SIDDU v/s DKS FIGHT: ಕಾಂಗ್ರೆಸ್ ನಲ್ಲಿ ಜೋರಾಗಿದೆ ಟಿಕೆಟ್ ಫೈಟ್: ಟಿಕೆಟ್ ವಿಚಾರದಲ್ಲೂ ಸಿದ್ದು V/S ಡಿಕೆಶಿ ನಡುವೆ ಬಿಗ್ ಫೈಟ್

ಬೆಂಗಳೂರು : ಇನ್ನು ಆರು ತಿಂಗಳಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ತಮ್ಮ ತಯಾರಿಯನ್ನು ಆರಂಭಿಸಿವೆ. ಬಿಜೆಪಿಯನ್ನು ಮಣಿಸಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಮುಂದಾಗಿದ್ದು ಈ ನಿಟ್ಟಿನಲ್ಲಿ ಹಲವು ಕಸರತ್ತುಗಳನ್ನು ನಡೆಸುತ್ತಿದೆ.
ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೈ ಸಜ್ಜಾಗಿರುವ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಟಿಕೆಟಿಗಾಗಿ ಆಕಾಂಕ್ಷಿಗಳ ನಡುವೆ ಭಾರಿ ಪೈಪೋಟಿನೂ ಶುರುವಾಗಿದೆ. ನಾನು ಮಾಜಿ ಸಿಎಂ ಸಿದ್ದರಾಮಯ್ಯ ಬಣ ಎಂದು ಒಂದಷ್ಟ್ ಮಂದಿ ಅಪ್ಲಿಕೇಷನ್ ಹಾಕಿದರೆ. ನಾನು ಹಾಲಿ ಕೆಪಿಸಿಸಿ ಅಧ್ಯಕ್ಷರ ಬಣ ಎಂದು ಕ್ಷೇತ್ರಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದು, ಕಾಂಗ್ರೆಸ್ ನಲ್ಲಿ ಟಿಕೆಟ್ ಫೈಟ್ ಜೋರಾಗಿದೆ.
ಹೈವೋಲ್ಟೇಜ್ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಫೈಟ್
ಹೈವೋಲ್ಟೇಜ್ ಕ್ಷೇತ್ರವಾದ ಶಿವಾಜಿನಗರ ಕ್ಷೇತ್ರಕ್ಕಾಗಿ ಹಾಲಿ ಶಾಸಕ ರಿಜ್ವಾನ್ ಅರ್ಷದ್ vs ಮೊಹಮ್ಮದ್ ನಲಪಾಡ್ ನಡುವೆ ಪೈಪೋಟಿ ಶುರುವಾಗಿದೆ. ಶಾಸಕ ರಿಜ್ವಾನ್ ಅರ್ಷದ್ ಸಿದ್ದು ಬಣದಲ್ಲಿ ಗುರುತಿಸಿಕೊಂಡಿದ್ರೆ, ಡಿಕೆಶಿ ಬಣದಿಂದ ಮೊಹಮ್ಮದ್ ನಲಪಾಡ್ ಟಿಕೆಟಿಗಾಗಿ ಅರ್ಜಿ ಹಾಕಿದ್ದಾರೆ. ಇತ್ತ ಪುಲಕೇಶಿ ನಗರಕ್ಕೆ ಸಿದ್ದರಾಮಯ್ಯ ಬಣದ ಶಾಸಕರಾಗಿರುವ ಅಖಂಡ ಶ್ರೀನಿವಾಸ್ ಮೂರ್ತಿ ಇದ್ರೆ, ಹಾಲಿ ಶಾಸಕರಿಂದ ಟಿಕೆಟ್ ಕಸಿಯುಲು ಡಿಕೆ ಬೆಂಬಲಿಗ ಮಾಜಿ ಶಾಸಕ‌ ಪ್ರಸನ್ನ ಕುಮಾರ ಪ್ರಯತ್ನ ಮುಂದುವರೆಸಿದ್ದಾರೆ.
ಮತ್ತೊಂದು ಹೈವೋಲ್ಟೇಜ್ ಕ್ಷೇತ್ರ ಟಿ. ನರಸೀಪುರ
ಸಿದ್ದರಾಮಯ್ಯ ಆಪ್ತರಾಗಿರುವ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟು ನಂಜನಗೂಡಿನಿಂದ ಸ್ಪರ್ಧೆಗೆ ಅರ್ಜಿ ಹಾಕಿದ್ದಾರೆ. ಆದರೆ ಡಿಕೆಶಿ ಬಣದಿಂದ ಧೃವನಾರಾಯಣ್ ಕೂಡ ನಂಜನಗೂಡು ಮೇಲೆ ಕಣ್ಣು ಹಾಕಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರಕ್ಕಾಗಿ ಕಿಮ್ಮನೆ-ಮಂಜುನಾಥ್ ಗೌಡ ಫೈಟ್
ತೀರ್ಥಹಳ್ಳಿ ಕ್ಷೇತ್ರಕ್ಕಾಗಿ ಮಾಜಿ ಶಾಸಕ, ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡ ಕಿಮ್ಮನೆ ರತ್ನಾಕರ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಡಿಕೆ ಬಣದಲ್ಲಿ ಗುರುತಿಸಿಕೊಂಡಿರುವ ಮಂಜುನಾಥಗೌಡರಿಂದಲೂ ಕೈ ಟಿಕೆಟಿಗಾಗಿ ಅರ್ಜಿ ಸಲ್ಲಿಕೆಯಾಗಿದ್ದು, ಕಾಂಗ್ರೆಸ್ ನಲ್ಲಿ ಟಿಕೆಟಿಗಾಗಿ ಆಕಾಂಕ್ಷಿಗಳ ನಡುವೆ ಭಾರಿ ಪೈಪೋಟಿ ಶುರುವಾಗಿದೆ.
ಇದುವರೆಗೂ 1100 ಮಂದಿಯಿಂದ ಅರ್ಜಿ ಸಲ್ಲಿಕೆ
ಕಳೆದ ನವೆಂಬರ್ 5ರಿಂದ ಅರ್ಜಿ ಸಲ್ಲಿಕೆ ಕಾರ್ಯವನ್ನು ಕಾಂಗ್ರೆಸ್ ಆರಂಭಿಸಿತ್ತು. ಕಳೆದ ಹತ್ತು ದಿನಗಳಲ್ಲಿ 1100ಕ್ಕೂ ಹೆಚ್ಚು ಆಕಾಂಕ್ಷಿಗಳು ಐದು ಸಾವಿರ ರೂಪಾಯಿ ಶುಲ್ಕದೊಂದಿಗೆ ಅರ್ಜಿಗಳನ್ನು ಪಡೆದುಕೊಂಡಿದ್ದಾರೆ. 650ಕ್ಕ ಹೆಚ್ಚು ಮಂದಿ ಇದುವರೆಗೂ ಡಿಡಿ ಮೂಲಕ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ತಿಳಿಸಿದೆ.

ಆಕಾಂಕ್ಷಿತರು ಇನ್ನು ಅನೇಕರು ಇರುವುದರಿಂದ ಅರ್ಜಿ ಸಲ್ಲಿಸಲು ನಿಗಧಿ ಪಡೆಸಿದ್ದ ಗಡುವನ್ನು ಇದೇ ತಿಂಗಳ 21 ರವರೆಗೆ ವಿಸ್ತರಿಸಲಾಗಿದೆ. ಅನ್ಯ ಪಕ್ಷಗಳಿಂದ ಕಾಂಗ್ರೆಸ್ ಗೆ ಬರಲು ಇಚ್ಚಿಸುವವರು ಹಾಗೂ ಟಿಕೇಟ್ ಆಕಾಂಕ್ಷಿತರ ಒತ್ತಡದಿಂದ ಅವಧಿ ವಿಸ್ತರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

#SIDDARAMAIAH #FORMER CHIEF MINISTER #D K SHIVAKUMAR #KPCC PRESIDENT #APPLICATION #ASSEMBLY ELECTION #PREPARATION #FIGHT #SIDDU TEAM #DKS TEAM

More News