MINISTER MURUGESH NIRANI: ಎಸಿಬಿ ದಾಳಿ- ಕಿಟಕಿಯಿಂದ 5 ಕೋಟಿ ಎಸೆದಿದ್ದ ವ್ಯಕ್ತಿಗೆ ಮತ್ತೆ ಅಧಿಕಾರ: ಸಚಿವ ಮುರುಗೇಶ್ ನಿರಾಣಿ ಶಿಫಾರಸ್ಸು

ಬೆಂಗಳೂರು : ಎಸಿಬಿ ದಾಳಿಯಿಂದ ಕುಖ್ಯಾತಿ ಪಡೆದಿದ್ದ ನಿವೃತ್ತ ಅಧಿಕಾರಿ ಟಿ ಆರ್ ಸ್ವಾಮಿಗೆ KIADB ಹೊಣೆ ನೀಡಲು ತೆರೆಮರೆಯಲ್ಲಿ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಎಸಿಬಿ ರೇಡ್ ಆದಾಗ ಕಿಟಕಿಯಿಂದ 5 ಕೋಟಿ ರೂಪಾಯಿ ನೋಟಿನ ಕಂತೆಗಳನ್ನು ಎಸೆದಿದ್ದ ಟಿ ಆರ್ ಸ್ವಾಮಿಗೆ ಮತ್ತೆ ಮಹತ್ವದ ಹೊಣೆ ನೀಡಲು ಸಿದ್ಧತೆ ನಡೆದಿದೆ.

ಈ ಸಂಬಂಧ ಟಿ ಆರ್ ಸ್ವಾಮಿ ಅವರಿಗೆ ಮಹತ್ವದ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ ಮಾಡಲು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಶಿಫಾರಸ್ಸು ಮಾಡಿದ್ದಾರೆ. ಈ ಪತ್ರ ‘ದಿ ನ್ಯೂಸ್ ಪೆಗ್’ ಗೆ ಲಭ್ಯವಾಗಿದ್ದು, ಇಂತಹ ವ್ಯಕ್ತಿಯ ನೇಮಕದ ಔಚಿತ್ಯವೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕೆಐಡಿಬಿ ಟೆಕ್ನಿಕಲ್ ಅಡ್ವೈಸರ್ ಹುದ್ದೆಗೆ ಮತ್ತೆ ಸ್ವಾಮಿಯನ್ನು ತೆಗೆದುಕೊಳ್ಳಲು ಪ್ರಪೋಸಲ್ ಸಿಕ್ಕಿದ್ದು, ಟಿಆರ್ ಸ್ವಾಮಿ 2020 ರ ಜೂನ್ ನಲ್ಲಿ ನಿವೃತ್ತಿ ಆಗಿದ್ದರು. ಟಿಆರ್ ಸ್ವಾಮಿ ಅವರನ್ನು ನೇಮಿಸಿ ಆದೇಶ ಹೊರಡಿಸಬೇಕೆಂದು ಕೈಗಾರಿಕೆ ಇಲಾಖೆ ಎಸಿ ಎಸ್ ಗೆ ಸಚಿವರ ಪತ್ರ ಹೊರಡಿಸಿದ್ಧಾರೆ.

ಟಿ ಆರ್ ಸ್ವಾಮಿ ಬಹು ಕೋಟಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದರು. ಟಿ ಆರ್ ಸ್ವಾಮಿಗೆ ಮತ್ತೆ ಹುದ್ದೆ ನೀಡಲು ಮುಂದಾಗಿರುವ ಕ್ರಮಕ್ಕೆ ಅಧಿಕಾರಿಗಳ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. ಸ್ವಾಮಿ ಕೆಐಎಡಿಬಿ ಸಿಇಓ ಗೆ ಟೆಕ್ನಿಕಲ್ ಅಡ್ವೈಸರ್ ಆಗಿ ಕೆಲಸ ಮಾಡಿದ್ದರು. ಕೇಂದ್ರ ಸರ್ಕಾರದೊಂದಿಗೆ KIADB ವತಿಯಿಂದ ಸಂವಹನ ನಡೆಸುವ ಹೊಣೆ ಕೂಡ ಸ್ವಾಮಿಗೆ ದೊರಕಲಿದೆ ಎನ್ನುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಇಂತಹವರನ್ನು ಮಹತ್ವದ ಹುದ್ದೆಗೆ ನೇಮಿಸಿ ಮತ್ತೆ ಈ ಹಿಂದೆ ನಡೆದಿರುವ ಘಟನೆಗಳು ಮರುಕರುಳಿಸುವ ಸಾಧ್ಯತೆಗಳು ಹೆಚ್ಚಾಗಿದ್ದರು ಕೂಡ ಸಚಿವ ಮುರುಗೇಶ್ ನಿರಾಣಿ ಅವರನ್ನು ನೇಮಕ ಮಾಡಲು ಶಿಫಾರಸ್ಸು ಮಾಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

#T R SWAMY #SUSPENDED OFFICER #RETIRED KAS OFFICER #MINISTER MURUGESH NIRANI #RECOMMANDED #KIADB #SPECIAL OFFICER POST

More News