PM MODI IN KARNATAKA: ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ..ಏನೇನು ಕಾರ್ಯಕ್ರಮ..? ಸಂಪೂರ್ಣ ಮಾಹಿತಿ

ಕನ್ನಡಿಗರ ಹೆಮ್ಮೆಯ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದ್ದು ಅಭೂತಪೂರ್ವ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಲಿದ್ದಾರೆ.

ಸ್ಟೇಟ್‌ ಆಫ್‌ ಪ್ರಾಸ್ಪರೆಟಿ ಹೆಸರಿನಲ್ಲಿ ನಿರ್ಮಿಸಲಾದ ಕೆಂಪೇಗೌಡ ಪ್ರತಿಮೆಯು ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಸೇರಿದೆ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಅನುಸಾರ ಮೊದಲ ಹಾಗೂ ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಅನಾವರಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿ ಪ್ರತಿಮೆ ಮತ್ತು ಟರ್ಮಿನಲ್ ೨ ಅನಾವರಣ ಮಾಡಲಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಮೊದಲಿಗೆ 10-32 ಕ್ಕೆ ಶಾಸಕರ ಭವನದ ಬಳಿ ಇರುವ ವಾಲ್ಮೀಕಿ , ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ 10-50 ಕ್ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ತೆರಳಿ ವಂದೆ ಭಾರತ್ ರೈಲಿಗೆ ಹಸಿರು ನಿಶಾನೆ ನೀಡಲಿದ್ದಾರೆ. 11-50 ಕ್ಕೆ ಕೆಂಪೇಗೌಡ ಟರ್ಮಿನಲ್ ೨ ಉದ್ಘಾಟನೆ ನಡೆಸಲಿದ್ದಾರೆ. ಮಧ್ಯಾನ್ಹ 12-24 ರಿಂದ 12-27 ಕೆಂಪೇಗೌಡ 108 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ. 12-55 ಕ್ಕೆ ಸಾರ್ವಜನಿಕ ಸಮಾವೇಶ ತಲುಪಿ 1-35 ಕ್ಕೆ ಮೋದಿ ಭಾಷಣ ಆರಂಭ ಮಾಡಲಿದ್ದಾರೆ.

ಪ್ರತಿಮೆಯ ವಿಶೇಷತೆಗಳೇನೇನು..?

ಪ್ರತಿಮೆಯ ವಿಶೇಷತೆಗಳನ್ನು ನೋಡುವುದಾದ್ರೆ.ಒಟ್ಟು 64 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ವಾಗಿದೆ.98 ಟನ್ ಕಂಚು,12೦ ಟನ್ ಉಕ್ಕು ಬಳಸಿ ನಿರ್ಮಿಸಿರುವ ಪ್ರತಿಮೆ. ಕೆಂಪೇಗೌಡ ಕೈಯಲ್ಲಿರುವ ಖಡ್ಗ 4 ಸಾವಿರ ಕೆಜೆ ತೂಕ ಇರುವುದು ವಿಶೇಷ.

ಹೇಗಿದೆ ಬಂದೋಬಸ್ತ್..? :

ಹಾಗೆ ಕೆಂಪೇಗೌಡ ಪ್ರತಿಮೆಯ ಸ್ಥಳದಿಂದ ಸುಮಾರು 2 km ದೂರ ದಲ್ಲಿ ಸಮಾವೇಶದ ಸ್ಥಳವಿದ್ದು.ಸುಮಾರು ಎರಡುವರೆ ಲಕ್ಷ ಜನ ಸಮಾವೇಶಕ್ಕೆ ಸೇರುವ ನಿರೀಕ್ಷೆ ಇದೆ. ಈ ಕುರಿತಂತೆ ಸೂಕ್ತ ವ್ಯವಸ್ಥೆ ಹಾಗೂ ಬಂದೋಬಸ್ತ್ ಸಂಬಂಧ ಸಿಎಂ ಖುದ್ದು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದು,ಪ್ರಧಾನಿ ಆಗಮಿಸುತ್ತಿರುವ ಹಿನ್ನೆಲೆ ಎಸ್ಪಿಜಿ ಹಾಗೂ ರಾಜ್ಯ ಪೊಲೀಸ್ ವಿಶೇಷ ಭದ್ರತೆಯನ್ನು ವಹಿಸಲಾಗಿದೆ.

ವೇದಿಕೆ ಮೇಲೆ‌ 25 ಗಣ್ಯರಿಗೆ ಮಾತ್ರ ಅವಕಾಶ :

ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಜೊತೆ ಒಟ್ಟು 25 ಗಣ್ಯರಿಗೆ ಅವಕಾಶ ನೀಡಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ನಿರ್ಮಲಾ ನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಅಶ್ವಿನಿ ವೈಷ್ಣವ್, ರಾಜೀವ್ ಚಂದ್ರಶೇಖರ, ಭಗವಂತ್ ಖೂಬಾ, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಸಚಿವರಾದ ಆರ್.‌ ಅಶೋಕ, ಡಾ. ಅಶ್ವಥ್ ನಾರಾಯಣ, ವಿ. ಸೋಮಣ್ಣ, ಡಾ. ಸುಧಾಕರ್, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ, ನಾರಾಯಣ ಗೌಡ, ಕೆ. ಗೊಪಾಲಯ್ಯ, ಆರಗ ಜ್ಞಾನೇಂದ್ರ, ಮುನಿರತ್ನ, ಸುನೀಲ್ ಕುಮಾರ್, ಎಂಟಿಬಿ ನಾಗರಾಜ್, ಸಂಸದರಾದ ಡಿ.ವಿ. ಸದಾನಂದ ಗೌಡ ಮತ್ತು ಬಿ.ಎನ್. ಬಚ್ಚೇಗೌಡ ಭಾಗಿಯಾಗಲಿದ್ದಾರೆ.

More News