CM PA Honeytrap : ಪೊಲೀಸ್ ಠಾಣೆ ಮೆಟ್ಟಿಲೇರಿದ ಸಿಎಂ ಪಿಎ ಹನಿಟ್ರ್ಯಾಪ್ ವದಂತಿ ವಿಚಾರ..!

ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರ ಆಪ್ತ ಸಹಾಯಕನನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲಾಗಿತ್ತು ಎಂದು ಹೇಳಲಾಗಿದ್ದ ಪ್ರಕರಣವನ್ನು ಜನ್ಮಭೂಮಿ ಫೌಂಡೇಷನ್ ಇದೀಗ ವಿಧಾನಸೌಧ ಪೊಲೀಸ್ ಠಾಣೆ ಮೆಟ್ಟಿಲೇರಿಸಿದೆ. ಈ ಪ್ರಕರಣವನ್ನು ತನಿಖೆಗೊಳಪಡಿಸಬೇಕು ಎಂದು ಪೊಲೀಸರಿಗೆ ದೂರು ನೀಡಿದೆ.

ಈ ಪ್ರಕರಣವನ್ನು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮತ್ತು ಸಿಎಂ ಕಚೇರಿಯ ಮತ್ತೊಬ್ಬ ನ್ನತ ಅಧಿಕಾರಿಯೊಬ್ಬರು ಮುಚ್ಚಿಹಾಕಿದ್ದಾರೆ ಎಂದು ಗಂಭೀರ ಆರೋಪ ಕೇಳಿ ಬಂದಿರುವ ನಡುವೇ ಜನ್ಮಭೂಮಿ ಫೌಂಡೇಷನ್ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಪ್ರಕರಣವನ್ನು ವಿಸ್ತರಿಸಿದಂತಾಗಿದೆ. ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನ ಪ್ರತಿಯ ‘ದಿ ನ್ಯೂಸ್ ಪೆಗ್’ ಗೆ ಲಭ್ಯವಾಗಿದೆ. ಹನಿಟ್ರ್ಯಾಪ್ ರೀತಿಯ ಕಾರ್ಯಕ್ರಮಗಳನ್ನ ಹಲವು ವೈಯಕ್ತಿಕ ಲಾಭ ಮತ್ತು ಹಣ ವಸೂಲಿ ಮಾಡಲು ವಿಧಾನಸೌಧದಲ್ಲಿ ಒಂದು ಜಾಲವೇ ಇದೆ. ಇವರು ಹಲವು ವರ್ಷಗಳಿಂದ ಇಲ್ಲಿನ ಅಧಿಕಾರಿವರ್ಗ, ರಾಜಕೀಯ ನಾಯಕರನ್ನ ತಮ್ಮ ಮಧು ಸಮ್ಮೊಹಕ ಕ್ರಿಯೆಗೆ ಬಳಸಿಕೊಂಡು ಹಿಂದಿನಿಂದಲೂ ಸಹ ಬೆದರಿಸಿ ಹಣ ಮತ್ತು ತಮ್ಮ ಕೆಲಸಗಳನ್ನ ಮಾಡಿಸಿಕೊಂಡಿರುತ್ತಾರೆ, ಎಂದು ಫೌಂಡೇಷನ್ ನ ಟ್ರಸ್ಟಿಯೂ ಮತ್ತು ವಕೀಲರೂ ಆಗಿರುವ ನಟರಾಜ್ ಶರ್ಮಾ ಅವರು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದ್ದ ಸಿಎಂ ಆಪ್ತ ಸಹಾಯಕ ಮತ್ತು ವಿಧಾನಪರಿಷತ್ ಡಿಗ್ರೂಪ್ ಮಹಿಳಾ ನೌಕರಳ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿಧಾನಸೌಧದಲ್ಲಿ ಡಿ ದರ್ಜೆ ನೌಕರಳಾಗಿ ಕೆಲಸ ಮಾಡುತ್ತಿರುವ ವರದ ಎಂಬ ಮಹಿಳೆ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಹರೀಶ್ ಎಂಬುವರನ್ನು ಹನಿಟ್ರ್ಯಾಪ್ಗೆ ಬಳಸಿಕೊಂಡು ಮಹತ್ವದ ದಾಖಲೆಗಳನ್ನ ಮೊಬೈಲ್ ಗೆ ತರಿಸಿಕೊಂಡು ವಿರೋಧ ಪಕ್ಷದ ನಾಯಕರಿಗೆ ವರ್ಗಾವಣೆ ಮಾಡುತ್ತಿದ್ದ ಎಂಬ ಬಗ್ಗೆ ಮಾಹಿತಿ ದೊರೆತಿರುತ್ತದೆ. ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅದೇ ರೀತಿ ಹರೀಶ್ ಎಂಬುವರು ಈ  ಮಹಿಳೆ ಹೆಸರಿನಲ್ಲಿ ಕನಕಪುರ ರಸ್ತೆಯಲ್ಲಿ 13 ಎಕರೆ ಕೃಷಿಭೂಮಿಯನ್ನು ಕ್ರಯ ಮಾಡಲಾಗಿದೆ ಎಂಬ ಮಾಹಿತಿ ಇದ್ದು ಹರೀಶ್ ಬಳಿ ಇಷ್ಟು ದೊಡ್ಡ ಮೊತ್ತದ ಹಣ ಹೇಗೆ ಬಂತು ಎಂಬುದು ತನಿಖೆಯಿಂದ ಹೊರಬರಬೇಕಾಗಿದೆ. ಈ ವಿಷಯದಲ್ಲಿ ಹಲವು ಪ್ರಭಾವಿ ವ್ಯಕ್ತಿಗಳು ವಿಧಾನಪರಿಷತ್ ಸದಸ್ಯರು ಮಧ್ಯ ಪ್ರವೇಶಿಸಿ ಮುಚ್ಚಿ ಹಾಕುವ ಪ್ರಯತ್ನಕ್ಕೆ ಕೈ ಹಾಕಿರುವುದು ತಿಳಿದು ಬಂದಿದೆ. ಅತೀ ಮುಖ್ಯವಾಗಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರ ಹೆಸರು ಕೇಳಿಬಂದಿದ್ದು ಇವರು ಸಂಧಾನದ ಮಾತುಕತೆ ನಡೆಸಿದ್ದರು, ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಹಾಗೇಯೆ ದೀಪಾವಳಿ ಕೊಡುಗೆಯಾಗಿ ಮಾಧ್ಯಮದವರಿಗೆ ಸ್ವೀಟ್ ಬಾಕ್ಸ್ ನಲ್ಲಿ ಎರಡು ಲಕ್ಷ ರೂ.ಗಳನ್ನ ಇಟ್ಟಿದ್ದರು ಎಂಬ ಆಂತರಿಕ ಮಾತುಕತೆಯನ್ನು ಈ ವ್ಯಕ್ತಿಗಳಿಂದ ವರ್ಗಾವಣೆ ಆಗಿದೆ ಎಂದು ತಿಳಿದುಬಂದಿರುತ್ತದೆ. ಆಡಳಿತ ಸರ್ಕಾರದ ಮತ್ತು ಆಡಳಿತ ಪಕ್ಷದವರ ವಿರುದ್ಧ ಇದೊಂದು ರೀತಿಯ ಷಡ್ಯಂತ್ರ ಮತ್ತು ನಂಬಿಕೆ ದ್ರೋಹ. ಹೀಗಾಗಿ ಈ ಕುರಿತು ತನಿಖೆ ನಡೆಸಿ ಈ ವ್ಯಕ್ತಿಗಳ ಮೊಬೈಲ್, ವರ್ಗಾವಣೆ ಆಗಿರುವ ದಾಖಲೆಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. ಇದರ ಹಿಂದೆ ಇರುವ ಜಾಲವನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಿಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯ ಗುತ್ತಿಗೆ ನೌಕರ ಮತ್ತು ವಿಧಾನ ಪರಿಷತ್ ಸಚಿವಾಲಯದ ಡಿ ಗ್ರೂಪ್ ಮಹಿಳಾ ನೌಕರೊಬ್ಬಳು ಶಾಮೀಲಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ತ ಸಹಾಯಕನನ್ನೇ ಹನಿಟ್ರ್ಯಾಪ್ ಬಲೆಗೆ ಕೆಡವಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.

More News