ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರೆಸಾರ್ಟ್ ನಲ್ಲಿ ಸೀಕ್ರೆಟ್ ಮೀಟಿಂಗ್ ನಡೆಸುತ್ತಿದ್ದಾರೆ. ಟಿಕೇಟ್ ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ರೆಸಾರ್ಟ್ ಒಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಮಧ್ಯಾಹ್ನ 12ರಿಂದ 2 ಗಂಟೆ ತನಕ 12 ಜಿಲ್ಲೆಗಳ ಟಿಕೇಟ್ ಆಕಾಂಕ್ಷಿಗಳ ಜೊತೆ ಡಿಕೆ ಶಿವಕುಮಾರ್ ಸೀಕ್ರೆಟ್ ಸಭೆ ನಡೆಯಲಿದೆ.

ಟಿಕೇಟ್ ಆಕಾಂಕ್ಷಿಗಳ ಹೊರತುಪಡಿಸಿ ಬೇರೆ ಯಾರಿಗೂ ರೆಸಾರ್ಟ್ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ಕಡ್ಡಾಯವಾಗಿ ಟಿಕೇಟ್ ಸಲ್ಲಿಕೆಯ ರಶೀದಿಯನ್ನು ತೋರಿಸಿ ರೇಸಾರ್ಟ್ ಪ್ರವೇಶಿಸಬೇಕಿದೆ. ಟಿಕೇಟ್ ಸಂಬಂಧಿಸಿದ ಮಾಹಿತಿ ರಹಸ್ಯವಾಗಿ ಉಳಿಯುವಂತೆ ರೆಸಾರ್ಟ್ ಗೇಟ್ ನಲ್ಲಿಯೇ ವಾಲೆಂಟಿಯರ್ ಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ಬಳಿಕ ಅರ್ಜಿ ಸಲ್ಲಿಸಿದ ಟಿಕೇಟ್ ಆಕಾಂಕ್ಷಿಗಳನ್ನು ಒಳಗೆ ಬಿಡುತ್ತಿದ್ದಾರೆ.

ಮೊದಲ ಸುತ್ತಿನಲ್ಲಿ ಕಲ್ಯಾಣಕರ್ನಾಟಕ ಭಾಗದ ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ & ಗ್ರಾಮೀಣ, ಬೀದರ್, ಹುಬ್ಬಳ್ಳಿ-ಧಾರವಾಡ ನಗರ, ಧಾರವಾಡ ಗ್ರಾಮೀಣ, ಗದಗ, ಕಲಬುರಗಿ, ಹಾವೇರಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಂದ ಆಗಮಿಸಿರುವ ಆಕಾಂಕ್ಷಿಗಳ ಜೊತೆ ಸಭೆ ನಡೆಸುತ್ತಿದ್ದಾರೆ.




