ACTRESS SAMANTHA : ಸಮಂತಾ ಆರೋಗ್ಯದಲ್ಲಿ ಏರುಪೇರು: ಚಿಕಿತ್ಸೆಗಾಗಿ ವಿದೇಶಕ್ಕೆ ಶಿಪ್ಟ್ ?!

ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ಆರೋಗ್ಯ ಮತ್ತೆ ಕೈಕೊಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ದಕ್ಷಿಣ ಕೊರಿಯಾಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗುತ್ತಿದೆ.
ಬಹಳ ದಿನಗಳಿಂದ ಸಮಂತಾ ಮಯೊಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇತ್ತೀಚಿಗೆ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಸಹ ಪಡೆದಿದ್ದರು. ಆ ಸಂದರ್ಭದಲ್ಲಿ ಅವರು ಆಕ್ಟೀವ್ ಆಗಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಅವರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಮಯೊಸೈಟಿಸ್ ನಿಂದ ಸಂಪೂರ್ಣವಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಸಮಂತಾ ವಿದೇಶಕ್ಕೆ ತೆರಳಲಿದ್ದು, ಅಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಬರಲಿದ್ದಾರೆ ಎನ್ನಲಾಗುತ್ತಿದೆ.

ಸಮಂತಾ ನಟಿಸಿದ್ದ ಸಿನಿಮಾ ಯಶೋದಾ ಇತ್ತೀಚಿಗೆ ಬಿಡುಗಡೆ ಆಗಿತ್ತು. ಈ ಸಿನಿಮಾದ ಪ್ರಚಾರದ ವೇಳೆ ಸಮಂತಾ ಕಾಣಿಸಿಕೊಂಡಿದ್ದು ಬಿಟ್ಟರೆ ಮತ್ತೆ ಎಲ್ಲೂ ಕಂಡಿಲ್ಲ. ಇಂತಹ ಸಂದರ್ಭದಲ್ಲಿ ಅವರ ಆರೋಗ್ಯ ತೀರ ಹದಗೆಟ್ಟಂತಿದೆ ಎಂಬ ಸುದ್ದಿ ಹರಿದಾಡಿರುವುದು ಆತಂಕವನ್ನು ಹುಟ್ಟಿ ಹಾಕಿದೆ..
ಕಳೆದ ಹಲವು ದಿನಗಳಿಂದ ಸಮಂತಾ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಗಾಸಿಪ್ ಹರಡಿತ್ತು. ಇದು ಎಲ್ಲ ಕಡೆಗಳಲ್ಲಿ ವೈರಲ್ ಆಗ್ತಾ ಇದ್ದಂತೆ ಆಕೆಯ ಆಪ್ತರು ಪ್ರತಿಕ್ರಿಯೆ ನೀಡಿದ್ದು, ಸಧ್ಯಕ್ಕೆ ಸಮಂತಾ ಅವರು ಹೈದರಾಬಾದ್ ನಲ್ಲಿ ಇರುವ ಅವರ ಮನೆಯಲ್ಲಿ ಚಿಕಿತ್ಸೆ ಪಡೆದುಕೊಂಡು ರೆಸ್ಟ್ ನಲ್ಲಿ ಇದ್ದಾರೆ. ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಹೇಳಿದ್ದರು.

ಸಮಂತಾ ಸಿನಿಮಾಗಳ ಗತಿಯೇನು? ಈಗಾಗಲೇ ಅನೇಕ ಸಿನಿಮಾಗಳನ್ನು ಒಪ್ಪಿಕೊಂಡಿರುವ ಸಮಂತಾ ಮುಂದೆ ಏನು ಮಾಡಲಿದ್ದಾರೆ ಎಂಬುದು ಇನ್ನೂ ಅಂತಿಮ ಆಗಿಲ್ಲ. ಬಾಲಿವುಡ್ ಗೆ ಹೋಗುವ ಕಡೆಗೆ ಸಹ ಚಿಂತನೆ ಮಾಡಿದ್ದರು. ಇನ್ನೂ ವಿಜಯ್ ದೇವರಕೊಂಡ ಜೊತೆಗೆ ನಟಿಸುತ್ತಿರುವ ಖುಷಿ ಸಿನಿಮಾ ಸಹ ಅರ್ಧಕ್ಕೆ ನಿಂತಿದೆ. ಇಂತಹ ಸಂದರ್ಭದಲ್ಲಿ ಅವರು ವಿದೇಶಕ್ಕೆ ಹೋಗುತ್ತಿರುವುದು ಆತಂಕವನ್ನು ಹುಟ್ಟಿ ಹಾಕಿದೆ.

More News