NELAMANGALA POLITICAL ROWDISM: ನೆಲಮಂಗಲ ರೌಡಿಶೀಟರ್ ನಿಂದ ಅವಾಜ್ ?: ಬಿಜೆಪಿಗೆ ಸೇರಿದ ದಿನವೇ ಜೆಡಿಎಸ್ ಕಾರ್ಯಕರ್ತನಿಗೆ ತಾಕತ್ತಿನ ಪ್ರಶ್ನೆ

ಮಂಡ್ಯ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಐದು ತಿಂಗಳು ಬಾಕಿ ಇರುವಂತೆ ನಾನಾ ಪಕ್ಷಗಳು ಭರ್ಜರಿಯಾಗಿ ತಯಾರಿ ಆರಂಭಿಸಿವೆ. ಆದರೆ, ಈ ನಡುವೆ ಬೆಂಗಳೂರಿನ ಚಿಕ್ಕಪೇಟೆಯ ಕಾರ್ಯಕ್ರಮವೊಂದರಲ್ಲಿ ರೌಡಿ ಸೈಲೆಂಟ್ ಸುನೀಲ್ ಜತೆ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ ಸಿ ಮೋಹನ್ ಕಾಣಿಸಿಕೊಂಡಿದ್ದರು. ಇದು ಬಿಜೆಪಿಗೆ ನಾನಾ ರೀತಿಯ ಮುಜುಗರಕ್ಕೆ ಎಡೆಮಾಡಿಕೊಟ್ಟಿತ್ತು.
ಪೊಲೀಸ್ ಲಿಸ್ಟ್ ನಲ್ಲಿ ಕಾಣೆಯಾಗಿದ್ದು, ರಾಜಕೀಯ ಮುಖಂಡರ ಜತೆ ಕಾಣಿಸಿಕೊಂಡರೂ ಅಲ್ಲೇ ಇರುವ ಪೊಲೀಸರು ಸೈಲೆಂಟ್ ಸುನಿಲ್ ವಿರುದ್ಧ ಏನೂ ಮಾಡಲಿಲ್ಲ ಎಂದು ಅಲ್ಲಿದ್ದ ಜನರು ಮಾತನಾಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.
ಇನ್ನೊಂದೆಡೆ ಮಂಡ್ಯ ಜಿಲ್ಲೆಯ ಹಲವಾರು ಜನರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ, ಇಲ್ಲೂ ಪೊಲೀಸ್ ಲೀಸ್ಟ್ ನಲ್ಲಿ ರೌಡಿಗಳಾಗಿರುವರನ್ನು ಸೇರಿಸಿ ಮತ್ತೊಂದು ರದ್ದಾಂತಕ್ಕೆ ಕಾರಣವಾಗಿದ್ದರು. ಪಕ್ಷ ಸೇರಿದ ಮಾರನೇ ದಿನಕ್ಕೆ ಮಂಡ್ಯದ ನಾಗಮಂಗಲ ಕ್ಷೇತ್ರದಲ್ಲಿ ರದ್ದಾಂತವನ್ನೇ ಸೃಷ್ಟಿಯಾಗಿದೆ. ಪ್ರತಿಪಕ್ಷದವರು ಬಿಜೆಪಿ ರೌಡಿಗಳ ಪಕ್ಷ ಎಂದು ಟೀಕೆ ಮಾಡಿದೆ.
ವ್ಯಕ್ತಿಗಳಿಗೆ ಬೆದರಿಕೆ ಹಾಕುವ ಹಂತಕ್ಕೆ ನಾಗಮಂಗಲದ ಎಲೆಕ್ಷನ್ ಅಖಾಡ ತಲುಪಿದ್ದು, ಜೆಡಿಎಸ್ ಕಾರ್ಯಕರ್ತನೊಬ್ಬನಿಗೆ ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿ ಅವಾಜ್ ಹಾಕಿದ್ದಾನೆ. ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರೋ ಫೈಟರ್ ರವಿ ವಿಡಿಯೋ ವೈರಲ್ ಆಗಿದೆ.
ಫೈಟರ್ ರವಿ ನಾಗಮಂಗಲ ಕ್ಷೇತ್ರದ ಸಂಭಾವ್ಯ ಬಿಜೆಪಿ ಅಭ್ಯರ್ಥಿಯಾಗಿದ್ದು, ರೌಡಿ ಶೀಟರ್ ಪಟ್ಟಿಯಲ್ಲಿರುವ ವ್ಯಕ್ತಿಯಾಗಿದ್ದಾನೆ.
ಸಂಭಾಷಣೆಯ ವಿವರ:
ಫೈಟರ್ ರವಿ – ಏನೋ‌ ಜಾಸ್ತಿ ಆಗಿದೆ ನಿಂದು.
ಜೆಡಿಎಸ್ ಕಾರ್ಯಕರ್ತ – ನಾನ್ ಏನ್ ಅಣ್ಣ ಮಾಡಿದೀನಿ.
ಫೈಟರ್ ರವಿ – ಬುಟಲ್ ಹೊಡೆದು ಬಿಡುತ್ತೀನಿ ನಿನ್ ಅಕ್ಕನ್.
ಜೆಡಿಎಸ್ ಕಾರ್ಯಕರ್ತ – ನಾನ್ ಏನ್ ಅಣ್ಣ ಮಾಡಿದೀನಿ ನಿಮಗೆ.
ಫೈಟರ್ ರವಿ. – ಬಂದ್ರೆ ನಿನ್ ಅಕ್ಕನ್ ಅಲ್ಲೆ ಬರ್ತಿನಿ ತಾಕತ್ ಇದ್ರೆ ಅಲ್ಲೇ ಫೇಸ್ ಮಾಡು.
ಜೆಡಿಎಸ್ ಕಾರ್ಯಕರ್ತ – ನಾನು ನಿಮ್ಮ ಬಗ್ಗೆ ಮಾತಾಡಿಲ್ಲ ಅಣ್ಣ.
ಫೈಟರ್ ರವಿ – ಇನ್ನೊಂದ್ ಸಲಾ ಉಸಿರು ಬಿಟ್ಟರೆ ನೀನು, ಎಲ್ಲಿ ಇದೀಯಾ ಅಲ್ಲೆ ಬರ್ತಿನಿ ಹುಷಾರ್ ಆಗಿ ಇರು.
ಫೈಟರ್ ರವಿ – ಹೇ ಎಲ್ಲಾ ಗೋತ್ತು
ಜೆಡಿಎಸ್ ಕಾರ್ಯಕರ್ತ – ನಿಮ್ಮ ಬಗ್ಗೆ ನಾನು ಮಾತಾಡಿದೀನಾ.
ಫೈಟರ್ ರವಿ – ಅವನಿಗೆ ಹೇಳು ನಿಮ್ಮ ನಾಯಕ ಅವನಲ್ಲಾ , ನೀನು ಡ್ರೈವರ್ ಡ್ರೈವರ್ ತರ ಇರು.
ಜೆಡಿಎಸ್ ಕಾರ್ಯಕರ್ತ – ಅಣ್ಣ ನೀವು ಅವರ ಹತ್ತಿರ ಮಾತಾಡಿ.
ಫೈಟರ್: ನಿಮ್ಮ ಅಪ್ಪ ಮಾಡಿದಾನಲ್ಲ, ಅವರ ಅಪ್ಪ ನಾನು ಅದಕ್ಕೆ ಮಾತಾಡುತ್ತಾ ಇದೀನಿ.
ಜೆಡಿಎಸ್ ಕಾರ್ಯಕರ್ತ – ಅವರ ಹತ್ತಿರ ಮಾತಾಡಿ ಅಣ್ಣ ನೀವು.
ಫೈಟರ್‌ ರವಿ – ಅವರ ಹತ್ತಿರ ಮಾತಾಡಿ ಅಣ್ಣ ನೀವು., ಬೂಟ್ ಅಲ್ಲಿ ಹೊಡಿತೀನಿ ಜಾಸ್ತಿ ಮಾತಾಡಿದ್ರೆ, ನಿನ್ ಅಯ್ಯನ್ ಯಾರ್ ಹತ್ತಿರ ಮಾತಾಡಿತ್ತೀಯಾ ಗೊತ್ತಾ ನೀನು.
ಜೆಡಿಎಸ್ ಕಾರ್ಯಕರ್ತ – ಇಲ್ಲಿ ಕೇಳಣ್ಣ ನೀವು ಅವರ ಹತ್ತಿರ ಮಾತಾಡಿ.
ಫೈಟರ್ ರವಿ – ಹೇ ಉಸಿರು ಬಿಟ್ಟರೆ ನೀನು ನೋಡ್ತಾ ಇರು, ನೀನು ಎಲ್ಲಿ ಇದೀಯಾ ಎಂಎಲ್‌ಎ ಜೊತೆಯಲ್ಲೇ ಇದ್ರು ಬರ್ತೀನಿ.

More News