ಬಹುಭಾಷ ನಟಿ ಸಮಂತಾ ಅವರು ಮಯೋಸೈಟಿಸ್ ಎಂಬ ಸ್ನಾಯು ರೋಗದಿಂದ ಬಳಲುತ್ತಿದ್ದಾರೆ. ಇತ್ತೀಚಿಗೆ ನಟಿ ಸಮಂತಾ ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇವರ ಮಾತನ್ನ ಕೇಳಿದ ಚಿತ್ರರಂಗದ ಪ್ರಮುಖ ನಟ ನಟಿಯರು, ಅಭಿಮಾನಿಗಳು ಸಮಂತಾ ಅವರಿಗೆ ಧೈರ್ಯ ಹೇಳುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸಮಂತಾ ನಾನು ಮಯೋಸೈಟಿಸ್ ಕಾಯಿಲೆಯನ್ನ ವಿರುದ್ಧ ಹೋರಾಡತ್ತಿದ್ದು, ಅದನ್ನ ಆದಷ್ಟು ಬೇಗ ಹಿಮ್ಮೆಟ್ಟಿಸುತ್ತೇನೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

‘ಯಶೋದ’ ಸಿನಿಮಾ ಪ್ರಚಾರಕ್ಕಾಗಿ ನೀಡಿದ ತಮಿಳು, ತೆಲುಗು ಸಂದರ್ಶನಗಳಲ್ಲಿ ಸಮಂತಾ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಪ್ರಪಂಚದಲ್ಲಿ ಮಯೋಸೈಟಿಸ್ ರೋಗವನ್ನು ಸಾಕಷ್ಟು ಜನ ಸಮರ್ಥವಾಗಿ ಎದುರಿಸುತ್ತಿದ್ದಾರೆ ಎಂದು ಸಮಂತಾ ಹೇಳಿದ್ದಾರೆ. ತಾನು ಕೂಡ ಇದನ್ನು ಎದುರಿಸಿದ್ದೇನೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡುತ್ತಾ ಆಕೆ ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು. ಶೀಘ್ರದಲ್ಲೇ ನಾನು ಇದರಿಂದ ಹೊರ ಬರುತ್ತೇನೆ. ನಾನು ಶೀಘ್ರದಲ್ಲೇ ಸಾಯುವುದಿಲ್ಲ ಎಂದು ಸಮಂತಾ ಹೇಳಿಕೊಂಡಿದ್ದಾರೆ.

ನಾನು ಈಗಲೇ ಸಾಯುವುದಿಲ್ಲ ಎಂದ ಸಮಂತಾ
ನಟಿ ಸಮಂತಾ “ಈಗ ಮೂರು ತಿಂಗಳಾಯಿತು. ಅಂದಿನಿಂದಲೂ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಶೀಘ್ರದಲ್ಲೇ ಸಾಯುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನನಗೆ ಪ್ರಾಣಾಪಾಯವಿದೆ, ಬದುಕಲ್ಲ ಅಂತೆಲ್ಲಾ ಏನೇನೋ ಸುದ್ದಿ ಹರಿದಾಡಿತು. ಇಲ್ಲ ನಾನು ಸದ್ಯದಲ್ಲಿ ಸಾಯುವುದಿಲ್ಲ. ಇದು ಅಟೊ ಇಮ್ಯೂನ್ ಕಂಡೀಷನ್. ಇದು ಬರಿದಾಗುತ್ತಿದೆ ಮತ್ತು ದಣಿದಿದೆ. ನಾನು ಹೋರಾಟಗಾರ್ತಿ, ಹೋರಾಡುತ್ತಲೇ ಇರುತ್ತೀನಿ” ಎಂದು ಸಮಂತಾ ಮತ್ತೊಂದು ಸಂದರ್ಶನದಲ್ಲಿ ಹೇಳಿದ್ದಾರೆ.

ನಟಿ ಸಮಂತಾ ನಟನೆಯ ‘ಯಶೋದ’ ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ‘ಶಾಕುಂತಲಂ’ ಎನ್ನುವ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲೂ ಆಕೆ ನಟಿಸಿದ್ದು, ಅದು ಕೂಡ ಬಿಡುಗಡೆಗೆ ಸಿದ್ಧವಾಗಿದೆ. ವಿಜಯ್ ದೇವರಕೊಂಡ ಜೊತೆ ‘ಖುಷಿ’ ಎನ್ನುವ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅನಾರೋಗ್ಯದ ಕಾರಣ ಆ ಸಿನಿಮಾ ಶೂಟಿಂಗ್ ಮುಂದೂಡಲಾಗಿದೆ ಎನ್ನಲಾಗುತ್ತಿದೆ.