BJP Odeyar Politics: ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಯಿಂದ “ಒಡೆಯರ್ ಪೊಲಿಟಿಕ್ಸ್”

ಮೈಸೂರು ಅಂದ್ರೆ ರಾಜಮನೆತನ.. ಇವರಿಂದಲೇ ಮೈಸೂರು ಭಾಗದಲ್ಲಿ ಹಲವಾರು ಅಭಿವೃದ್ಧಿಯ ಕ್ರಾಂತಿಗಳಾಗಿರುವುದು.. ಹೀಗಾಗಿಯೇ ಮೈಸೂರು ರಾಜ ಮನೆತನಕ್ಕೂ ಜನಸಾಮಾನ್ಯರಿಗೂ ಭಾವನಾತ್ಮಕ ಸಂಬಂಧ ಇದೆ. ಈ ಭಾವನಾತ್ಮಕ ಸಂಬಂಧವನ್ನು ರಾಜಕೀಯ ಲಾಭ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿರುವ ಬಿಜೆಪಿ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲು ತಯಾರಿ ನಡೆಸುತ್ತಿದೆ.

ಎಸ್ ಜೆಪಿ ಕ್ಯಾಂಪಸ್ ಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲು ತೀರ್ಮಾನ

ಇತ್ತೀಚೆಗೆ ಟಿಪ್ಪು ಎಕ್ಸ್ಪ್ರೆಸ್ ಟ್ರೈನ್ ಹೆಸರು ಬದಲಾವಣೆ ಮಾಡಿ ಒಡೆಯರ್ ಹೆಸರು ಇಡಲಾಗಿದೆ. ಇದರ ಮುಂದಾಳತ್ವ ವಹಿಸಿದ್ದು ಬಿಜೆಪಿ ಸಂಸದ ಪ್ರತಾಪ್ ಸಿಂಹ.. ಕೊನೆಗೂ ಹೆಸರು ಬದಲಾವಣೆ ಮಾಡಿ ಮೈಸೂರು ರಾಜ ಮನೆತನಕ್ಕೂ ಜನಸಾಮಾನ್ಯರಿಗೂ ತಮ್ಮ ಪಕ್ಷದ ನಿಷ್ಠೆ ಕುರಿತು ಸಂದೇಶ ಸಾರಿತ್ತು. ಈಗ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸರದಿ.. ಎಸ್ ಜೆಪಿ ಕ್ಯಾಂಪಸ್ ಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ನಿರ್ಧರಿಸಿದ್ದಾರೆ.

ಏಳು ತಾಂತ್ರಿಕ ಶಿಕ್ಷಣ ಕಾಲೇಜುಗಳನ್ನು ಒಳಗೊಂಡಿರುವ ಬೆಂಗಳೂರು ಎಸ್ ಜೆ ಪಾಲಿಟೆಕ್ನಿಕ್ ಕ್ಯಾಂಪಸ್ ನಲ್ಲಿ
ಎಸ್ ಜೆ ಪಾಲಿಟೆಕ್ನಿಕ್, ಮಹಿಳೆಯರ ಸರ್ಕಾರಿ ಪಾಲಿಟೆಕ್ನಿಕ್, ಜಿ ಆರ್ ಐಸಿ ಪಾಲಿಟೆಕ್ನಿಕ್, ಎಸ್ ಆರ್ ಸಿ ಐ ಬಿ ಎಂ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆ, ಸರ್ಕಾರಿ ಜವಳಿ ತಂತ್ರಜ್ಞಾನ ಸಂಸ್ಥೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಗಳಿವೆ. ಇವೆಲ್ಲವೂ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪನೆ ಮಾಡಿದ್ದು.
ಇದೇ ಕಾರಣಕ್ಕೆ ಬೆಂಗಳೂರಿನ ಎಸ್ ಜೆ ಪಿ ಕ್ಯಾಂಪಸ್ ಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲು ತೀರ್ಮಾನ ಮಾಡಲಾಗಿದೆ.

ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು

ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಪುನರ್ ಉಚ್ಚಾರಿಸಿದ್ದಾರೆ. ಮೈಸೂರು ರಂಗಾಯಣದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಟಿಪ್ಪು ಸುಲ್ತಾನ್ ಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ ವೇಳೆ ಮಾತನಾಡಿದ ಪ್ರತಾಪ್ ಸಿಂಹ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇಡುವುದು ಎಲ್ಲಾ ತೀರ್ಮಾನ ವಾಗಿದ್ದು, ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟ ತಕ್ಷಣ ಹೆಸರು ಇಡುತ್ತೇವೆ ಎಂದಿದ್ದಾರೆ.

ಒಟ್ನಲ್ಲಿ ಚುನಾವಣೆ ಯಲ್ಲಿ ಓಟು ಗಿಟ್ಟಿಸಿಕೊಳ್ಳಲು ಭರದ ಸಿದ್ದತೆಯಲ್ಲಿರುವ ಬಿಜೆಪಿ ಸರ್ಕಾರ, ರಾಜ ಮನೆತನಕ್ಕೆ ಗೌರವ ಕೊಟ್ಟಿದ್ದಾರೆ ಎಂಬ ಸಂದೇಶವನ್ನು ಸಾರೋ ಮೂಲಕ ಜನರ ಜೊತೆ ಎಮೋಷನಲೀ ಕನೆಕ್ಟ್ ಆಗಲು ತಯಾರಿ ನಡೆಸುತ್ತಿದೆ.

More News