YOUTH FIGHT: ವಿದ್ಯಾ ಕಾಶಿ ಧಾರವಾಡದಲ್ಲಿ ಹಾಡು ಹಗಲೆ ಯುವಕರ ಗುಂಡಾಗಿರಿ.!

ಧಾರವಾಡ: ಮೂವರು ಯುವಕರು ಸೇರಿಕೊಂಡು ಮತ್ತೊಬ್ಬ ಯುವಕನೋರ್ವನ ಮೇಲೆ ಮರಣಾಂತಿಕ ಹಲ್ಲೆ ನಡೆಸಿರುವ ಘಟನೆ ಧಾರವಾಡದ ಬಾಸೆಲ್ ಮಿಶನ್ ಹೆಬ್ರಿಕ್ ಮೆಮೋರಿಯಲ್ ಚರ್ಚ್ ಬಳಿ ಇಂದು ಹಾಡಹಗಲೇ ನಡೆದಿದೆ.

ಈ ಹಲ್ಲೆಗೆ ಕಾರಣ ಏನು ಎಂಬುದು ಇದುವರೆಗೂ ಗೊತ್ತಾಗಿಲ್ಲ. ಆದರೆ ಮೂವರು ಯುವಕರು ಸೇರಿಕೊಂಡು ಓರ್ವ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ. ಆತ ಕೆಳಗಡೆ ಬಿದ್ದರೂ ಬಿಡದ ಆ ಮೂರೂ ಜನ ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅವರು ಹಲ್ಲೆ ಮಾಡುತ್ತಿದ್ದ ದೃಶ್ಯವನ್ನು ನೋಡುತ್ತ ನಿಂತಿದ್ದವರನ್ನೂ ಬೆದರಿಸಿದ ಆ ಮೂರೂ ಜನ ಯುವಕರು ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಹಲ್ಲೆ ಮಾಡಿದವರ ಪತ್ತೆಗೆ ಜಾಲ ಬೀಸಿದ್ದಾರೆ.

More News