Ratan Tata Biopic : ಉದ್ಯಮಿ ರತನ್ ಟಾಟಾ ಜೀವನಾಧಾರಿತ ಸಿನಿಮಾ ನಿರ್ಮಾಣಕ್ಕೆ ಸಿದ್ದತೆ..!

ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೀವನಾಧಾರಿತ, ಪುರಾಣ ಕಥೆಗಳನ್ನು ಆಧರಿಸಿ ಸಿನಿಮಾಗಳನ್ನು ತೆಗೆಯುವುದು ಸಾಮಾನ್ಯವಾಗಿ ನಡೆಯುತ್ತಿದೆ. ಎಲ್ಲ ಭಾಷೆಯಲ್ಲಿಯೂ ಒಳ್ಳೊಳ್ಳೆಯ ಕಥೆಗಳನ್ನು ಆಧರಿಸಿ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ನಿಜಜೀವನದಲ್ಲಿ ಸಾಧನೆ ಮಾಡಿದ ಅನೇಕರ ಬದುಕಿನ ವಿವರಗಳನ್ನು ಸಿನಿಮಾ ಮೂಲಕ ತೋರಿಸಲಾಗುತ್ತದೆ. ಇದೀಗ ಖ್ಯಾತ ಉದ್ಯಮಿ ರತನ್​ ಟಾಟಾ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡಲು ಪ್ಲ್ಯಾನ್​ ಸಿದ್ಧವಾಗುತ್ತಿದೆ.

ಟಾಟಾ ಕುಟುಂಬದಲ್ಲಿ ಒಬ್ಬರಾದ ಖ್ಯಾತ ಉದ್ಯಮಿ
ದೇಶದ ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಗ್ಲೋಬಲ್ ವರ್ಲ್ಡ್ ನಲ್ಲಿ ಹೆಸರುವಾಸಿಯಾಗಿದ್ದಾರೆ. ಟಾಟಾ ಗ್ರೂಪ್‌ನಿಂದ ನಿವೃತ್ತರಾದ ನಂತರ ರತನ್ ಟಾಟಾ ಅವರು ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡುವಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, ಶಂತನು ನಾಯ್ಡು ಅವರು ವೃದ್ಧರ ಸೇವೆಗೆಂದೇ ಸ್ಥಾಪಿಸಿರುವ ಸ್ಟಾರ್ಟಪ್‌ ಕಂಪನಿಯಲ್ಲಿ ಟಾಟಾ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಹೀಗೆ ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ರತನ್ ಟಾಟಾ ಅವರ ಸಾಧನೆಯ ಪ್ರಯಾಣ ಇತರರಿಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ ನಿರ್ದೇಶಕರೊಬ್ಬರು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಬೃಹತ್ ಟಾಟಾ ಉದ್ಯಮದ ನಿರ್ದೇಶಕರಲ್ಲಿ, ರತನ್ ಒಬ್ಬರೇ ಅತ್ಯಂತ ಹೆಚ್ಚು ಓದಿಕೊಂಡಿರುವವರು. ಜೆ. ಆರ್. ಡಿ ಯವರು ತಮಗೆ ಕಾಲೇಜ್ ಶಿಕ್ಷಣ ದೊರೆಯದಿದ್ದಕ್ಕಾಗಿ ತಮ್ಮ ಜೀವನದುದ್ದಕ್ಕೂ ಕಳವಳವನ್ನು ವ್ಯಕ್ತಪಡಿಸುತ್ತಲೇ ಇದ್ದರು. ಭಾರತದಲ್ಲೇ ಪೂರ್ಣ ತಯಾರಿಸಿದ ದೇಸೀಕಾರನ್ನು ಗ್ರಾಹಕರಿಗೆ ಕಡಿಮೆದರದಲ್ಲಿ ಒದಗಿಸುವ ಗೀಳು ಅವರಿಗೆ ಬಹಳವಾಗಿತ್ತು.
ಜೆ. ಆರ್.ಡಿ.ಟಾಟಾ ರವರು, ತಮ್ಮ ಛೇರ್ಮನ ಹುದ್ದೆಯನ್ನು ರತನ್ ರವರಿಗೆ, 1990 ರಲ್ಲಿ ಒಪ್ಪಿಸಿ, ಅವರಿಗೆ ಟಾಟಾ ಉದ್ಯಮದ ಸರ್ವಾಧಿಕಾರವನ್ನು ಕೊಟ್ಟರು. ರತನ್ ಅಧಿಕಾರಕ್ಕೆ ಬಂದ ಸ್ವಲ್ಪ ಸಮಯದಲ್ಲೇ, ಟಿ.ಸಿ ಎಸ್ ಕಂಪೆನಿಯನ್ನು ಪಬ್ಲಿಕ್ ಶೇರ್ ಕಂಪೆನಿಯಾಗಿ ಪರಿವರ್ತಿಸಿದರು. ಟಾಟಾ ಮೋಟರ್ ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಛೇಂಜ್ ನಲ್ಲಿ, ಸೇರ್ಪಡೆಯಾಯಿತು. ಹೀಗೆ ಅನೇಕ ಸಾಧನೆಗಳನ್ನು ಕೈಗೊಂಡ ಅವರ ಕುರಿತು ಸಿನಿಮಾ ಮಾಡುತ್ತಿರುವುದು ಒಳ್ಳೆಯ ಸಂಗತಿಯಾಗಿದೆ.

ನಿರ್ದೇಶಕಿ ಸುಧಾ ಕೊಂಗರ ಅವರು ಸೂರರೈ ಪೊಟ್ರು ಸಿನಿಮಾ ಮಾಡಿದ ಮೇಲೆ ಸಖತ್ ಸದ್ದು ಮಾಡಿತು. ಅದನ್ನು ಹಿಂದಿಗೂ ಸಹ ರಿಮೇಕ್ ಮಾಡುತ್ತಿರುವ ಸಂದರ್ಭದಲ್ಲಿ ರತನ್ ಟಾಟಾ ಅವರ ಜೀವನಾಧಾರಿತ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇತ್ತೀಚಿಗೆ ಸೂರ್ಯ ನಟಿಸುತ್ತಿರುವ ಅನೇಕ ಸಿನಿಮಾಗಳು ಹಿಟ್ ಆಗುತ್ತಿರುವ ಸಂದರ್ಭದಲ್ಲಿ ಸೂರರೈ ಪೊಟ್ರು ಯಶಸ್ವಿಯಾಗಿ. ಇದಕ್ಕೆ ಅನೇಕ ಪ್ರಶಸ್ತಿಗಳು ಬರಲು ಶುರುವಾದ ಮೇಲೆ ಅಕ್ಷಯ್ ಕುಮಾರ್ ಗೆ ಸುಧಾ ಅವರು ಹಿಂದಿಯಲ್ಲಿ ರಿಮೇಕ್ ಮಾಡಲು ಮುಂದಾಗಿದ್ದಾರೆ. ಸಕ್ಸಸ್ ಆದ ಮೇಲೆ ಇನ್ನೊಂದು ಸಿನಿಮಾ ಕಡೆಗೆ ಹೊರಳಿರುವ ಅವರು ಟಾಟಾ ಕಥೆಯನ್ನ ತೆರೆಯ ಮೇಲೆ ತರಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಭಾರತ ದೇಶ ಕಂಡ ಖ್ಯಾತ ಉದ್ಯಮಿ ರತನ್ ಟಾಟಾ. ಅವರ ಜೀವನಾಧಾರಿತ ಸಿನಿಮಾ ಮಾಡುತ್ತಿರುವುದು ಖುಷಿಯ ಸಂಗತಿಯಾಗಿದೆ. ರತನ್ ಟಾಟಾ ಅವರ ಕುರಿತು ಸಮಾಜಕ್ಕೆ ಗೊತ್ತಿರದ ಒಂದಷ್ಟು ವಿಶೇಷತೆಗಳನ್ನು ಈ ಸಿನಿಮಾದ ಮೂಲಕ ಹೇಳುವ ಉದ್ದೇಶವಿದೆ. ಇನ್ನೂ ಸ್ಕ್ರಿಪ್ಟ್ ಮಾಡುವಂತಹ ಕೆಲಸ ನಡೆಯುತ್ತಿದ್ದು, ಮುಂದಿನ ವರ್ಷದ ನವೆಂಬರ್ ನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಆದರೆ, ರತನ್ ಟಾಟಾ ಅವರ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಇನ್ನೂ ಕನ್ಪರ್ಮ್ ಆಗಿಲ್ಲ. ಆದರೆ, ಸೂರ್ಯ ಅಥವಾ ಅಭಿಷೇಕ್ ಬಚ್ಚನ್ ನಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

More News