Ban Removed for Varaha Rupam : ವರಹ ರೂಪಂ ಹಾಡಿಗೆ ನಿರ್ಬಂಧ ತೆರವು : ಗೋವಾದಲ್ಲಿ ಸಂತಸ ಕ್ಷಣ ಕಳೆದ ರಿಷಬ್

ವರಹ ರೂಪಂ ಹಾಡಿಗೆ ನಿರ್ಬಂಧವನ್ನು ತೆರವು ಗೊಳಿಸಿ ಕೋಳಿಕ್ಕೊಡ್‌ ನ್ಯಾಯಾಲಯ ಆದೇಶ ನೀಡಿದ್ದು, ಕಾಂತಾರ ತಂಡ ಗೆಲುವನ್ನು ಸಾಧಿಸಿದೆ. ಕಾಂತಾರ ಸಿನಿಮಾದ ವರಾಹ ರೂಪಂ ಹಾಡು ನವರಸಂ ಹಾಡಿನದು ಎಂದು ತೈಕ್ಕುಡಂ ಬ್ರಿಡ್ಜ್ ತಂಡ ನ್ಯಾಯಾಲಯ ಮೆಟ್ಟಿಲೇರಿತ್ತು. ಹೀಗಾಗಿ ಕೇರಳದ ಕೋಳಿಕ್ಕೊಡ್ ಹಾಗೂ ಪಾಲಾಡ್ ನ್ಯಾಯಾಲಯಗಳು ತಡೆಯಾಜ್ಞೆ ನೀಡಿತ್ತು. ಆದರೆ ತಡೆಯಾಜ್ಞೆ ತೆರವಿಗೆ ಅರ್ಜಿ ಹಾಕಿ ವರಾಹ ರೂಪಂ ಹಾಡಿಗೆ ಸಾಹಿತ್ಯ ಬರೆದ ಶಶಿರಾಜ್ ಕಾವೂರ್ ನ್ಯಾಯಾಲಯದಲ್ಲಿ ಹಾಡಿನ ಪರ ವಾದಿಸಿದ್ದು, ಕೋಳಿಕ್ಕೊಡ್ ನ್ಯಾಯಾಲಯವು ತಡೆಯಾಜ್ಞೆಯನ್ನು ತೆರವು ಗೊಳಿಸಿ, ವರಾಹ ರೂಪಂ ಹಾಡನ್ನು ಬಳಸಲು ಅನುಮತಿ ನೀಡಿದೆ.

ತಲೆಯಲ್ಲಿ ಸ್ಕ್ರಿಪ್ಟ್ ಗಳನ್ನು ಇಟ್ಕೊಂಡು ತಿರುಗಾಡುವೆ: ನಟ ರಿಷಬ್

ಸಿನಿಮಾ ಮಾಡುವ ಸಂದರ್ಭದಲ್ಲಿ ಎಂತಹ ಸಿನಿಮಾ ಮಾಡಬೇಕಂತ ಯೋಚ್ನೆ ಮಾಡಲ್ಲ. ಯಾಕೆಂದರೆ ನನ್ನಜ್ಜಿಯ ಪ್ರಭಾವಕ್ಕೆ ಒಳಗಾಗಿರುವ ನಾನು ತಲೆಯಲ್ಲಿ ಸ್ಕ್ರಿಪ್ಟ್ ಗಳನ್ನಿಟ್ಟುಕೊಂಡು ತಿರುಗಾಡುವೆ ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದ್ದಾರೆ.

ಸಧ್ಯಕ್ಕೆ ಗೋವಾದಲ್ಲಿರುವ ರಿಷಬ್ ಶೆಟ್ಟಿ, ಅಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗವಹಿಸಿದ್ದು, ಈ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಕಾಂತಾರ ಸಿನಿಮಾ ಸಕ್ಸಸ್ ಆದ ಮೇಲೆ ಹೊರಗಡೆ ಸಖತ್ ಕ್ರೇಜ್ ಹುಟ್ಟಿಕೊಂಡಿದೆ. ದೇಶ – ವಿದೇಶಗಳಲ್ಲಿ ಪೇಮಸ್ ಆದ ನಟ ರಿಷಬ್ ಶೆಟ್ಟಿ ಸಹ ಎಲ್ಲೆಡೆ ಮಿಂಚುತ್ತಿದ್ದಾರೆ. ಅದೆಲ್ಲದರ ನಡುವೆ ಕಾಂತಾರ ಚಿತ್ರದಲ್ಲಿ ದೈವ ಹಾಗೂ ಭೂತಾರಾಧನೆಯ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.. ಈ ವೇಳೆ ನಿಮ್ಮ ಪ್ರಕಾರ ದೇವರು ಅಂದರೆ ಏನು ಎಂಬ ಪ್ರಶ್ನೆಗೆ ಉತ್ತರಿಸಿರುವ ರಿಷಬ್, ಸಿನಿಮಾನೇ ನಮಗೆ ದೇವರು. ನಾನು ಇವತ್ತು ಇಷ್ಟು ಜನಪ್ರಿಯತೆ ಗಳಿಸಲು ಸಿನಿಮಾ ಕಾರಣ. ನನ್ನನಿವತ್ತು ದೇಶ – ವಿದೇಶಗಳಲ್ಲಿ ಫೇಮಸ್ ಮಾಡಿಸಿಬಿಡ್ತು.. ಹೀಗಾಗಿ, ಇದೇ ನಿಜವಾದ ದೇವರು ಅಂದಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ ಈ ಸಿನಿಮಾ ಬಾಲಿವುಡ್, ಹಾಲಿವುಡ್, ಟಾಲಿವುಡ್ ನ ಬಾಕ್ಸಾಪೀಸ್ ನಲ್ಲಿ ಸದ್ದು ಮಾಡಿತು. 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ 400 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

More News