SHANKAR NAG HAPPY BIRTHDAY TO YOU: ಚಿತ್ರರಂಗದ ಏಳಿಗೆಗಾಗಿ ದುಡಿದ ಆಟೋ ರಾಜಾ ಶಂಕರ್ ನಾಗ್ ಗೆ 68 ರ ಸಂಭ್ರಮ

ಅತಿ ಸಣ್ಣ ವಯಸ್ಸಿನಲ್ಲಿಯೇ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ, ಹಲವಾರು ಸಾಧನೆಗಳನ್ನು ಕಂಡ ಹಾಗೂ ಆಧುನಿಕ ಕರ್ನಾಟಕದ ಕನಸು ಕಂಡವರಲ್ಲಿ ಒಬ್ಬರಾದ ಶಂಕರ್ ನಾಗ್ ಅವರಿಗೆ ಇದೀಗ 68 ನೇ ವರ್ಷದ ಜನ್ಮದಿನ. ಈ ದಿನವನ್ನು ಸಂಭ್ರಮಿಸಲು ಅವರಿಲ್ಲದಿದ್ದರೂ ಅಭಿಮಾನಿಗಳು, ಹಿತೈಷಿಗಳು ಶುಭಾಶಯ ಕೋರಿ ವಿಭಿನ್ನ ರೀತಿಯಲ್ಲಿ ಶಂಕರ್ ನಾಗ್ ರ ಹುಟ್ಟಿದ ದಿನವನ್ನು ಆಚರಿಸುತ್ತಿದ್ದಾರೆ.
ಶಂಕರ್ ನಾಗ್ ಉತ್ತರ ಕನ್ನಡದ ಹೊನ್ನಾವರದಲ್ಲಿ 1954 ರಲ್ಲಿ ಜನಿಸಿದರು. ಕರಾವಳಿಯವರಾದರೂ ಸಹ ಮರಾಠಿ ಭಾಷೆಯ ನಾಟಕಗಳಿಂದ ಬಣ್ಣದ ಲೋಕದ ಪ್ರಭಾವಕ್ಕೆ ಒಳಗಾದವರು ಶಂಕರ್ ನಾಗ್. ಅನಂತರ ಒಂದಾನೊಂದು ಕಾಲದಲ್ಲಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ಮುಂದೆ ಹಲವು ಪ್ರಯೋಗಗಳನ್ನು ಮಾಡಿದರು.
ಸಿನಿಮಾದಲ್ಲಿ ನಟಿಸುತ್ತಲೇ ನಿರ್ಮಾಣ ಹಾಗೂ ನಿರ್ದೇಶನದ ಕಡೆಗೆ ಹೆಜ್ಜೆಯನ್ನಿಟ್ಟರು. ಮಿಂಚಿನ ಓಟ ಸಿನಿಮಾವನ್ನು ಮೊದಲ ಬಾರಿಗೆ ನಿರ್ದೇಶಿಸಿ ನಿರ್ಮಾಣ ಮಾಡಿದರು. ಇದು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗುತ್ತಿದ್ದಂತೆಯೇ ಜನ್ಮ ಜನ್ಮದ ಅನುಬಂಧ, ಗೀತಾ ಸೇರಿ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದರು. ಅಲ್ಲದೆ, ಇದರ ಜೊತೆ ಜೊತೆಗೆ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಅಂದಿನ ಕಾಲದಲ್ಲೇ ಒಂದು ಮುತ್ತಿನ ಕಥೆ ಫಿಲ್ಮ್ ನಲ್ಲಿ ಅಂಡರ್ ವಾಟರ್ ಶೂಟಿಂಗ್ ಮಾಡಲಾಗಿತ್ತು. ವಿದೇಶಿ ಸಿನಿಮಾಗಳ ಕಡೆಗೆ ಆಕರ್ಷಿತರಾದ ಶಂಕರ್ ನಾಗ್ 1990 ರ ವೇಳೆಯಲ್ಲಿ ವಿದೇಶಿ ತಂತ್ರಜ್ಞಾನವನ್ನು ಕನ್ನಡ ಸಿನಿಮಾಗಳಲ್ಲಿ ತರಬೇಕೆಂದು ಆಲೋಚಿಸಿದ್ದರು. ಈ ಸಂಬಂಧ ಇಟಲಿಯಲ್ಲಿ ನಡೆದ ಸಿನಿಮೋತ್ಸವದಲ್ಲಿ ಪಾಲ್ಗೊಂಡರು, ನಂತರ ಇಂಗ್ಲೆಂಡ್ ಗೆಬಹೋಗಿ ಅಲ್ಲಿನ ಟೆಕ್ನಾಲಜಿ ಕಂಪನಿಗಳ ಜೊತೆ ಮಾತುಕತೆ ನಡೆಸಿದರು.

ಈ ವೇಳೆಯಲ್ಲಿ ಪ್ಯಾನ್​ ಇಂಡಿಯಾ ಸಿನಿಮಾ ಬಗ್ಗೆ ಯೋಚಿಸಿದ್ದರು. ಚಿತ್ರರಂಗದ ಏಳ್ಗೆ ಹಾಗೂ ಕರ್ನಾಟಕದ ಅಭಿವೃದ್ಧಿ ಬಗ್ಗೆ ಶಂಕರ್ ನಾಗ್ ಅವರು ಕನಸು ಕಂಡಿದ್ದರು ಹಾಗೂ ಶಂಕರ್ ನಾಗ್ ಅವರು ಮೆಟ್ರೋವನ್ನು ಕರ್ನಾಟಕಕ್ಕೆ ತರಬೇಕು ಎಂದು ಆಗಲೇ ಆಲೋಚಿಸಿದ್ದರು. ಅವರನ್ನು ಕರ್ನಾಟಕದ ಜನತೆ ಈಗಲೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

#shankarnag #happy birthday #metro #dream project #fans #celebrating birthday

More News