ಚಿಕ್ಕಮಗಳೂರು ಮತ್ತು ಬೇಲೂರಿನಲ್ಲಿ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು ನಗರದ ಹೊರವಲಯದ ಉಂಡೆ ದಾಸರಹಳ್ಳಿಯಲ್ಲಿರುವ ಗಾಯತ್ರಿ ನಿವಾಸದ ಮೇಲೆ ದಾಳೆ ನಡೆಸಿ, ಮನೆಯಲ್ಲಿರುವ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.

ಯಾರಿಗೂ ಅನುಮಾನ ಬಾರದಿರಲಿ ಎಂದು ಕಾರಿನ ಮುಂಭಾಗ ಮದುವೆಯ ಬೋರ್ಡ್ (ಅಭಿನವ್ ವೆಡ್ಸ್ ದೀಪಿಕಾ) ಹಾಕಿಕೊಂಡು ಹತ್ತಕ್ಕು ಹೆಚ್ಚು ವಾಹನಗಳಲ್ಲಿ ಬಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗಾಯತ್ರಿ ಮನೆಗೆ ಹೋಟೆಲ್ ನಿಂದ ಇಡ್ಲಿ, ಬಿಸಿಬೇಳೆ ಬಾತ್ ತಿಂಡಿ ತರಿಸಿಕೊಂಡು ಸೇವಿಸಿದ ಐಟಿ ಅಧಿಕಾರಿಗಳು, ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ. ಏಕ ಕಾಲದಲ್ಲಿ ಬೇಲೂರಿನಲ್ಲಿರುವ ಗಾಯತ್ರಿ ಅವರ ಅಳಿಯನ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.




