SIDDU, BSY : ಸೋಲುವ ಭೀತಿಯಿಂದ ಸಿದ್ದರಾಮಯ್ಯ ಬೇರೆ ಕ್ಷೇತ್ರ ಹುಡುಕಾಡುತ್ತಿದ್ದಾರೆ..!

ತುಮಕೂರಿನ ಯಡಿಯೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿ ಹೆಸರಿನಲ್ಲಿ ಕಲ್ಯಾಣ ಮಂಟಪ ಉದ್ಘಾಟಿಸಿದ ಬಿಎಸ್ ವೈ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಬಡವರಿಗಾಗಿ ಒಂದು ಮೈತ್ರಾದೇವಿಯವರ ಹೆಸರಿನಲ್ಲಿ ಒಂದು ಕಲ್ಯಾಣ ಮಂಟಪ ಕಟ್ಟಬೇಕು ಎನ್ನುವ ಕನಸು ತುಂಬಾದಿನಗಳ ಕನಸಾಗಿತ್ತು. ಸಾಂಕೇತಿಕವಾಗಿ ಹಣಕೊಟ್ಟು ಬಡವರು ಮದುವೆ ಕಾರ್ಯಗಳು ಇಲ್ಲಿ ನಡೆಸಿಕೊಳ್ಳಬಹುದು. ಸಾಮೂಹಿಕ ಮದುವೆಗೆಂದು ಈ ಕಲ್ಯಾಣ ಮಂಟಪ ಕಟ್ಟಿಸಲಾಗಿದ್ದು, ಬಡವರಿಗಾಗಿ ವರ್ಷದ 365 ದಿನಗಳಲೂ ಈ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭಗಳು ನಡೆದರೆ ನಮ್ಮ ಸೇವೆ ಸಾರ್ಥಕವಾಗುತ್ತದೆ. ಇದರ ಹಿಂಭಾಗದಲ್ಲಿ ಗೆಸ್ಟ್ ಹೌಸ್ ಕಟ್ಟಲು ತೀರ್ಮಾಣ ಮಾಡಿದ್ದೇವೆ, ಆದ್ರ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸುತ್ತೇವೆ  ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂಪ್ಪ ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇದ್ದ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಯಾಕೆ ಹೋಗ್ತಿದ್ದಾರೆ ಅಂತಾ ನಮಗೆ ಅರ್ಥವಾಗುತ್ತಿಲ್ಲ. ಅಲ್ಲಿ ಒಳ್ಳೆ ಕೆಲಸ ಮಾಡಿದ್ದೇನೆ ಮುಂದೆ ಅಲ್ಲೇ ನಿಂತು ಗೆಲ್ತಿನಿ ಅನ್ನೋ ವಿಶ್ವಾಸ ಇಲ್ಲದೆ ಬೇರೆ ಜಾಗ ಹುಡುಕಾಟ ನಡೆಸುತ್ತಿದ್ದಾರೆ ಅದರ ಬಗ್ಗೆ ನಾನು ಟಿಪ್ಟಣಿ ಮಾಡಲು ಇಷ್ಟಪಡುವುದಿಲ್ಲ ಜನರೇ ಅದನ್ನ ನಿರ್ಧರಿಸುತ್ತಾರೆ ಎಂದು ಬಿ.ಎಸ್.ಯಡಿಯೂಪ್ಪ ಹೇಳಿದ್ರು.

ಮಾಜಿ ಪ್ರಧಾನಿ ದೇವೇಗೌಡರಿಗೆ ಕರೆ ಮಾಡಿ ಸಿಎಂ ಬಸವರಾಜು ಬೊಮ್ಮಾಯಿ ಆಹ್ವಾನಿಸಿದ್ದರು

ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ದೇವೇಗೌಡರಿಗೆ ಆಹ್ವಾನ ನೀಡಿಲ್ಲ ಅನ್ನೋ ವಿಚಾರದ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು,  ನನಗೆ ಗೊತ್ತಿರೋ ಪ್ರಕಾರ ಆಮಂತ್ರಣ ಪತ್ರಿಕೆ ಮಾಡಿರಲಿಲ್ಲ, ವೈಯಕ್ತಿಕವಾಗಿ ಪ್ರತಿಯೊಬ್ಬರಿಗೆ ಪತ್ರ ಬರೆದು ಸಿಎಂ ಬಸವರಾಜ ಬೊಮ್ಮಾಯಿ ಆಹ್ವಾನ ನೀಡಿದ್ದಾರೆ. ಎಸ್.ಎಂ.ಕೃಷ್ಣ ಸೇರಿದಂತೆ ಉಳಿದೆಲ್ಲ ನಾಯಕರು ಕಾರ್ಯಕ್ರಮಕ್ಕೆ ಬಂದಿದ್ರು. ಮಾಜಿ ಪ್ರಧಾನಿ ದೇವೆಗೌಡರಿಗೂ ಪತ್ರ ಬರೆದು ಸಿಎಂ ದೂರವಾಣಿ ಕರೆ ಮಾಡಿಯೂ ಆಹ್ವಾನಿಸಿದ್ದಾರೆ. ಈ ಬಗ್ಗೆ ಅನಗತ್ಯವಾಗಿ ಚರ್ಚೆಯಾಗುತ್ತಿದೆ. ದೇವೇಗೌಡರು ಈ ವಿಚಾರವನ್ನ ವೈಯಕ್ತಿಕವಾಗಿ ತೆಗೆದುಕೊಳ್ಳಲ್ಲ ಅನ್ನೋ ವಿಶ್ವಾಸ ನನಗಿದೆ ಎಂದ ಬಿಎಸ್ ವೈ, ಯಾವ್ದೋ ಕಾರಣಾಂತರಗಳಿಂದ ಅವರಿಗೆ ಬರಲಿಕ್ಕೆ ಆಗಿಲ್ವೇನೋ. ಅದನ್ನ ದೊಡ್ಡದು ಮಾಡೋ ಅವಶ್ಯಕತೆ ಇಲ್ಲ  ಎಂದು   ಬಿ.ಎಸ್.ಯಡಿಯೂರಪ್ಪ ಹೇಳಿದ್ರು.

ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಲು ಕ್ಯಾಬಿನೆಟ್ ಒಪ್ಪಿಗೆ

ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಲು ಕ್ಯಾಬಿನೆಟ್ ಒಪ್ಪಿಗೆ ದೊರೆತಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಅದನ್ನ ಮಾಡುತ್ತಾರೆ. ಯಡಿಯೂರಪ್ಪ ಹಿಂದೂ ಅಲ್ಲ ಅನ್ನೋ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಹಿಂದೂ ಸಮಾಜ ಬಹಳ ದೊಡ್ಡ ಸಮಾಜ. ಮೊದಲು ನಾವೆಲ್ಲರೂ ಹಿಂದೂ, ಆಮೇಲೆ ಜಾತಿ ಮತ್ತು ಉಪಪಂಗಡಗಳು. ಅನಗತ್ಯವಾಗಿ ಇದನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಹಿಂದೂ ಅನ್ನುವಂತದ್ದು ಒಂದು ದೊಡ್ಡ ಸಮೂಹಕ್ಕೆ ಇರುವಂತಹ ಹೆಸರು. ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದ ಬಿಎಸ್ ವೈ, ಹಿಂದೂ ಅಶ್ಲೀಲ ಪದ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರದ  ಬಗ್ಗೆ ನಾನು ಏನನ್ನೂ ಹೇಳಲೂ ಇಷ್ಟಪದಲ್ಲ.

ಕಾಂಗ್ರೆಸ್ ನ 90% ನಾಯಕರು ಕೂಡ ನಾವು ಮೊದಲು ಹಿಂದೂಗಳು ಅನ್ನೋದನ್ನ ಒಪ್ಪಿಕೊಳ್ತಾರೆ. ಇದನ್ನ ಅರ್ಥ ಮಾಡಿಕೊಂಡು ಎಲ್ಲರೂ ಮುಂದೆ ಹೋಗ್ಬೇಕು ಎಂದರು. ಇನ್ನು ಮುದ್ದಹನುಮೇಗೌಡರಿಗೆ ಟಿಕೆಟ್ ನೀಡುತ್ತೇವೆ ಎಂದು ನಾವು ಎಲ್ಲೂ ಭರವಸೆ ನೀಡಿರಲಿಲ್ಲ. ಆ ಬಗ್ಗೆ ಪಕ್ಷ ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಯಡಿಯೂರಪ್ಪ ಹೇಳಿದರು. ಇತ್ತೀಚಿಗೆ ಮುದ್ದಹನುಮೇಗೌಡರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

More News