ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ, ಹಲವಾರು ವಿಭಿನ್ನ ಪಾತ್ರಗಳ ಮೂಲಕ ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ನಟ ನವಾಜುದ್ದೀನ್ ಸಿದ್ದಿಕಿ, ಮಂಗಳಮುಖಿಯಾಗಿ ಬದಲಾದಂತಹ ಪೋಟೋಗಳು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗ್ತಿವೆ. ಸಿದ್ದಿಕಿ ಯಾಕೆ ಹೀಗೆ ಬದಲಾಗಿದ್ದಾರೆ. ಇವರಿಗೆ ಏನೋ ಆಗ್ಬಿಟ್ಟಿದೆ ಎಂಬ ಬಿಸಿಬಿಸಿ ಚರ್ಚೆಗಳು ಸಹ ನಡೆಯುತ್ತಿವೆ. ಇವೆಲ್ಲದರ ನಡುವೆ ನವಾಜುದ್ದೀನ್ ಸಿದ್ದಿಕಿ ತನ್ನ ಹಡ್ಡಿ ಎಂಬ ಸಿನಿಮಾ ಮಾಡುತ್ತಿದ್ದು, ಆ ಸಿನಿಮಾದಲ್ಲಿ ನಟಿಸುವ ಸಲುವಾಗಿ ಮಂಗಳ ಮುಖಿಯಾಗಿ ಬದಲಾಗಿದ್ದಾರೆ ಎಂಬ ಸಂಗತಿ ಹೊರಬಿದ್ದಿದೆ. ಸಿದ್ದಿಕಿ ಅವರ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.
ಬಣ್ಣದ ಲೋಕದಲ್ಲಿ ನಟರು ಅಥವಾ ನಟಿಯರು ಅನೇಕ ಸಿನಿಮಾಗಳಲ್ಲಿ ನಟನೆಗಾಗಿಯೇ ಮೈಕಟ್ಟು, ತಲೆ ಜುಟ್ಟು ಬಿಡುವುದು, ಗಡ್ಡ – ಮೀಸೆ ಜೋತುಬಿಡುವುದನ್ನು ಕಾಣುತ್ತೇವೆ. ಅದರ ನಡುವೆಯೂ ಪಾತ್ರಕ್ಕಾಗಿ ಗಂಡು ಹೆಣ್ಣಿನ ಅಂತರಾಳಕ್ಕಿಳಿದು ಜೀವಿಸುವುದು ಕಷ್ಟದ ಕೆಲಸ. ಇತ್ತೀಚಿಗೆ ನಿಧನರಾದ ಕನ್ನಡ ಚಿತ್ರರಂಗದಲ್ಲಿ ತನ್ನ ನಟನೆಯ ಮೂಲಕ, ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಜನಮನ ಗೆದ್ದಿದ್ದ ನಟ ಸಂಚಾರಿ ವಿಜಯ್ ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ಮಂಗಳಮುಖಿಯರ ಜೀವನ ಕಥೆಯನ್ನು, ನೋವುಗಳನ್ನು, ಕಷ್ಟಗಳನ್ನು ಹೊರಗಿಟ್ಟಿದ್ದರು. ಅದಾದ ಮೇಲೆ ಇದೀಗ ನವಾಜುದ್ದೀನ್ ಸಿದ್ದಿಕಿ ಹಡ್ಡಿ ಹೆಸರಿನಲ್ಲಿ ಸಿನಿಮಾವೊಂದನ್ನು ಮಾಡುತ್ತಿದ್ದು, ಅದರಲ್ಲಿ ಅವರ ನೋವು ಮತ್ತು ನೈತ ಘಟನೆಗಳನ್ನು ಪ್ರಾಕ್ಟಿಕಲ್ ಆಗಿ ಅನುಭವಿಸಿದ್ದನ್ನು ಸಿನಿಮಾದಲ್ಲಿ ವ್ಯಕ್ತಪಡಿಸಿದ್ದಾರೆ.

ನಟ ಸಿದ್ದಿಕಿ ಅವರ ಮೊದಲು ನೋಟದ ಫೋಟೋ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ, ನಟನ ಗಂಭೀರತೆ ಕಂಡು ಫಿದಾ ಆಗಿದ್ದಾರೆ.
ಮಂಗಳಮುಖಿಯರ ಜೊತೆಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡಿರುವ ನಟ ನವಾಜುದ್ದೀನ್ ಸಿದ್ದಿಕಿ, ಮಂಗಳಮುಖಿ ಮಹಿಳೆಯರ ಜೊತೆ ಕೆಲಸ ಮಾಡಿದ್ದು, ಯಾವತ್ತಿಗೂ ಮರೆಯಲಾರದ ಅನುಭವ ನೀಡಿದೆ. ಈ ಪಾತ್ರವನ್ನು ಮಾಡುವಾಗ ಮಂಗಳಮುಖಿಯರ ಬಗ್ಗೆ ಗೌರವವು ಹೆಚ್ಚಾಯಿತು. ಮಂಗಳಮುಖಿಯರ ಮನೆಯ ತಲ್ಲಣಗಳು ನನಗೆ ಈ ಮೂಲಕ ಅರ್ಥವಾಗುತ್ತಾ ಹೋದವು. ಅವರು ನಮ್ಮಂತೆಯೇ ಮನುಷ್ಯರು ಎಂಬ ಸತ್ಯದ ಸಂಗತಿಯನ್ನು ಅರಿಯಬೇಕಾದ ಅನಿವಾರ್ಯತೆ ಇದೆ. ಎಲ್ಲರೊಳಗೆ ನಾವಾಗಬೇಕಿದೆ ಎಂಬ ಸತ್ಯವನ್ನು ಅರಿಯಬೇಕು ಎಂದಿದ್ದಾರೆ.
ನನ್ನ ಈ ಸಿನಿಮಾದ ಪಾತ್ರ ನೋಡಿ ಸ್ವತಃ ತಮ್ಮ ಮಗಳು ಅಪ್ ಸೆಟ್ ಆಗಿದ್ದ ಸಂಗತಿಯನ್ನು ಬಿಚ್ಚಿಟ್ಟಿರುವ ಸಿದ್ದಿಕಿ, ಈ ಪಾತ್ರ ಮಾಡಲಿಕ್ಕಾಗಿ ನನ್ನ ಮಗಳನ್ನು ನಂಬಿಸುವ ಸಲುವಾಗಿ ಸಾಕು ಸಾಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.




