ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿಯ ಜನ ಸಂಕಲ್ಪ ಯಾತ್ರೆ ವೇಳೆ ಭಾಷಾಣದುದ್ದಕ್ಕೂ ಸಿ.ಟಿ ರವಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಕ್ಯಾಪ್ಟನ್‍ಗೆ ಎಲ್ಲಿ ನಿಲ್ಲಬೇಕು ಅಂತಾನೆ ಗೊತ್ತಿಲ್ಲ, ಎಲ್ಲರಿಗೂ ಅವರ ಕಥೆ ಗೊತ್ತಾಗಿದೆ. ಗೊತ್ತಿಲ್ಲದವರು ಪಾಕಿಸ್ಥಾನದವರಿಗೆ ಮಾತ್ರ. ಸಿದ್ದರಾಮಯ್ಯ ಅವರಿಗೆ ಕರ್ನಾಟಕ, ಭಾರತ ಸೇಫ್ ಅಲ್ಲ ಅದ್ರ ಬದಲಿಗೆ ಪಾಕಿಸ್ತಾನ ಸೇಫ್ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ನವರು ಕೇಸರಿ ಅಲೆ ಮುಂದೆ ಕೊಚ್ಚಿ ಹೋಗ್ತಾರೆ. ಪಾಕಿಸ್ತಾನದಲ್ಲಿ ಅವರ ಬಂಡವಾಳ ಗೊತ್ತಾದರೆ ಅಲ್ಲೂ ಡೆಪಾಜಿಟ್ ಸಿಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ ಸಿಟಿ ರವಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬರ.. ಬರ.. ಆದ್ರೆ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸಿಎಂ ಆದ ಮೇಲೆ ಮಳೆ.. ಮಳೆ.. ಎಂಬತಾಗಿದೆ. ರಾಜ್ಯದಲ್ಲಿ ಮಳೆ ಬಂದು ಕೋಡಿ ಬೀಳದ ಕೆರೆಯೇ ಇಲ್ಲ ಎಂದ ಅವರು, ಬೆಳ್ಳಿ ಪ್ರಕಾಶ್ ಭೀಮ, ಭೀಮನ ಸಮಕ್ಕೆ ನಿಲ್ಲೋರ್ಯಾರು? ಅವರ ಎದುರು ಬಂದ್ರೆ ಯಾರಾದ್ರು ನಿಲ್ಲೋದಕ್ಕೆ ಸಾಧ್ಯವಾ? ಜಿಲ್ಲೆಯಲ್ಲಿ ಪಂಚ ಪಾಂಡವರಿದ್ದೇವೆ, ಈ ಬಾರಿ 5 ಸ್ಥಾನ ಗೆಲ್ಲುತ್ತೇವೆ ಎಂದು ಸಿ.ಟಿ ರವಿ ಹೇಳಿದ್ರು.

ಮೂಗಿಗೆ, ಮೊಣಕೈಗೆ ತುಪ್ಪ ಸವರಿ ಅವರೇ ನೆಕ್ಕುತ್ತಿದ್ದರು
ಕೆಲವರು ಮೂಗಿಗೆ, ಮೊಣಕೈಗೆ ತುಪ್ಪ ಸವರಿ ಅವರೇ ನೆಕ್ಕುತ್ತಿದ್ದರು, ನಾವು ಲೆಕ್ಕ ಕೊಡೋದಕ್ಕೆ ನಿಮ್ಮ ಬಳಿಗೆ ಬಂದಿದ್ದೇವೆ. ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ವಿ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಒಂದೇ ಒಂದು ರೂಪಾಯಿ ನೀಡಲಿಲ್ಲ. ಆ ಎರಡೂ ಪಕ್ಷದವರು ಜಿಲ್ಲೆಗೆ ಅನ್ಯಾಯ ಮಾಡಿದರು. ಅ ಮೋಸವನ್ನ ಮರೆಯಬೇಡಿ, ಯಾರೂ ಮರೆಯಬೇಡೆ. ನಾವು ಕೆಲಸ ತೋರಿಸಿ ಓಟು ಕೊಡಿ ಎಂದು ಕೇಳುತ್ತಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಇದ್ದಾಗ ಪ್ರತ್ಯೇಕ ಮಿಲ್ಕ್ ಯೂನಿಯನ್ ಕೇಳಿದ್ವಿ. ಅವರು ಕೊಡಲಿಲ್ಲ, ಈಗ ಸಿಎಂ ಘೋಷಣೆ ಮಾಡಿದ್ದಾರೆ. ಕೆಲವರು ಜಾತಿ ರಾಜಕಾರಣ ಮಾಡುವುದೇ ಅವರ ಕೆಲಸವಾಗಿದೆ. ಕನಕದಾಸ ಜಯಂತಿ ಬಿಎಸ್‍ವೈ ಮಾಡಿದ್ದು ಮರೆಯಬೇಡಿ, ನಾವು ಜಾತಿ ಅಲ್ಲ ನೀತಿ ಮೇಲೆ ರಾಜಕಾರಣ ಮಾಡೋರು ಎಂದರು.





