B’COM STUDENT BECOME TERROR: ಬಯಲಾಯ್ತು ಆಟೋ ಸ್ಪೋಟ ರಹಸ್ಯ: ತೀರ್ಥಹಳ್ಳಿಯ ಬಿಕಾಂ ವಿದ್ಯಾರ್ಥಿ ಭಯೋತ್ಪಾದಕನಾಗಿದ್ದು ಹೇಗೆ..?

ಮಂಗಳೂರು : ಮಂಗಳೂರಿನಲ್ಲಿ ಶನಿವಾರ ಸಂಜೆ ಸಂಭವಿಸಿದ ಆಟೋ ಸ್ಪೋಟ ಶಂಕಿತ ಉಗ್ರ ಶಾರೀಖ್ ಸಂಚು ಎಂಬ ವಿಚಾರ ಬಯಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸ್ಪೋಟಕ ಮಾಹಿತಿ ಸಿಕ್ಕಿವೆ. ನೇರವಾಗಿ ಹೊರ ದೇಶದ ಹ್ಯಾಂಡ್ಲರ್ ಗಳ ಜೊತೆಗೆ ಶಾರೀಖ್ ಗೆ ಸಂಪರ್ಕ ಇದೆ ಎಂಬ ಮಾಹಿತಿ ಪೊಲೀಸರ ತನಿಖೆ ಸಂದರ್ಭದಲ್ಲಿ ಹೊರ ಬಿದ್ದಿದೆ.
ಸಧ್ಯಕ್ಕೆ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ ಭಯೋತ್ಪಾದಕ ಚಟುವಟಿಕೆಗಳ ಮುಖ್ಯ ವ್ಯಕ್ತಿ ಅಬ್ದುಲ್ ಮತೀನ್ ಎಂಬಾತನೇ ಶರೀಖ್ ನ ಹ್ಯಾಂಡ್ಲರ್ ಎಂಬುದು ತಿಳಿದು ಬಂದಿದೆ. ಅಲ್ಲದೇ ರೀಸೆಂಟ್ ಆಗಿ ಶಿವಮೊಗ್ಗದಲ್ಲಿ ಬಾಂಬ್ ತಯಾರಿಕೆಗೆ ಸಂಬಂಧಿಸಿದಂತೆ ಮಾಸ್ ಮುನೀರ್, ಸೈಯದ್ ಯಾಸಿನ್ ರನ್ನು ಬಂಧಿಸಲಾಗಿದೆ. ಶಾರೀಖ್ ಇವರೊಂದಿಗೆ ಸಹ ನಿಕಟ‌ ಸಂಪರ್ಕ ಹೊಂದಿದ್ದ ಎಂದು ತಿಳಿದು ಬಂದಿದೆ.
ಬಂಧಿತ ಶಾರೀಖ್ ಗಿದೆ ಭಯಾನಕ ಬ್ಯಾಗ್ರೌಂಡ್…
ಹಲವು ಉಗ್ರ ಸಂಘಟನೆಗಳಲ್ಲಿ ಶಾರೀಖ್ ಭಾಗಿಯಾಗಿರೋದು ಬೆಳಕಿಗೆ ಬಂದಿದೆ. ಮೂಲತಃ ಈತ ತೀರ್ಥಹಳ್ಳಿಯ ಎಕೆ ಕಾಲೋನಿಯ ಸೊಪ್ಪುಗೆಡ್ಡೆ ನಿವಾಸಿ. ತೀರ್ಥಹಳ್ಳಿಯಲ್ಲೇ ಈತ ಬಿಕಾಂ ವ್ಯಾಸಂಗ ಕೂಡ ಮಾಡಿದ್ದಾನೆ. ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಈತನ ಮೇಲೆ ಕೇಸ್ ರಿಜಿಸ್ಟರ್ ಆದದ್ದು 2020 ರಲ್ಲಿ.
2020 ನವೆಂಬರ್ 27 ರಲ್ಲಿ ಮಂಗಳೂರಿನ ಪೂರ್ವ ಠಾಣೆಯಲ್ಲಿ ಎರಡು ಕೇಸ್ ಗಳು ದಾಖಲಾಗುತ್ತದೆ. ಮಂಗಳೂರಿನ ವೆಂಚುರಾ ಅಪಾರ್ಟ್ಮೆಂಟ್ ಗೋಡೆಯ ಮೇಲೆ ಭಯೋತ್ಪಾದನಾ ಪ್ರಚೋದಕ ಬರಹ ಮತ್ತು ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಇರುವ ಗೋಡೆಯ ಮೇಲೆ ಸಹ ಭಯೋತ್ಪಾದನಾ ಪ್ರಚೋದನ ಬರಹಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಅಷ್ಟೇ ಅಲ್ಲ. ಎರಡೂ ಪ್ರಕರಣದ ವಿರುದ್ಧ 2020 ಡಿಸೆಂಬರ್ 6 ರಂದು ಅರೆಸ್ಟ್ ಆಗಿ ಜೈಲು ಸೇರಿದ್ದ.
ಜಾಮೀನು ಪಡೆದು ನೇರವಾಗಿ ತೀರ್ಥಹಳ್ಳಿಗೆ ವಾಪಸ್ ಬಂದಿದ್ದ ಶಾರೀಖ್, ತಂದೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಲು ತೊಡಗಿದ್ದ. ತಂದೆಗೆ ಸಹಾಯ ಮಾಡಲು ಬಟ್ಟೆ ಅಂಗಡಿ ವ್ಯವಹಾರ ನೋಡಿಕೊಳ್ಳುವ ಜೊತೆಗೆ ಸೌದಿ ಅರೇಬಿಯಾದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ. ಪುಣೆಯ ವಾಟ್ಸಪ್ ಗ್ರೂಪ್ ಒಂದರಲ್ಲಿ ಶಾರೀಖ್ ಸಕ್ರಿಯನಾಗಿದ್ದ. ಈ ಗ್ರೂಪ್ ನ ಅಡ್ಮಿನ್ ನ ಸೂಚನೆ ಮೆರೆಗೆ ಗೋಡೆ ಮೇಲೆ ಭಯೋತ್ಪಾದಕ ಪ್ರಚೋದನೆ ಬರಹ ಬರೆದಿದ್ದಾನೆ ಎಂಬುದು ವಿಚಾರಣೆ ಬಳಿಕ ತಿಳಿದುಬಂದಿದೆ.
ಇನ್ನು ಕೆಲ ತಿಂಗಳ ಹಿಂದೆ ಶಿವಮೊಗ್ಗದ ನದಿ ದಡದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲಾಗಿದೆ ಎಂಬ ವಿಚಾರ ಕುರಿತಂತೆ ಚರ್ಚೆ ಜೋರಾಗುತ್ತಿದ್ದ ಸಂದರ್ಭದಲ್ಲಿ ಶಾರೀಖ್ ಕೊಯಮತ್ತೂರಿಗೆ ತಲುಪಿದ್ದಾನೆ. ಕೊಯಮತ್ತೂರಿನಲ್ಲಿ ಕೆಲವೊಂದಿಷ್ಟು ಮಂದಿ ಭೇಟಿ ನಂತರ ಕೇರಳದ ಆಲುವ ಎಂಬ ಜಾಗಕ್ಕೆ ತೆರಳಿ ಮತ್ತಷ್ಟು ಮಂದಿ ಭೇಟಿಯಾಗ್ತಾನೆ.
ಸ್ಪೋಟ ತಯಾರಿಕೆ ಹೇಗೆ.. ಎಲ್ಲಿ..? ಯಾವಾಗ..? ಹೇಗೆ..? ಬ್ಲ್ಯಾಸ್ಟ್ ಮಾಡಬೇಕೆಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ ನಂತರ ಮೈಸೂರಿಗೆ ತೆರಳಿ ಒಂದಷ್ಟು ಮಾಹಿತಿ ಕಲೆಹಾಕಿದ್ದಾನೆ. ಹೀಗೇ ಓಡಾಡಿ ಶಿವಮೊಗ್ಗ ಕೇಸ್ ತಂಪಾಗುತ್ತಿದ್ದಂತೆ ವಾಪಸ್ ಬಂದು ಕುಕ್ಕರ್ ನಲ್ಲಿ ಬಾಂಬ್ ಸಿಡಿಸಿದ್ದಾನೆ ಎಂಬ ಮಾಹಿತಿ ತನಿಖೆ ವೇಳೆ ಬಯಲಾಗಿದೆ.

More News