ನವದೆಹಲಿ: ಮ್ಯಾಂಚೆಸ್ಟರ್ ನಲ್ಲಿ ನಡೆಯಬೇಕಾಗಿದ್ದ ಕೊನೆಯ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಆಡದೇ ಇರುವುದಕ್ಕೆ ಕೋವಿಡ್ ಆತಂಕವೇ ಕಾರಣ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಈವಿಷಯ ಸ್ಪಷ್ಟಪಡಿಸಿದ ಅವರು, ಪಂದ್ಯ ಮುಂದೂಡಿರುವ ಬಗ್ಗೆ ಆಟಗಾರರನ್ನು ದೂಷಿಸುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ. ಐಪಿಎಲ್ ಪಂದ್ಯಗಳನ್ನು ಆಡಲು ಪಂದ್ಯವನ್ನು ಮುಂದೂಡಲಾಗಿಲ್ಲ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಐ ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಕಾಯ್ದುಕೊಂಡಿತ್ತು. ಹೀಗಾಗಿ ಕೊನೆಯ ಪಂದ್ಯ ನಿರ್ಣಾಯಕ ಹಾಗೂ ಮಹತ್ವದ್ದಾಗಿತ್ತು. ಆದರೆ, ಭಾರತ ತಂಡದ ಕೋಚ್ ಮತ್ತು ಇತರೆ ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಮುಂದೂಡಲಾಗಿತ್ತು.
ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದರಿಂದ ಆಟಗಾರರು ಸಹಜವಾಗಿಯೇ ಆತಂಕಗೊಂಡಿದ್ದರು.ಈ ಹಿನ್ನೆಲೆಯಲ್ಲಿ ಪಂದ್ಯವನ್ನು ಮುಂದೂಡಲಾಗಿತ್ತು. ಇದರಿಂದ ವೇಲ್ಸ್ ಕ್ರಿಕೆಟ್ ಮಂಡಳಿಯ ಆಗಿರುವ ಆರ್ಥಿಕ ನಷ್ಠ ಮುಂಬರುವ ದಿನಗಳಲ್ಲಿ ಸರಿಯಾಗಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ ಅವರು, ಇದೇ ತಿಂಗಳ 22ರಂದು ಲಂಡನ್ ಗೆ ಪ್ರಯಾಣಿಸುವುದಾಗಿ ತಿಳಿಸಿದ್ದಾರೆ.
ಮುಂದೂಡಲಾಗಿರುವ ಪಂದ್ಯವನ್ನು ಮುಂಬರುವ ವರ್ಷ ಇಂಗ್ಲೇಂಡ್ ನಲ್ಲಿಯೇ ನಡೆಸಲು ಇಂಗ್ಲೆಂಡ್ ಒಪ್ಪಿಕೊಂಡಿದೆ ಎಂದು ಗಂಗೂಲಿ ಇದೇ ಸಂದರ್ಭದಲ್ಲಿ ತಿಳಿಸಿದರು.




