MTB Nagaraju : ಕುರುಬ ಸಮಾಜಕ್ಕೆ ಎಂಟಿಬಿ ಭರ್ಜರಿ‌ ಕೊಡುಗೆ..!

ರಾಜ್ಯದ ಪ್ರತಿ ಜಿಲ್ಲೆ ತಾಲೂಕುಗಳಲ್ಲಿ ಕನಕ ಭವನ ನಿರ್ಮಾಣಕ್ಕೆ ವ್ಯಯಕ್ತಿಕ 10 ಲಕ್ಷ ಕೊಡುತ್ತೆನೆ‌ ಎಂದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ ಹೇಳಿದ್ದಾರೆ. ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣಕ್ಕೂ 10 ಲಕ್ಷ ಕೊಡುವುದಾಗಿ ಇದೇ ವೇಳೆ ಭರವಸೆ ನೀಡಿದ್ದಾರೆ. ರಾಜ್ಯದ ಯಾವುದೇ ಜಿಲ್ಲೆ ತಾಲೂಕುಗಳ್ಳಿ ರಾಯಣ್ಣನ ಪುತ್ಥಳಿ ನಿರ್ಮಾಣ‌ ಮಾಡಿ ಅದಕ್ಕೆ 10 ಲಕ್ಷ ನಾನು ವ್ಯಯಕ್ತಿಕವಾಗಿ ಕೊಡುತ್ತೆನೆ ಎಂದ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಬ್ರಿಟಿಷರ ಕಾಲದಲ್ಲಿ ನಮ್ಮ‌ ಸಮುದಾಯ ಎಸ್ಸಿ‌ಎಸ್ಟಿ ದಾಖಲೆಯಲ್ಲಿ ಸೆರ್ಪಡೆಯಾಗಿತ್ತು. ಕೆಲವು ಕಾರಣಾಂತರಗಳಿಂದ ಕೆಲವು ವರ್ಷಗಳು ಆದ್ಮೆಲೇ ಆ ದಾಖಲೆಗಳು ಕೈ ತಪ್ಪಿವೆ.  ಅದರಿಂದ ಹೋರಾಟದಲ್ಲಿ ಕೆಲವು ತಾಲೂಕುಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಮಾತ್ರ ಎಸ್ಟಿಗೆ ಸೆರ್ಪಡೆಯಾಗಿವೆ.. ಕೊಪ್ಪಳದ ಗಂಗಾವತಿಯಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್  ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಮೀಸಲಾತಿ ಕೊಡಿಸುವ ವಿಚಾರ ಸರ್ಕಾರದ ಗಮನಕ್ಕೆ ತರಲಾಗುವದು.  ಗಂಗಾವತಿಯಲ್ಲಿ ಕನಕ ಭವನ ನಿರ್ಮಾಣಕ್ಕೆ ವ್ಯಯಕ್ತಿಕವಾಗಿ 10 ಲಕ್ಷ ರೂ. ಹಾಗೂ ಬೀರಲಿಂಗೇಶ್ವರ ದೇವಸ್ಥಾನ‌ಕ್ಕೆ‌ 05 ಲಕ್ಷ ರೂ. ನೀಡುವುದಾಗಿ ಹೇಳಿದ್ರು.

ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕುಗಳಲ್ಲಿ ಕನಕಭವನ ನಿರ್ಮಾಣ‌ ಮಾಡವುದಕ್ಕೆ 10 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದ್ದಾರೆ.  ವೀರಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸ ಮೂರ್ತಿ ಅನಾವರಣಕ್ಕೆ 10 ಲಕ್ಷ ರೂ. ನಾನು ವ್ಯಯಕ್ತಿಕವಾಗಿ ಕೊಡುತ್ತೆನೆ ಎಂದು ಎಂಟಿಬಿ ನಾಗರಾಜ್್ ಹೇಳಿದ್ದಾರೆ.

More News