ಕರ್ನಾಟಕದ ಕೀರ್ತಿಯನ್ನು ದೇಶ – ವಿದೇಶಗಳಲ್ಲಿ ಹಬ್ಬಿಸುವಲ್ಲಿ ಹಾಗೂ ಕನ್ನಡ ಚಿತ್ರರಂಗವು ಬಾಲಿವುಡ್ ಗಿಂತ ಕಮ್ಮಿ ಏನಲ್ಲ ಅನ್ನೋದನ್ನ ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕೆ ಜಿ ಎಫ್ ಹಾಗೂ ಕಾಂತಾರ ಸಿನಿಮಾಗಳು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿದೆ. ಇದೀಗ ಈ ಸಂಸ್ಥೆಯಲ್ಲಿ ನಿರ್ಮಾಣವಾಗುವ ಮಹಿಳಾ ಪ್ರಧಾನ ಚಿತ್ರದಲ್ಲಿ ನಯನತಾರಾ ನಟಿಸುತ್ತಾರೆ ಎನ್ನಲಾಗುತ್ತಿದೆ.

ನಟಿ ನಯನತಾರಾ ದಕ್ಷಿಣ ಭಾರತದ ಪೇಮಸ್ ಹಾಗೂ ಬಹು ಬೇಡಿಕೆಯ ನಟಿ.. ಮದುವೆಯಾದ ಮೇಲೆಯೂ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಕನೆಕ್ಟ್, ಗೋಲ್ಡ್, ಜವಾನ್, ಇರೈವನ್ ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ಇದೀಗ ಮಹಿಳೆಯರ ಪ್ರಧಾನವಾದ ಸಿನಿಮಾದಲ್ಲಿ ಬಣ್ಣ ಹಚ್ಚಲು ಮುಂದಾಗಿದ್ದಾರೆ.

ಕಾಂತಾರ ಸಿನಿಮಾ ಸಕ್ಸಸ್ ಗಾಗಿ ಇಡೀ ಚಿತ್ರತಂಡ ಸಾಕಷ್ಟು ಕೆಲಸ ಮಾಡಿದೆ. ದೇಶ – ವಿದೇಶಗಳಲ್ಲಿ ಹೆಸರು ಮಾಡಿತು. ಸಿನಿಮಾ ಪ್ರಮೋಷನ್, ಪ್ರಚಾರ ಹಾಗೂ ರಿಲೀಸ್ ನಲ್ಲಿ ತಲ್ಲೀನವಾಗಿದ್ದ ಹೊಂಬಾಳೆ ಫಿಲ್ಮ್ಸ್ ಇದೀಗ ಬೇರೆ ಸಿನಿಮಾಗಳನ್ನು ಮಾಡಲು ಮುಂದಾಗಿದೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಬೇಕಿರುವ ‘ರಿಚರ್ಡ್ ಆಂಟನಿ’ ಸಿನಿಮಾ ಶೀಘ್ರದಲ್ಲಿಯೇ ಶುರುವಾಗುವ ಕಡೆಗೆ ಮುನ್ನಡೆದಿದೆ. ಇನ್ನೂ, ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನದಲ್ಲಿ ಮತ್ತೊಂದು ಚಿತ್ರವು ಸಹ ನಿರ್ಮಾಣಕ್ಕೆ ತಯಾರಿ ನಡೆದಿದೆ. ಇದರ ಮಧ್ಯೆಯೇ ನಯನತಾರ ಜೊತೆಗೆ ಪ್ಯಾನ್ ಇಂಡಿಯಾ ಲೆವೆಲ್ ನ ಸಿನಿಮಾ ಮಾಡಲು ಸಹ ಚರ್ಚೆಗಳು ನಡೆಯುತ್ತಿವೆ..

ಭಾರತದ ಸಿನಿಮಾ ರಂಗದಲ್ಲಿ ಅತಿದೊಡ್ಡ ನಿರ್ಮಾಣ ಸಂಸ್ಥೆಯಾಗಿ ಹೊಂಬಾಳೆ ಫಿಲ್ಮ್ಸ್ ಹೊರ ಹೊಮ್ಮಿದೆ. ನಿನ್ನಿಂದಲೇ ಸಿನಿಮಾ ಮೂಲಕ ಹೊಂಬಾಳೆ ಸಂಸ್ಥೆ ಚಿತ್ರ ನಿರ್ಮಾಣ ಕೆಲಸ ಶುರು ಮಾಡಿತು. ಮೊದ ಮೊದಲು ಬಾಕ್ಸಾಪೀಸ್ ನಲ್ಲಿ ಮುಗ್ಗರಿಸಿದರೂ ಛಲ ಬಿಡದೇ ಮುನ್ನಡೆಯಿತು. ಅದಾದ ಮೇಲೆ ಮಾಸ್ಟರ್‌ಪೀಸ್, ರಾಜಕುಮಾರ, ಕೆ ಜಿ ಎಫ್ ಚಾಪ್ಟರ್ 1, ಕೆ ಜಿ ಎಫ್ ಚಾಪ್ಟರ್ 2, ಕಾಂತಾರ ಸಿನಿಮಾಗಳು ಸಂಸ್ಥೆಯ ಕೈ ಹಿಡಿಯಿತು. ಹೀಗಾಗಿ, ಇದು ಸಖತ್ ಸಕ್ಸಸ್ ಹಿಂದೆ ಸಾಗಿದೆ.




