Shraddha Murder : ಶ್ರದ್ದಾಗೆ 2 ವರ್ಷಗಳ ಹಿಂದೆಯೇ ಕೊಲೆ ಬಗ್ಗೆ ಸುಳಿವು : ಪೊಲೀಸರಿಗೆ ಬರೆದಿದ್ದ ಪತ್ರ ಬಹಿರಂಗ

ಶ್ರದ್ದಾ ತನ್ನ ಪ್ರಿಯಕರನಿಂದಲೇ ಪೀಸ್ ಪೀಸಾಗಿ ಕತ್ತರಿಸಿ ದಿಲ್ಲಿಯ ಕಾಡುಗಳಲ್ಲಿ ಬಿಸಾಡಲ್ಪಡುವೆ ಎಂದು ಎರಡು ವರ್ಷಗಳ ಹಿಂದೆಯೇ ವಸಾಯಿಯ ತಿಲುಂಜ್ ಪೊಲೀಸರಿಗೆ ನೀಡಿದ್ದ ದೂರು ವೈರಲ್ ಆಗುತ್ತಿದೆ.

ತನ್ನ ಬಾಯ್ ಪ್ರೆಂಡ್ ಜೊತೆಗೆ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಆಕೆಯು ಪ್ರಿಯಕರನ ಕುರಿತು ಹಲವಾರು ದಿನಗಳ ಹಿಂದೆಯೇ ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ, ಆಕೆಯು ಎರಡು ವರ್ಷಗಳ ಹಿಂದೆಯೇ ಈ ರೀತಿ ಆಗಬಹುದು ಎಂದು ಪೊಲೀಸರಿಗೆ ದೂರು ನೀಡಿ ತನ್ನ ಆತಂಕವನ್ನು ಹೊರ ಹಾಕಿದ್ದರು ಎಂಬ ಮಾಹಿತಿ ಬಹಿರಂಗ ವಾಗಿದೆ. ಶ್ರದ್ಧಾ ಅವರು ಅಫ್ತಾಬ್‌ನೊಂದಿಗೆ ಒಟ್ಟಿಗೆ ವಾಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿಯೇ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಕಾರಣಕ್ಕೆ ಪೊಲೀಸರಿಗೆ ಪತ್ರ ಬರೆದಿದ್ದಾಗಿ ಮಹಾರಾಷ್ಟ್ರದ ತನಿಖಾಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಶ್ರದ್ಧಾ ಅವರು ಎರಡು ವರ್ಷಗಳ ಹಿಂದೆ ಬರೆದ ಪತ್ರದೊಳಗೆ, ಅಫ್ತಾಬ್ ಇಂದು ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದಾನೆ. ಆತ ನನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದು, ನನ್ನನ್ನು ಕೊಂದು, ತುಂಡು ತುಂಡು ಮಾಡಿ ಎಸೆದು ಹೋಗುತ್ತೇನೆ ಎಂದು ಹೆದರಿಸುತ್ತಿದ್ದಾನೆ. ನಿರಂತರವಾಗಿ ಹಲ್ಲೆ ಮಾಡ್ತಾ ಇದ್ದಾನೆ. ಈ ಬಗ್ಗೆ ದೂರು ಕೊಡಲು ಸಹ ಭಯವಾಗ್ತಾ ಇತ್ತು ಎಂದಿದ್ದಾರೆ.

ಶ್ರದ್ದಾ ಹಂತಕ ಆಫ್ತಾಭ್ ಡೇಟಿಂಗ್ ಆಪ್ ಗಳ ಮೂಲಕ ಪರಿಚಯ ಆಗಿ 2019 ರಲ್ಲಿ ಸಂಬಂಧ ಬೆಳೆಸಿಕೊಂಡಿದ್ದರು. ಶ್ರದ್ಧಾ ಪ್ರಾರಂಭದ 6 ತಿಂಗಳ ನಿರಂತರ ಹಿಂಸೆಯನ್ನು ಅನುಭವಿಸುತ್ತಿದ್ದರು ಸಹ ಅವರ ಸಂಬಂಧ ಮತ್ತೆರಡು ವರ್ಷಗಳ ವರೆಗೂ ಮುರಿದು ಹೋಗಿರಲಿಲ್ಲ. 2020 ರಲ್ಲಿ ಅವರಿಬ್ಬರೂ ದೆಹಲಿಗೆ ಸ್ಥಳಾಂತರಗೊಂಡಿದ್ದರು ಎಂಬ ಮಾಹಿತಿ ತನಿಖೆ ವೇಳೆ ತಿಳಿದು ಬಂದಿದೆ.

More News