Money Theft in KPCC office : ಕೆಪಿಸಿಸಿ ಕಚೇರಿ ಬಳಿ ಕಳ್ಳರ ಕೈಚಳಕ: 14 ಸಾವಿರ ಹಣ ಕಳವು ಮಾಡಿದ ಖದೀಮರು

ಬೆಂಗಳೂರ : ಕೆಪಿಸಿಸಿ ಕಚೇರಿಯ ಬಳಿ ಕಳ್ಳರ ಕೈಚಳಕ ತೋರಿದ್ದಾರೆ. ಜಯರಾಂ ಎಂಬ ಕಾಂಗ್ರೆಸ್ ಮುಖಂಡರ 14 ಸಾವಿರ ಹಣ ಎಸ್ಕೆಪ್ ಮಾಡಿದ ಕಳ್ಳರು. ಕೊಣೇಶ್ ಎಂಬುವವರ ಹಣಕ್ಕೂ ಕೈಹಾಕಿದ್ದ ಕಳ್ಳರನ್ನಬೆನ್ನಟ್ಟಿ ಹಿಡಿದು ಹಣ ಕಿತ್ತುಕೊಂಡ ಕೊಣೇಶ ಮತ್ತು ಕಾಂಗ್ರೆಸ್ ಕಾರ್ಯಕರ್ತರು.

ಆದರೆ ಜಯರಾಂ ಎಂಬುವರ ಹಣ ಕದ್ದ ಖದೀಮರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮತ್ತೊಬ್ಬ ಮುಖಂಡರ 20 ಸಾವಿರ ಹಣ ಕಳವಾಗಿದೆ.ಇತ್ತೀಚೆಗೆ ಬಿಜೆಪಿ ತೊರೆದಿದ್ದ ಯು.ಬಿ.ಬಣಕಾರ್ ಇಂದು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮವನ್ನು ಬೆಂಗಳೂರಿನ ಮುಖ್ಯ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದರು.

ಹಣ ಕಳೆದುಕೊಂಡವರು

ಈ ವೇಳೆ ಬಣಕಾರ್ ಜೊತೆ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದರು. ಹೆಚ್ಚು ಜನರನ್ನ ನೋಡಿ ಕಳ್ಳರು ಕೈಚಳಕ‌ ತೋರಿಸಿದ್ದಾರೆ.

ಕಾರಿನಲ್ಲಿ ಕುಳಿತು ಮುಖ ಮುಚ್ಚಿಕೊಂಡಿರುವ ಕಳ್ಳ. ಕಾರಿನ  ಹೊರಗೆ ಪೊಲೀಸರು

ಸದ್ಯ ಒಬ್ಬ ಕಳ್ಳನನ್ನ ಹಿಡಿದ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

More News