ಮಂಗಳೂರಿನಲ್ಲಿ ಆಟೋ ಕುಕ್ಕರ್ ಸ್ಪೋಟ ಪ್ರಕರಣ ದಿನಕ್ಕೊಂದು ಕ್ಷಣಕ್ಕೊಂದು ತಿರುವನ್ನು ಪಡೆಯುತ್ತಿದೆ. ಶಂಕಿತ ಶಾರೀಖ್ ನ ಉಗ್ರ ಹೆಜ್ಜೆ ಗುರುತು ಒಂದೊಂದಾಗಿಯೇ ರಿವೀಲ್ ಆಗ್ತಿದ್ದು, ಮಂಗಳೂರಿನ ಎಫ್ ಎಸ್ ಎಲ್ ವರದಿಯಲ್ಲಿ ಸ್ಫೋಟ ಕ ಮಾಹಿತಿ ಬಹಿರಂಗವಾಗಿದೆ. ಶಂಕಿತ ಉಗ್ರ ಶಾರೀಖ್ ತಂದದ್ದು ಸಾಮಾನ್ಯವಾದ ಬಾಂಬ್ ಅಲ್ಲ.. ಇಡೀ ಬಸ್ ನ್ನೇ ಧ್ವಂಸಮಾಡುವಷ್ಟು ಶಕ್ತಿ ಇತ್ತು ಎಂದು ಎಫ್ ಎಸ್ ಎಲ್ ವರದಿ ನೀಡಿದೆ..

ಬಾಂಬ್ ಸಿಡಿಸುವ ಮುನ್ನ ಶಾರೀಖ್ ಮಂಗಳೂರನ್ನು ಶೋಧ ನಡೆಸಿದ್ದಾನೆ. ಪ್ರೇಮರಾಜ್ ಎಂಬ ಐಡೆಂಟಿಟಿ ಇಟ್ಕೊಂಡು ಸುತ್ತಾಡ್ತಿದ್ದ ಶಾರೀಖ್, ಮೊಬೈಲ್ ಟ್ರೈನಿಂಗ್ ಎಂಬ ಹೆಸರು ಹೇಳಿ ಬಾಂಬ್ ಸಿಡಿಸುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದನಂತೆ. ಇನ್ನು ಪೊಲೀಸರ ವರದಿ ಪ್ರಕಾರ, ಬಾಂಬ್ ಸಿಡಿಸಲೆಂದೇ ಸಿಕ್ಕಾಪಟ್ಟೆ ಪ್ಲ್ಯಾನ್ ಮಾಡಿದ್ದ ಶಾರೀಖ್ ಮೂರು ಲೀಟರ್ ಕುಕ್ಕರ್ ತುಂಬಾ ಸ್ಪೋಟಕ ಜೆಲ್ ನ್ನು ತುಂಬಿದ್ದ. ಕುಕ್ಕರ್ ನಲ್ಲಿ ಒಂದು ಡೆಟೋನೇಟರ್ ಕೂಡ ಇದ್ದು, ಎರಡೂ ಒಮ್ಮೆಲೇ ಸಿಡಿದಿದ್ದಿದ್ರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಇನ್ನು ಕುಕ್ಕರ್ ಬಾಂಬ್ ನಲ್ಲಿ ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಇತ್ತು. ಅದೃಷ್ಟ ವಶಾತ್ ಪ್ಲಸ್ ಮೈನಸ್ ಕನೆಕ್ಟ್ ಆಗದೇ ಶಾರ್ಟ್ ಸರ್ಕ್ಯೂಟ್ ಆಗಿದೆ. ಅಕ್ಕಸ್ಮಾತ್ ಕನೆಕ್ಟ್ ಆಗಿದ್ದಿದ್ದಿದ್ರೆ ಸಾವು ನೋವು ಸಂಭವಿಸಿಬಿಡುತ್ತಿತ್ತು ಎಂಬ ವರದಿಯನ್ನು ನೀಡಲಾಗಿದೆ.

ಎರಡು ವರ್ಷಗಳ ಹಿಂದೆಯೇ ಶಾರೀಖ್ ನ ಉಗ್ರ ಮನಸ್ಥಿತಿ ಯನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿದ್ದರು.. ಗೋಡೆ ಮೇಲೆ ಭಯೋತ್ಪಾದಕ ಪ್ರಚೋದಕ ಬರಹ ಬರೆದ ಹಿನ್ನೆಲೆಯಲ್ಲಿ ಶಾರೀಖ್ ನನ್ನು ಬಂಧಿಸಿ ವಿಚಾರಣೆ ಮಾಡಲಾಗಿತ್ತು. ಆ ವೇಳೆಯೇ ಆತನ ಉಗ್ರ ಮನಸ್ಥಿತಿ ಪೊಲೀಸರ ಗಮನಕ್ಕೆ ಬಂದಿದೆ. ಹಾಗಿದ್ದರೂ ಬಂಧಿಸಿ ಜೈಲಿಗಟ್ಟಿದ ಮೇಲೆ ಆತನ ಅಪ್ಡೇಟ್ ಪಡೆಯದೇ ಹಾಗೇ ಬಿಟ್ಟದ್ದು ಇಷ್ಟು ದುರಂತಕ್ಕೆ ಎಡೆಮಾಡಿತಾ ಎಂಬ ಚರ್ಚೆ ಶುರುವಾಗಿದೆ.
ಈ ಬಗ್ಗೆ ಶಾರೀಖ್ ನ ಬಂಧನ ವೇಳೆ ಇದ್ದ ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಮಾತನಾಡಿದ್ದು, ಗೋಡೆ ಬರಹ ಸಂಬಂಧಿಸಿದಂತೆ ಶಾರೀಖ್ ಮತ್ತು ಮಾಸ್ ಮುನೀರ್ ಎಂಬಾತನನ್ನು ಬಂಧಿಸಿದ್ದೆವು. ಮಾಸ್ ಮುನೀರ್ ಎಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದು, ಮಂಗಳೂರಿನಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದ. ಶಾರೀಖ್ ಮೂಲತಃ ತೀರ್ಥಹಳ್ಳಿಯವ. ಆತನಿಗೂ ಈತನಿಗೂ ಸ್ನೇಹ ಬೆಳೆದು ಇಲ್ಲಿ ಬಂದು ಭೇಟಿಯಾಗುತ್ತಾ ಹೋಗುತ್ತಿದ್ದರು. ಗೋಡೆ ಬರಹ ಬರೆಯುವುದಕ್ಕು ಮುನ್ನ ಖದ್ರಿ ಲಿಮಿಟ್ಸ್ ಮತ್ತು ಗೋಡೆ ಗುರುತಿಸಿ ಭಯೋತ್ಪಾದಕ ಬರಹ ಬರೆದು ಹೋಗಿದ್ದಾರೆ. ಅವರ ಉದ್ದೇಶವೇ ಸಾರ್ವಜನಿಕರಿಗೆ ಮೆಸೇಜ್ ಕೊಡೋದಾಗಿತ್ತು. ಆದರೆ ಅದು ಹೆಚ್ಚು ಚರ್ಚೆಗೆ ಒಳಪಡಲಿಲ್ಲ.. ಇವರಿಗೆ ಪಬ್ಲಿಸಿಟಿ ಬೇಕಿತ್ತು. ಹೀಗಾಗಿ ಮಂಗಳೂರನ್ನು ಆಯ್ಕೆ ಮಾಡಿ ಕೃತ್ಯ ಎಸಗಿದ್ದಾರೆ ಎಂದು ಹೇಳಿದ್ದು, ಪೊಲೀಸರ ಲೋಪ ಎದ್ದು ಕಾಣುತ್ತಿದೆ.




