ವಿಶೇಷ ವರದಿ : ಕೃಪಾಕರ ಸಿದ್ದಾರ್ಥ
ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಒಂದೂವರೆ ತಿಂಗಳಾಗಿದೆ.ಆದರೂ ಮುಖ್ಯ ಮಂತ್ರಿ ಆಗಿದ್ದಾಗ ನೀಡಲಾಗಿದ್ದ ಎಲ್ಲಾ ಸೌಕರ್ಯ,ಸೌಲಭ್ಯಗಳನ್ನು ಪ್ರಸ್ತುತ ಸರ್ಕಾರ,ಪೂರ್ಣ ಪ್ರಮಾಣದಲ್ಲಿ ನೀಡುವ ಮೂಲಕ ಬಿಎಸ್ ವೈ,ಅವರ ಕುಟುಂಬ ಸದಸ್ಯರಿಗೆ ಬಿಜೆಪಿ ಸರ್ಕಾರ ಋಣ ಸಂದಾಯ ಮಾಡುತ್ತಿದೆ ಎನ್ನಲಾಗಿದೆ.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ.ಆದರೂ ಮಾಜಿ ಮುಖ್ಯಮಂತ್ರಿಗೆ ಪ್ರಸ್ತುತ ಸರ್ಕಾರ ಏನನ್ನೂ ಕಡಿಮೆ ಮಾಡಿಲ್ಲ.ಮುಖ್ಯಮಂತ್ರಿ ಹುದ್ದೆಗೆ ಸರಿಸಮಾನವಾಗಿರುವ ಗೌರವ,ಶಿಷ್ಠಾಚಾರ,ಅಧಿಕಾರಿ ವರ್ಗವನ್ನು ಸರ್ಕಾರ ದಯ ಪಾಲಿಸಿದೆ.

ಯಾರೆಲ್ಲಾ ಬಿಎಸ್ ವೈ ಕುಟುಂಬ ಸದಸ್ಯರ ಮನೆಯಲ್ಲಿ ಕೆಲಸ : ಅಡುಗೆ ಸಿಬ್ಬಂದಿಗಳು,ಮಾಲಿಗಳು,ವಾಹನ ಚಾಲಕರು,ಆಪ್ತ ಸಹಾಯಕರು,ನಾಯಿ,ಹಸು,ಮನೆ ಮೇಲ್ವಿಚಾರಕರು ಅವರ ಮನೆಯಲ್ಲಿರುವ ಮಕ್ಕಳನ್ನು ನೋಡಿಕೊಳ್ಳಲು,ಜಂಟಿ ಕಾರ್ಯದರ್ಶಿ, ಮಾಧ್ಯಮ ಸಮಯನ್ವಾಧಿಕಾರಿಗಳು ಸೇರಿದಂತೆ ಮುಖ್ಯಮಂತ್ರಿ ಅವರ ಕಚೇರಿ ಸಿಬ್ಬಂದಿಗಳ ಹೆಸರಿನಲ್ಲಿ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ಸೇವೆಗಾಗಿ 70ಕ್ಕೂ ಹೆಚ್ಚು ಜನರನ್ನು ಗುತ್ತಿಗೆ ಮೇಲೆ ಸರ್ಕಾರ ನಿಯೋಜಿಸಿದೆ.

ವಿಪರ್ಯಾಸವೆಂದರೆ ಮುಖ್ಯಮಂತ್ರಿ ಅವರ ಜಂಟಿ ಕಾರ್ಯದರ್ಶಿ ಮಟ್ಟದ ಓರ್ವ ಕೆಎಎಸ್ ಹಂತದ ಅಧಿಕಾರಿ,ಓರ್ವ ಮಾಧ್ಯಮ ಸಮನ್ವಯಾಧಿಕಾರಿ ಸೇರಿದಂತೆ ಸರ್ಕಾರದ ಮಹತ್ವದ ಹುದ್ದೆಯಲ್ಲಿ ಕೆಲಸ ಮಾಡಬೇಕಾದವರೆಲ್ಲಾ ಯಡಿಯೂ ರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ, ಪುತ್ರಿ ಬಿ.ವೈ.ಅರುಣಾ ದೇವಿ,ಅಳಿಯ,ಮೊಮ್ಮಗ ಶಶಿಧರ್ ಮರಡಿ ಸೇರಿದಂತೆ ಎಲ್ಲರ ಕುಟುಂಬಗಳಿಗೂ ಸೇವೆಯನ್ನು ಅನಿಯಮಿ ತವಾಗಿ,ನಿರಂತರವಾಗಿ ಪೂರೈಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪಣ ತೊಟ್ಟಿದ್ದಾರೆ.
ಸರ್ಕಾರಿ ಸಂಬಳ ಪಡೆದು ಬಿಎಸ್ ವೈ ಮನೆಯಲ್ಲಿ ಕೆಲಸ ಮಾಡುವವರು ಎಷ್ಟು : ಮುಖ್ಯಮಂತ್ರಿ ಕಚೇರಿಯಿಂದ ಹೊರಡಿಸಿ ರುವ ಟಿಪ್ಪಣಿ “ದಿ ನ್ಯೂಸ್ ಪೆಗ್ ‘ವೆಬ್ ಪೋರ್ಟಲ್ ಗೆ ಲಭ್ಯವಾಗಿದೆ.ಲಭ್ಯ ದಾಖಲೆಗಳ ಪ್ರಕಾರ ಕೇವಲ 14 ಜನರು ಕೆಲಸ ನಿರ್ವಹಿ ಸುತ್ತಿದ್ದಾರೆ.ಮುಖ್ಯಮಂತ್ರಿ ಕಚೇರಿ ಗುತ್ತಿಗೆ ನೌಕರರ ಹೆಸರಿನಲ್ಲಿ ಯಡಿಯೂರಪ್ಪ ಅವರಿಗೆ ಬೇಕಾದವರನ್ನು ನಿಯೋಜನೆ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.ಬಿಎಸ್ವೈ ಅವರ ವೈಯಕ್ತಿಕ ಹಾಗೂ ಸರ್ಕಾರಿ ಕೆಲಸ ನಿರ್ವಹಣೆಗಾಗಿ ಮುಖ್ಯಮಂತ್ರಿ ಅವರ ಜಂಟಿ ಕಾರ್ಯದರ್ಶಿ-1,ಕಾರ್ಯದರ್ಶಿಗಳು-? ,ಮಾಧ್ಯಮ ಸಂಚಾಲಕ ಅಧಿಕಾರಿ-1, ಆಪ್ತ ಸಹಾಯಕರು-4, ಸಹಾಯಕರು-4, ಕಿರಿಯ ಸಹಾಯಕ-4, ವಾಹನ ಚಾಲಕರು-5 ಸೇರಿದಂತೆ ಇನ್ನೂ ಹಲವಾರು ಜನರು ಸರ್ಕಾರದಿಂದ ಅಧಿಕೃತವಾಗಿ ಯಡಿಯೂರಪ್ಪ ಕುಟುಂಬ ಸದಸ್ಯರ ಸೇವೆಗಾಗಿ ನಿಯೋಜಿಸಲಾಗಿದೆ.

ಇವರೆಲ್ಲರಿಗೂ ಹಾಜರಾತಿ,ಬಯೋ ಮೆಟ್ರಿಕ್ ನಿಂದ ವಿನಾಯಿತಿ : ಇವರಾರೂ ವಿಧಾನ ಸೌಧದ ಕಚೇರಿಯಲ್ಲಿ ಒಂದೂ ದಿನವೂ ಹಾಜರಾತಿ,ಬಯೋ ಮೆಟ್ರಿಕ್ ನಲ್ಲಿ ಸಹಿ ಮಾಡು ವುದಿಲ್ಲ.ಸರ್ಕಾರದ ಮತ್ಯಾವುದೇ ವಿಧವಾದ ದಾಖಲೆಗಳಲ್ಲಿ,ಭೌತಿಕ ವಾಗಿ ಹಾಜರಾತಿ ಲಭ್ಯವಿರುವುದಿಲ್ಲ.ಆದರೆ ಪ್ರತಿ ತಿಂಗಳು ತಪ್ಪದ ಸಂಬಳವನ್ನು ಪಡೆದಿದ್ದಾರೆ.ಇವರೆಲ್ಲರೂ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಿಂದಲೂ ಇದೇ ರೀತಿ ಅವರ ಕುಟಂಬ ಸದಸ್ಯರಿಗೆ ಸೇವೆ ಸಲ್ಲಿಸುತ್ತಿದ್ದಾರೆ.ಬಿಎಸ್ವೈ ಅಧಿಕಾರದಿಂದ ನಿರ್ಗ ಮಿಸಿದ ಬಳಿಕವೂ ಮರು ಆದೇಶ ಮಾಡಿ ಮತ್ತೆ ಅವರನ್ನೇ ಕೆಲಸಕ್ಕೆ ನಿಯೋಜಿಸುವ ಮೂಲಕ ಮಾಜಿ ಸಿಎಂ ಸೇವೆಗೆ,ಕರ್ತವ್ಯಕ್ಕೆ ಚ್ಯುತಿ ಬಾರದಂತೆ,ಅಥವಾ ಅಡ್ಡಿ ಆತಂಕ ಎದುರಾಗದಂತೆ ಸರ್ಕಾರ ನೋಡಿಕೊಂಡಿದೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರು
ಪ್ರಸ್ತುತ ಯಡಿಯೂರಪ್ಪ ಅವರಿಗೆ ಹಾಗೂ ಕುಟುಂಬ ಸದಸ್ಯರಿಗೆ ನಿಯೋಜಿಸಿರುವ ಗುತ್ತಿಗೆ ನೌಕರರು ಮಾಜಿ ಸಿಎಂ ಅವರ ವೈಯ ಕ್ತಿಕ ಕೆಲಸ ಕಾರ್ಯಗಳ ಜೊತೆಗೆ ಸರ್ಕಾರದಿಂದ,ಸಚಿವರಿಂದ,ಅಧಿಕಾರಿಗಳಿಂದ,ಗುತ್ತಿಗೆದಾರರಿಂದ ಸೇರಿದಂತೆ ಆಗಬೇಕಾದ ಸರ್ಕಾ ರಿ,ಖಾಸಗಿ,ವೈಯಕ್ತಿಕ ವ್ಯವಹಾರಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.
ಇದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ನಿರಂತರವಾಗಿ ನಡೆಯುತ್ತಿದೆ.ಆದರೆ ಅಧಿಕಾರದಲ್ಲಿದ್ದಾಗ ಸರ್ಕಾರಿ ಸೌಲಭ್ಯಗಳನ್ನು ಅಗತ್ಯಕ್ಕಿಂತ ಬೇಕಾಬಿಟ್ಟಿಯಾಗಿ ಬಳಸಿಕೊಂಡಿದ್ದಾರೆಂಬ ಆರೋಪವೂ ಅವರ ಮೇಲಿದೆ.ಆದರೆ ಈಗ ಮಾಜಿ ಮುಖ್ಯಮಂತ್ರಿಯಾಗಿದ್ದರೂ ಸರ್ಕಾರದ ಸೌಲಭ್ಯಗ ಳನ್ನು ವ್ಯಾಪ್ತಿ ಮೀರಿ ಬಳಸಿಕೊಳ್ಳುವುದು ಸರಿಯಾದ ಕ್ರಮವಲ್ಲ.ಆ ಮೂಲಕ ರಾಜ್ಯದ ಬೊಕ್ಕಸಕ್ಕೆ ಹೊರೆ ಯಾಗುವಂತೆ ಮಾಡುವುದು ಮಾಜಿ ಸಿಎಂ ಅವರ ಘನೆತೆಗೆ ತಕ್ಕುದಾದ್ದಲ್ಲ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೂ ತಮ್ಮ ಅಧಿಕಾರವನ್ನು ಬೇರೆಯವರ ಸುಖಮೇಯ ಜೀವನಕ್ಕಾಗಿ,ಅವರ ಕುಟುಂಬ ಸದಸ್ಯರ ಸಂತೋಷ ಕ್ಕಾಗಿ ದುರ್ಬಳಕೆ ಮಾಡಿಕೊಳ್ಳಬಾರದು ಎಂಬುದಷ್ಟೆ ನಮ್ಮ ಕಳಕಳಿ.




