ಅಪ್ಪಟ ಕನ್ನಡದ ‘ಕಾಂತಾರ’ ಸಿನಿಮಾ ಇದೀಗ ಇಡೀ ದೇಶದ ಜನರ ಬಾಯಲ್ಲಿ ನಲಿಯುತ್ತಿದೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕ ಮೆಚ್ಚಿ ಅಪ್ಪಿಕೊಂಡಿದ್ದಾನೆ. ಅಷ್ಟೇ ಏಕೆ ವಿದೇಶದಲ್ಲಿಯೂ ಈ ಸಿನಿಮಾ ಕಣ್ತುಂಬಿಕೊಳ್ಳುತ್ತಿದ್ದಾರೆ. 25 ದಿನ ಪೂರೈಸಿ 50 ದಿನವನ್ನೂ ಪೂರೈಸಿದೆ. ಇಷ್ಟಿದ್ದರೂ ಈ ಚಿತ್ರದ ಕ್ರೇಜ್ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಇಡೀ ಭಾರತೀಯ ಚಿತ್ರರಂಗವೇ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದೆ. ಇದೀಗ ಕಮಲ್ ಹಾಸನ್ ಸಹ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಚಿತ್ರ ಕಳೆದ 50 ದಿನಗಳಿಂದ ಥಿಯೇಟರ್‌ಗಳಲ್ಲಿ ಸದ್ದು ಮಾಡುತ್ತಿದೆ. ಈ ಆಕ್ಷನ್ ಮತ್ತು ಥ್ರಿಲ್ಲರ್ ಸಿನಿಮಾ ಕಥೆಯು ಭಾರತದಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿದೆ. ಧನುಷ್, ಪ್ರಭಾಸ್, ಕಂಗನಾ ರಣಾವತ್ ಮತ್ತು ರಜನಿಕಾಂತ್ ಸೇರಿ ಹಲವು ಸೆಲೆಬ್ರಿಟಿಗಳು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೀಗ ಕಮಲ್ ಪ್ರತಿಕ್ರಿಯೆ ನೀಡಿದ್ದಾರೆ. ರಿಷಬ್‌ಗೆ ಕರೆ ಮಾಡಿ, ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ.

ರಿಷಬ್‌ಗೆ ಕರೆ ಮಾಡಿ ಮೆಚ್ಚುಗೆ..
‘ಕಾಂತಾರ’ ಸಿನಿಮಾ ವೀಕ್ಷಣೆ ಮಾಡಿರುವ ಕಮಲ್ ಹಾಸನ್, ಚಿತ್ರ ವೀಕ್ಷಣೆ ಮಾಡಿ, ರಿಷಬ್‌ಗೆ ಕರೆ ಮಾಡಿದ್ದಾರಂತೆ. ರಿಷಬ್ ಅವರ ಹೊಸ ಪ್ರಯತ್ನ ಮತ್ತು ಪ್ರಾದೇಶಿಕ ಕತೆಯನ್ನು ಪ್ಯಾನ್ ಇಂಡಿಯಾ ಮೆಚ್ಚಿದರ ಬಗ್ಗೆಯೂ ಕಮಲ್ ಮಾತನಾಡಿದ್ದಾರೆ. ಈ ರೀತಿಯ ಕಥೆ ಹೇಳುವಿಕೆ ನಮಗೆಲ್ಲ ಸ್ಫೂರ್ತಿ ಎಂದಿದ್ದಾರೆ.
#kanthara #Kamal Haasan #Rishab_shetty #hombale #kantharamovie #inspirationKantaramovie




