ಬೆಂಗಳೂರು: ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ಸಂಭಾಷಣೆಕಾರರಾಗಿದ್ದ ಗುರು ಕಶ್ಯಪ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ‘ಪುಷ್ಪಕ ವಿಮಾನ’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಗುರು ಕಶ್ಯಪ್ ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸುರಸುಂದರಾಂಗ ಜಾಣ, ‘ದೇವಕಿ’ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಗುರು ಕಶ್ಯಪ್, ಅವರಿಗೆ 45 ವರ್ಷ ವಯಸ್ಸಾಗಿತ್ತು. ಶಿವರಾಜ್ ಕುಮಾರ್ ಅಭಿನಯದ ‘ಬೈರಾಗಿ’ ಡಾಲಿ ಧನಂಜಯ್ ಅವರ ‘ಮಾನ್ಸೂನ್ ರಾಗ’ ಮೊದಲಾದ ಸಿನಿಮಾಗಳಿಗೆ ಸಂಭಾಷಣೆ ಬರೆಯುತ್ತಿದ್ದರು. ಅವರು ಪತ್ನಿ, ಮಗಳನ್ನು ಅಗಲಿದ್ದಾರೆ. ಗುರು ಕಶ್ಯಪ್ ನಿಧನಕ್ಕೆ ಚಿತ್ರರಂಗದ ನಿರ್ದೇಶಕರು, ಕಲಾವಿದರು, ಗಣ್ಯರು ಕಂಬನಿ ಮಿಡಿದಿದ್ದಾರೆ.




