SILENT SUNIL POLITCAL ENTRY: ಲಾಂಗು ಮಚ್ಚು ಹಿಡಿದ ಡಾನ್ ರಾಜಕೀಯ ಅಖಾಡಕ್ಕೆ: ಪೊಲಿಟಿಕಲ್ ಎಂಟ್ರಿಗೆ ಸೈಲೆಂಟ್ ಸುನಿಲನ ಭಾರೀ ಸ್ಕೆಚ್..!?

ಬೆಂಗಳೂರು : ಒಂದು ಕಾಲದಲ್ಲಿ ಬೀದಿ ಬೀದಿಯಲ್ಲಿ ಅನೇಕರ ಜೀವದ ಜತೆ ಚೆಲ್ಲಾಟವಾಡಿ ಅಟ್ಟಹಾಸ ಮೆರೆದಿದ್ದ ಭೂಗತ ಪಾತಕಿ ಸೈಲೆಂಟ್ ಸುನೀಲ ಇದೀಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾನೆ.. ಆದರೆ ಅದು ಪಾತಕ ಜಗತ್ತಲ್ಲ.. ರಾಜಕೀಯದಲ್ಲಿ.

ಹೌದು, ಲಾಂಗು ಮಚ್ಚು ಹಿಡಿದ ಡಾನ್ ಗಳು ರಾಜಕೀಯ ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ. ಪೊಲೀಸರ ವಾಂಟೆಡ್ ಲಿಸ್ಟ್ ನಲ್ಲಿ ಕಾಣೆಯಾದ ರೌಡಿ ಶೀಟರ್, ಭೂಗತ ಪಾತಕಿ ಸೈಲೆಂಟ್ ಸುನೀಲ, ಬಿಜೆಪಿಯ ದೊಡ್ಡ ದೊಡ್ಡ ರಾಜಕಾರಣಿಗಳ ಜೊತೆಗೆ ಪ್ರತ್ಯಕ್ಷನಾಗಿದ್ದಾನೆ..!.
ಸಿಸಿಬಿಯ ವಾಂಟೆಡ್ ಲಿಸ್ಟ್ ನಲ್ಲಿರುವ ಸುನೀಲ ರಾಜಾರೋಷವಾಗಿ 26 ನೇ ತಾರೀಖಿನಂದು ಚಿಕ್ಕಪೇಟೆಯಲ್ಲಿ ಬೃಹತ್ ರಕ್ತದಾನದ ಶಿಬಿರ ನಡೆಸಿದ್ದಾನೆ. ಈ ಶಿಬಿರಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಪಿಸಿ ಮೋಹನ್ ರ ಜೊತೆಗೆ ವೇದಿಕೆ ಹಂಚಿಕೊಂಡಿದ್ದು, ರಾಜ್ಯದಲ್ಲಿ ಮತ್ತೇ ರೌಡಿ ರಾಜಕೀಯ ಶುರುವಾಗಿದ್ಯಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಪುನೀತ್ ಸ್ಮರಣೆ ರಕ್ತದಾನದ ಹೆಸರಲ್ಲಿ ಬಿಜೆಪಿಯ ಪ್ರಭಾವಿ ರಾಜಕೀಯ ನಾಯಕರನ್ನು ಭೂಗತ ಪಾತಕಿ ಸೈಲೆಂಟ್ ಸುನೀಲ ಕರೆಸಿದ್ದಾನೆ. ವೇದಿಕೆ ತುಂಬೆಲ್ಲಾ ಬಿಜೆಪಿ ಪ್ರಭಾವಿಗಳ ಜೊತೆಗೆ ಖಾಸಾ ದೋಸ್ತಿನಂತೆ ಮಾತುಕತೆ ನಡೆಸಿ, ಪೋಸ್ ಕೊಟ್ಟಿದ್ದು, ಬಿಜೆಪಿ ಪಕ್ಷಕ್ಕೆ ಸೇರಲು ಸುನೀಲ ತಯಾರಿ ನಡೆಸುತ್ತಿದ್ದಾನಾ ಎಂಬ ಪ್ರಶ್ನೆ ಕಾಡಿದೆ..

ಅದಕ್ಕೆ ಪುಷ್ಟಿ ನೀಡುವಂತೆ ಗೃಹ ಸಚಿವರಾದ ಅರಗ ಜ್ಞಾನೇಂದ್ರರವರು ಆತನ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಜಾರಿಕೊಂಡಿದ್ದು, ಸಚಿವ ಅಶ್ವಥ್ ನಾರಾಯಣ ಬದುಕಲು ಒಂದು ಚಾನ್ಸ್ ಎಲ್ಲರಿಗೂ ನೀಡಬೇಕೆಂದು ಹೇಳಿಕೆ ನೀಡಿರುವುದು ಬಿಜೆಪಿಯಿಂದ ರಾಜಕೀಯಕ್ಕೆ ಬರೋ ಸೂಚನೆ ನೀಡಿದೆ.

ನವೆಂಬರ್ 20 ರಂದು ಬೆಂಗಳೂರಿನ ರೌಡಿಗಳ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದಾಗ ಸೈಲೆಂಟ್ ಸುನೀಲ ಕಾಣೆಯಾಗಿದ್ದಾನೆಂದು ಸಿಸಿಬಿ ಪೊಲೀಸರು ಹೇಳಿಕೆ ಕೊಟ್ಟಿದ್ದರು. ಆದರೆ ರಾಜಾರೋಷವಾಗಿ ಸಂಸದರ ಜೊತೆಗೆ ವೇದಿಕೆ ಹಂಚಿಕೊಂಡರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದ್ದದ್ದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

ಬಳಿಕ ಎಲ್ಲಾ ಕಡೆ ಸುದ್ದಿ ಆದ ಬಳಿಕ ಎಚ್ಚೆತ್ತ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಈಗ ಕ್ರಮ ಕೈಗೊಳ್ಳೋದಾಗಿ ತಿಳಿಸಿದರು. ಪ್ರಮುಖ ರೌಡಿ ಶೀಟರ್ ಗಳ ಮೇಲೆ ಕಣ್ಣಿಟ್ಟಿದ್ದೇವೆ. ಸೈಲೆಂಟ್ ಸುನೀಲನ್ನ ಕರೆದು ವಿಚಾರಣೆ ಮಾಡುತ್ತೇವೆ ಎಂದು ಸಮಜಾಯಿಷಿ ನೀಡಿದರು.
ಪ್ರಮುಖವಾಗಿ ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ, ಎಲ್ಲೇ ಯಾವುದೇ ಕಾರ್ಯಕ್ರಮ ನಡೆಯಬೇಕೆಂದರೂ ಸ್ಥಳೀಯ ಭಾಗದ ಠಾಣೆಯಿಂದ ಒಪ್ಪಿಗೆ ಪಡೆಯಬೇಕಿರುತ್ತದೆ. ಯಾರು ಕಾರ್ಯಕ್ರಮ ಉಸ್ತುವಾರಿ ವಹಿಸುತ್ತಾರೆ..? ಯಾರ ಕಾರ್ಯಕ್ರಮ ಎಂದೆಲ್ಲಾ ಮಾಹಿತಿ ಪಡೆದ ಬಳಿಕವಷ್ಟೇ ಕಾರ್ಯಕ್ರಮ ಆಯೋಜನೆಗೆ ಸೂಚಿಸುತ್ತಾರೆ.

ಸೈಲೆಂಟ್ ಸುನೀಲ ಕಾರ್ಯಕ್ರಮ ಉಸ್ತುವಾರಿ ಎಂದು ತಿಳಿದಿದ್ದರೂ ಒಪ್ಪಿಗೆ ಸೂಚಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ರಾಜಕೀಯ ಒತ್ತಡದಿಂದ ಖಾಕಿಯೂ ಸೈಲೆಂಟ್ ಆಗಿ ಬಿಡ್ತಾ ಎಂಬ ಪ್ರಶ್ನೆ ಎದುರಾಗಿದೆ.

#SILENT SUNIL #ROWDY #BJP ENTRY #BLOOD DONATION CAMP #PUNEET RAJKUMAR #PC MOHAN #TEJESHWI SURYA #MEMBER OF PARLIMENT #CHICKPET #ASSEMBLY #JOINT CP SHARANAPPA #ABSCONDING #ARAGA GNANEDRA #ASHWATHNARAYAN #MINISTER

More News