ಅಗ್ನಿಸಾಕ್ಷಿ ಧಾರವಾಹಿ ಮೂಲಕ ಮಿಂಚಿ ನಂತರ ಬಿಗ್ಬಾಸ್ ಮನೆಗೂ ಎಂಟ್ರಿ ಕೊಟ್ಟು ಸಖತ್ ಫೇಮಸ್ ಆದ ನಟಿ ವೈಷ್ಣವಿ ಗೌಡ ಅವರ ಎಂಗೇಜ್ಮೆಂಟ್ ಆಗಿದೆ ಎನ್ನುವಂತಹ ಫೋಟೊ ಒಂದು ವೈರಲ್ ಆಗಿದೆ. ನಟಿ ವೈಷ್ಣವಿ ಹಾಗೂ ನಟ ವಿದ್ಯಾಭರಣ್ ಅವರ ಎಂಗೇಜ್ಮೆಂಟ್ ಆಗಿದೆ ಎಂದು ಹೇಳಲಾಗಿತ್ತು. ಆದರೆ ನಟಿ ಇದು ಎಂಗೇಜ್ಮೆಂಟ್ ಅಲ್ಲ, ಕುಟುಂಬದವರ ಭೇಟಿಯಾಗಿ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನಮಗೆ ಇನ್ನೂ ಎಂಗೇಜ್ಮೆಂಟ್ ಆಗಿಲ್ಲ. ತಾಂಬೂಲ ಬದಲಾಯಿಸಿದ್ದಾರೆ ಅಷ್ಟೆ ಎಂದು ನಟಿ ವೈಷ್ಣವಿ ಗೌಡ ಸ್ಪಷ್ಟನೆ ನೀಡಿದ್ದಾರೆ. ಆದರೆ ಫೋಟೋ ನೋಡಿದರೆ ಅದು ನಿಶ್ಚಿತಾರ್ಥದಂತೆಯೇ ಕಂಡು ಬಂದಿದೆ. ವೈಷ್ಣವಿ ಗೌಡ ಅವರು ಸುಂದರವಾಗಿರುವ ನೀಲಿ ಝರಿ ಸೀರೆ ಉಟ್ಟಿದ್ದು ಇಬ್ಬರ ಕೊರಳಲ್ಲಿಯೂ ಹಾರವಿತ್ತು. ಹಣ್ಣು ಕಂಪಲುಯ. ಹೂಗಳು, ತಾಂಬೂಲ ತಟ್ಟೆ ಎಲ್ಲವೂ ಇರುವುದನ್ನು ಫೋಟೋದಲ್ಲಿ ಕಾಣಬಹುದು.



ಇದೀಗ ವಿದ್ಯಾಭರಣ್ ವಿರುದ್ಧ ಯುವತಿ ಆಡಿಯೋ ರಿಲೀಸ್ ಮಾಡಿದ್ದು ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಗರ್ಲ್ಫ್ರೆಂಡ್ ಇದ್ದಳು. ಆದರೆ ಇದು ಹಿತಶತ್ರುಗಳು ಮಾಡಿರೋ ಸಂಚು. ಇದರಿಂದ ಹೊರಗೆ ಬರುತ್ತೇನೆ ಎಂದಿದ್ದಾರೆ. ಆರಂಭದಲ್ಲಿ ಸ್ಪಷ್ಟನೆ ಕೊಟ್ಟಿದ್ದ ನಟಿ ಹಣ್ಣು ಕಾಯಿ ಇಡುವ ಶಾಸ್ತ್ರ ಮಾತ್ರ ನಡೆದಿದೆ. ನಾನು ಹುಡುಗನನ್ನು ಅರ್ಥ ಮಾಡಿಕೊಂಡಿಲ್ಲ. ನಂತರವೇ ಒಪ್ಪಿಗೆ ಬಗ್ಗೆ ಮಾತನಾಡುತ್ತೇನೆ ಎಂದಿದ್ದರು.
ಹೆಣ್ಣು ನೋಡುವ ಶಾಸ್ತ್ರಕ್ಕೆ ಬಂದು ತಾಂಬೂಲ ಬದಲಾಯಿಸಿದ್ದರು ಅಷ್ಟೆ. ಇದು ನಿಶ್ಚಿತಾರ್ಥ ಅಲ್ಲ. ಇದನ್ನು ಇಲ್ಲಿಗೇ ಬಿಡಿ ಎಂದು ವೈಷ್ಣವಿ ಗೌಡತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇದೆಲ್ಲಾ ಒಂದು ವಾರದ ಹಿಂದೆ ಆಗಿದ್ದು ಇಲ್ಲಿಯೇ ಬಿಟ್ಟು ಬಿಡೋಣ. ನಾನು ಹಾಗೂ ನನ್ನ ಕುಟುಂಬದವರು ಇದನ್ನು ಇಲ್ಲಿಗೇ ಬಿಡುತ್ತಿದ್ದೇವೆ. ಮೊದಲೇ ಗೊತ್ತಾಗಿದ್ದು ಒಳ್ಳೇದಾಯ್ತು, ಮದುವೆ ಆದ ಮೇಲೆ ಗೊತ್ತಾಗಿದ್ದರೆ ಕಷ್ಟ ಆಗುತ್ತಿತ್ತು ಎಂದಿದ್ದಾರೆ.




