ಚಿತ್ರದುರ್ಗದ ವಿಜ್ಞಾನ ಕಾಲೇಜಿನಲ್ಲಿ ಪುಂಡರು ಕಿರುಕುಳ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಅವರ ಬಳಿ ಯುವತಿಯರು ಅಳಲು ತೋಡಿಕೊಂಡಿದ್ದಾರೆ.

ಈ ವೇಳೆ ಸಚಿವ ನಾರಾಯಣಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ, ಕಾಲೇಜು ಆವರಣಕ್ಕೆ ಅನಧಿಕೃತವಾಗಿ ಬರುವ ಬೈಕ್ ಗಳನ್ನ ಸೀಜ್ ಮಾಡಿ, ಕಾಲೇಜು ಆವರಣದಲ್ಲಿ ಬೇಕಾ ಬಿಟ್ಟಿ ಓಡಾಡುವ ಪುಂಡ ಹುಡುಗರನ್ನು ಕರೆದು ವಾರ್ನ್ ಮಾಡಿ. ಪೊಲೀಸರು ಎಚ್ಚರಿಕೆ ಕೊಟ್ಟ ಮೇಲೂ ಇದು ರಿಪೀಟ್ ಮಾಡಿದ್ರೆ, ಅಂತಹ ಪುಂಡರ ಮೇಲೆ ಗುಂಡು ಹಾರಿಸಿ ಎಂದು ಸಚಿವ ಎಂದು ಪೊಲೀಸರಿಗೆ ಸಚಿವರು ಆದೇಶ ನೀಡಿದ್ದಾರೆ.




