ಮೊಸರು ಹೇರಳ ಪೌಷ್ಟಿಕಾಂಶ ತುಂಬಿದ ಆಹಾರ.. ಇದು ಕ್ಯಾಲ್ಸಿಯಂ, ವಿಟಮಿನ್ , ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ನ್ನು ಹೊಂದಿದೆ. ಅಲ್ಲದೇ ನಿಮ್ಮ ಆರೋಗ್ಯಕ್ಕೆ ಬೇಕಾದ ವಿಟಮಿನ್ ಬಿ 6 ಮತ್ತು ಬಿ 12 ನಂತಹ ಪೋಷಕಾಂಶ ನೀಡುವ ಜೊತೆಗೆ ಉತ್ತಮ ಬ್ಯಾಕ್ಟೀರಿಯಾ ಮತ್ತು ಪ್ರೋಟೀನ್ ನ ಉತ್ತಮ ಮೂಲವೂ ಹೌದು. ಆದ್ರೆ ಎಷ್ಟೇ ಪೌಷ್ಟಿಕಾಹಾರ ಇದ್ರೂ ಅದು ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರಬಹುದು..
ಹೌದು, ಆಯುರ್ವೇದದ ಪ್ರಕಾರ, ಶೀತದಲ್ಲಿ ಮೊಸರು ತಿನ್ನಲೇ ಬಾರದಂತೆ. ಶೀತದ ವೇಳೆ ಗ್ರಂಥಿಗಳಿಂದ ಸ್ರವಿಸುವಿಕೆ ಹೆಚ್ಚಿಸುತ್ತೆ. ಮೊಸರು ಕಫ ಸಮಸ್ಯೆಗೆ ಕಾರಣ ಆಗುತ್ತದೆ. ಉಸಿರಾಟದ ತೊಂದರೆ ಅಸ್ತಮಾ, ಶೀತ ಮತ್ತು ಕೆಮ್ಮು ಇರುವವರಿಗೆ ಲೋಳೆಯ ಶೇಖರಣೆ ಬಹಳಷ್ಟು ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮತ್ತು ವಿಶೇಷವಾಗಿ ರಾತ್ರಿ ಮೊಸರು ಬೇಡವೇ ಬೇಡ ಎನ್ನುತ್ತದೆ ಆಯುರ್ವೇದ..
ಈ ಬಗ್ಗೆ ಮಾತನಾಡಿರುವ ಆಯುರ್ವೇದ ತಜ್ಞರಾದ ಡಾ. ದೀಕ್ಷಾ ಭಾವಸರ್ ಸವಲಿಯಾ, ಮೊಸರು ರುಚಿಯಲ್ಲಿ ಹುಳಿ, ಸ್ವಭಾವದಲ್ಲಿ ಬಿಸಿ ಆಗಿರುತ್ತದೆ. ಮತ್ತು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಸೇವಿಸಿದರೆ ತೂಕ ಹೆಚ್ಚುತ್ತದೆ, ದೈಹಿಕ ಶಕ್ತಿ ಹೆಚ್ಚುತ್ತದೆ ಮತ್ತು ಜೀರ್ಣಶಕ್ತಿ ಸುಧಾರಿಸುತ್ತದೆ.
ಆದರೆ ಶೀತದಲ್ಲಿ ಮೊಸರು ತಿನ್ನುವುದನ್ನು ತಪ್ಪಿಸಬೇಕು. ಯಾಕಂದ್ರೆ ಇದು ಗ್ರಂಥಿಗಳಿಂದ ಸ್ರವಿಸುವಿಕೆ ಹೆಚ್ಚಿಸುತ್ತದೆ. ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಫ ಸಮಸ್ಯೆಗೆ ಕಾರಣ ಆಗುತ್ತದೆ. ಉಸಿರಾಟದ ತೊಂದರೆ ಅಸ್ತಮಾ, ಶೀತ ಮತ್ತು ಕೆಮ್ಮು ಇರುವವರಿಗೆ ಲೋಳೆಯ ಶೇಖರಣೆ ಬಹಳಷ್ಟು ಸಮಸ್ಯೆ ಉಂಟು ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮತ್ತು ವಿಶೇಷವಾಗಿ ರಾತ್ರಿ ಮೊಸರು ಸೇವನೆ ತಪ್ಪಿಸಿ ಎಂದಿದ್ದಾರೆ.
ಅಲ್ಲದೇ ಸ್ಥೂಲಕಾಯ, ಕೆಮ್ಮು ಅಸ್ವಸ್ಥತೆ, ರಕ್ತಸ್ರಾವದ ತೊಂದರೆ ಮತ್ತು ಉರಿಯೂತ ಸಮಸ್ಯೆ ಹೊಂದಿದವರು ಮೊಸರು ಸೇವನೆ ತಪ್ಪಿಸಬೇಕು. ರಾತ್ರಿ ಮೊಸರು ಸೇವಿಸಬಾರದು. ಮೊಸರನ್ನು ತಿನ್ನಲು ಬಯಸಿದರೆ, ಮಧ್ಯಾಹ್ನ ಮತ್ತು ಸಣ್ಣ ಪ್ರಮಾಣದಲ್ಲಿ ಸೇವಿಸಬೇಕು. ಮೊಸರನ್ನು ಪ್ರತಿದಿನ ಸೇವಿಸಬಾರದು. ಪ್ರತಿದಿನ ಮೊಸರು ಸೇವಿಸಲು ಬಯಸಿದರೆ ಕಲ್ಲು ಉಪ್ಪು, ಕರಿಮೆಣಸು ಮತ್ತು ಜೀರಿಗೆಯಂತಹ ಮಸಾಲೆ ಜೊತೆ ಹಾಲೊಡಕು ಮಜ್ಜಿಗೆ ಕುಡಿಬೇಕು. ಆದರೆ ಮೊಸರನ್ನು ಹಣ್ಣುಗಳ ಜೊತೆ, ಮಾಂಸ ಮತ್ತು ಮೀನಿನೊಂದಿಗೆ ಬೆರೆಸಿ ತಿನ್ನಬಾರದು. ಬಿಸಿ ಪದಾರ್ಥಗಳಲ್ಲಿ ಮೊಸರು ವಿಷವಾಗಿ ಪರಿವರ್ತನೆ ಆಗುತ್ತಿದೆ.. ಇದು ದೀರ್ಘಕಾಲದವರೆಗೆ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ.




