳಗೊಂಡಿವೆ ಎಂದು ಹೇಳಲಾಗಿದೆ.

ಟಿಟಿಡಿ ನಿಯಮಗಳ ಪ್ರಕಾರ ಎಚ್1 ಬಡ್ಡಿದರದಲ್ಲಿ ಮಾತ್ರ ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಿದೆ. ದೇವಸ್ಥಾನದ ಆದಾಯವು ಭಕ್ತರು, ವ್ಯಾಪಾರಗಳು ಮತ್ತು ಸಂಸ್ಥೆಗಳ ದೇಣಿಗೆಯಿಂದ ಬರುತ್ತದೆ.

ಟಿಟಿಡಿ ತನ್ನ ಆಸ್ತಿಯ ಒಟ್ಟು ಮೌಲ್ಯವನ್ನು 2.26 ಲಕ್ಷ ಕೋಟಿ ರೂ. ಇದ್ದು, ದೇವಾಲಯದ ಟ್ರಸ್ಟ್ ನ ನಿವ್ವಳ ಮೌಲ್ಯ 2.26 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮರೆಡ್ಡಿ ತಿಳಿಸಿದ್ದಾರೆ.

2019ರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಟಿಟಿಡಿಯು ಸ್ಥಿರ ಠೇವಣಿಗಳ ರೂಪದಲ್ಲಿ 13,025 ಕೋಟಿ ರೂ. ಹೂಡಿಕೆ ಮಾಡಿದ್ದು, ಅದು ಈಗ 15,938 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಹೂಡಿಕೆಯು 2,900 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಎಂದು ಎವಿ ಧರ್ಮ ರೆಡ್ಡಿ ಮಾಹಿತಿ ನೀಡಿದ್ದಾರೆ.

More News