Chowdeswri Devi: ಶ್ರೀಚೌಡೇಶ್ವರಿ ಅಮ್ಮನವರ 4ನೇ ವರ್ಷದ ವಾರ್ಷಿಕೋತ್ಸವ..!

ಶ್ರೀ ಚೌಡೇಶ್ವರಿ ಅಮ್ಮನವರ 4ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯ್ತು. ಬೆಂಗಳೂರಿನ ಯಶವಂತಪುರ ವಿಧಾನಸಭಾ ವ್ಯಾಪ್ತಿಯ ಅಂದ್ರಹಳ್ಳಿಯ, ರಾಮಸ್ವಾಮಿ ಬಡಾವಣೆಯಲ್ಲಿರುವ ಅರ್ಚಕರಾದ ಶ್ರೀಗೋಪಿನಾಥ್ ಅವರ ಮನೆಯಲ್ಲಿ ಸುಮಾರು ಎರಡು ದಶಕಗಳಿಂದ ತಾಯಿ ಚೌಡೇಶ್ವರಿ ನೆಲೆಸಿದ್ದಾಳೆ. ಪ್ರತಿದಿನ ನೂರಾರು ಭಕ್ತರು ತಾಯಿಯ ದರ್ಶನ ಪಡೆದು ಇಷ್ಟಾರ್ಥಗಳನ್ನ ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ.

ಈ ತಾಯಿಯನ್ನ ಭಕ್ತಿಯಿಂದ ನೆನೆದವರಿಗೆ ಕಷ್ಟಗಳನ್ನ ಗೋಡೆಯ ಮೇಲೆ ಬೆರದು ತೋರಿಸುತ್ತಾಳೆ. ತಾಯಿಯ ವಿಗ್ರಹವನ್ನು ಭಕ್ತಾಧಿಗಳು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ಅಭಿಷೇಕ, ಹೋಮ ಮತ್ತು ವಿಶೇಷ ಪೂಜೆಗಳನ್ನ ಮಾಡಿಸಿದ್ರೆ  ನಿಮ್ಮ ಕಷ್ಟಗಳನ್ನ ದೂರ ಮಾಡುತ್ತಾಳೆ ಎಂದು ಭಕ್ತಾಧಿಗಳು ಹೇಳುತ್ತಾರೆ.

ಇನ್ನು ಭಕ್ತಿಯಿಂದ ತಾಯಿಯ ವಿಗ್ರಹವನ್ನು ಮೇಲೆಕ್ಕೆ ಎತ್ತಿದರೆ ವಿಗ್ರಹವನ್ನು ಎತ್ತಬಹುದು. ಆದ್ರೆ ಭಕ್ತಿ ಇಲ್ಲದೆ ವಿಗ್ರವನ್ನು ಎತ್ತಲು ಸಾಧ್ಯವಾಗುವುದಿಲ್ಲ ಎಂದು ಭಕ್ತ ರಮೇಶ್ ತಮ್ಮ ಅನುಭವಗಳನ್ನ ಹೇಳುತ್ತಾರೆ. ಅಲ್ಲದೆ ಈ ತಾಯಿಯನ್ನ ನಂಬಿದ ಕ್ಷಣದಿಂದಲೂ ನಮಗೆ ಆರೋಗ್ಯ ಉತ್ತಮವಾಗಿದೆ, ಅಂದುಕೊಂಡ ಕೆಲಸಗಳು ಸಕಾಲಕ್ಕೆ ಆಗುತ್ತಿವೆ. ಯಾವುದೇ ತೊಂದರೆ ಇಲ್ಲದೆ ನಮ್ಮ ಜೀವನ ನೆಮ್ಮದಿಯಿಂದ ಸಾಗುತ್ತಿದೆ ಎನ್ನುತ್ತಾರೆ ರಮೇಶ್.. ಇನ್ನು ತಾಯಿ ಪವಾಡಗಳು ಹೇಳ ತೀರದು ಎಂದು ಭಕ್ತರಾದ ಲಕ್ಷೀನರಸಿಂಹಸ್ವಾಮಿ ಅವರು ತಮ್ಮ ಅನುಭವದ ಮಾತುಗಳನ್ನ ಹೇಳುತ್ತಾರೆ.

ಭಗವತಿ ಚೌಡೇಶ್ವರಿ ದೇವಿ ಅಂದ್ರೆ ಮಹಾನ್ ಶಕ್ತಿ..ಈ ತಾಯಿಯ ಮೂಲ ನಂದಾವನಂ.. ಈ ತಾಯಿ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವುದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ದಸರಿಘಟ್ಟ ಕ್ಷೇತ್ರದಲ್ಲಿ. ಭಕ್ತರು ಹೇಳುವ ಪ್ರಕಾರ, ನಮ್ಮ ಪೂರ್ವಜರ ಕಾಲದಿಂದಲೂ ಈ ತಾಯಿಯ ಸೇವೆ ಮಾಡುತ್ತಾ ಬಂದಿದ್ದೇವೆ. ಹೃದಯ ಘಾತವಾಗಿದ್ದ ನಮ್ಮ ತಾಯಿಗೆ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ರು ಗುಣಮುಖರಾಗಿಲ್ಲ. ಆದ್ರೆ. ಚೌಡೇಶ್ವರಿ ದೇವಿಗೆ ಬಂದು ಭಕ್ತಿಯಿಂದ ಪೂಜೆ ಸಲ್ಲಿಸಿದ್ದಕ್ಕೆ ನಮ್ಮ ತಾಯಿ ಬದುಕುಳಿದರು ಎಂದು ಭಕ್ತರಾದ ಲಕ್ಷೀನರಸಿಂಹಸ್ವಾಮಿ ಅವರು ತಮಗಾದ ಅನುಭವದ ಮಾತುಗಳನ್ನ ಹೇಳುತ್ತಾರೆ.

ಮುಂದುವರೆದಂತೆ ದಸರಿಘಟ್ಟ ಕ್ಷೇತ್ರದಲ್ಲಿ ಚೌಡೇಶ್ವರಿ ಜಾತ್ರೆಯ ವೇಳೆಯಲ್ಲಿ ಸುಮಾರು 10 ಅಡಿ ಎತ್ತರಕ್ಕೆ ಕಾರೆ ಮುಳ್ಳು ಹಾಕಿ ಅದರ ಮೇಲೆ ಭಕ್ತರು ಚೌಡೇಶ್ವರಿ ಅಮ್ಮನವರನ್ನ ಹೊತ್ತು ಮೆರವಣಿಗೆ ಮಾಡುತ್ತಾರೆ. ಆದ್ರೆ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಇದೆಲ್ಲ ಈ ತಾಯಿಯ ಮಹಿಮೆ ಎಂದು ತಮ್ಮ ಅನುಭವದ ಮಾತುಗಳನ್ನ ಹೇಳುತ್ತಾರೆ ಭಕ್ತಾಧಿಗಳು

More News