ಬಹುಭಾಷೆಗಳಲ್ಲಿ ಅಬ್ಬರಿಸಿದ ಕಾಂತಾರ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆಯೇ ಸಿನಿಮಾದ ಹಾಡೊಂದು ವಿವಾದಕ್ಕೀಡಾಗಿತ್ತು. ಇದರ ಮಧ್ಯೆ ಕೇರಳದಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ನಿನ್ನೆಯಿಂದ ವರಾಹ ರೂಪಂ ಹಾಡು ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಿಂದ ತೆಗೆದು ಹಾಕಲಾಗಿದೆ.
ಇಡೀ ದೇಶದಾದ್ಯಂತ ಕಾಂತಾರ ಸಿನಿಮಾ ಅಬ್ಬರಿಸಿದೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಕೆಜಿಎಫ್ 2 ಬಿಟ್ಟರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಯಾವುದೇ ಸಿನಿಮಾ ಇಷ್ಟರ ಮಟ್ಟಿಗೆ ಪ್ರಸಾರ ಆಗಿರಲಿಲ್ಲ. ಸಿನಿಮಾ ಜನಮೆಚ್ಚುಗೆ ಪಡೆಯುತ್ತಿರುವಂತೆಯೇ ಅಡ್ಡಿಯೂ ಬರತೊಡಗಿದವು.
ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಕಂಪನಿ ಮತ್ತು ಕಪ್ಪ ಟಿವಿ ನವರಸಮ್ ಎಂಬ ಆಲ್ಬಂ ಹಾಡಿನ ಟ್ಯೂನ್ ಅನ್ನು ಕಾಂತಾರ ಚಿತ್ರದ ವರಾಹ ರೂಪಂ ಹಾಡಿನಲ್ಲಿ ಕಾಪಿ ಮಾಡಲಾಗಿದೆ ಎಂದು ಅಪಾದಿಸಲಾಯಿತು. ಅದಾದ ಮೇಲೆ ಆ ತಂಡವು ಸಿನಿಮಾ ವಿರುದ್ಧವಾಗಿ ಕೇರಳದ ಸ್ಥಳೀಯ ನ್ಯಾಯಾಲಯದಲ್ಲಿ ಕೇಸ್ ಹಾಕಿದರು. ಆಗ ನ್ಯಾಯಾಲಯವು ವರಾಹ ರೂಪಂ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂದು ನೋಟಿಸ್ ನೀಡಿತ್ತು.

ಇದೆಲ್ಲದರ ನಡುವೆಯೂ ಹೊಂಬಾಳೆ ಫಿಲ್ಮ್ಸ್ ವರಾಹ ರೂಪಂ ಹಾಡನ್ನು ತೆಗೆದು ಹಾಕಿರಲಿಲ್ಲ, ಆದರೆ ಇದೀಗ ಇನ್ನು ಮಾತೃಭೂಮಿ ಕಪ್ಪ ಟಿವಿ ಚಾನೆಲ್ ಮಾಡಿದ ಕಾಪಿ ರೈಟ್ ಕ್ಲೈಮ್ ಕಾರಣದಿಂದ ಹಾಡನ್ನು ತೆಗೆದು ಹಾಕಲಾಗಿದೆ ಎಂದು ಯುಟ್ಯೂಬ್ ತೋರಿಸುತ್ತಿದೆ. ಹಾಡನ್ನು ಯೂಟ್ಯೂಬ್ ನಿಂದ ಮಾತ್ರ ತೆಗೆದಿದ್ದು, ಇನ್ನುಳಿದಂತೆ ಆಡಿಯೋ ಅಪ್ಲಿಕೇಶನ್‌ಗಳಾದ ಸ್ಪಾಟಿಫೈ, ಅಮೆಜಾನ್ ಮ್ಯೂಸಿಕ್, ವಿಂಕ್ ಮ್ಯೂಸಿಕ್, ಜಿಯೊ ಸಾವ್ನ್‌ನಲ್ಲಿ ಇನ್ನಿತರ ಕಡೆಗಳಲ್ಲಿ ಹಾಡು ತೆಗೆದಿಲ್ಲ.
#KANTARA FILM #MULTI LANGUAGE #VARAHA ROOPAM SONG #CONTROVERCY #WENT TO COURT #COPY RIGHT #HOMBALE FILMS #DELETED FROM #YOUTUBE




