ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಿ-20 ಶೃಂಗಸಭೆಯ ಅಧ್ಯಕ್ಷತಾ ಅವಧಿಯ ಲಾಂಛನ, ಥೀಮ್ ಮತ್ತು ವೆಬ್‌ಸೈಟ್‌ಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಿದರು. ಇವುಗಳು ದೇಶದ ಸಂದೇಶ ಮತ್ತು ಜಗತ್ತಿಗೆ ಹೆಚ್ಚಿನ ಆದ್ಯತೆಗಳು ಏನು ಎಂಬುದನ್ನು ಬಿಂಬಿಸುತ್ತವೆ ಎಂದು ಅವರು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

One Earth, One Family, One Future. pic.twitter.com/Gvg4R3dC0O
— PMO India (@PMOIndia) November 8, 2022
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು, G20 ಲೋಗೋ ಮತ್ತು ಥೀಮ್ ವಿಚಾರದಲ್ಲಿ ಸಾವಿರಾರು ಜನರು ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಇದು ನನಗೆ ಸಂತೋಷ ನೀಡಿದೆ ಎಂದು ಪ್ರಧಾನಿ ಹೇಳಿದರು. G20 ಅಧ್ಯಕ್ಷತೆಯ ಅವಧಿಯಲ್ಲಿ, ಭಾರತದಾದ್ಯಂತ ಅನೇಕ ಸ್ಥಳಗಳಲ್ಲಿ 32 ವಿವಿಧ ವಲಯಗಳ ಸುಮಾರು 200 ಸಭೆಗಳನ್ನು ಭಾರತವು ನಡೆಸಿಕೊಡಲಿದೆ ಎನ್ನಲಾಗುತ್ತಿದೆ.