RAMA KRISHNA JUST CHARACTERS OF NOVELS: ರಾಮ, ಕೃಷ್ಣ ಇತಿಹಾಸ ಪುರುಷರಲ್ಲ, ಕೇವಲ ಕಾದಂಬರಿಗಳ ಪಾತ್ರಧಾರಿಗಳು: ನಿವೃತ್ತ ಜಿಲ್ಲಾ ನ್ಯಾಯಾಧೀಶರ ಹೇಳಿಕೆ

ವಿಜಯಪುರ: ರಾಮ, ಕೃಷ್ಣ ಇತಿಹಾಸ ಪುರುಷರಲ್ಲ, ಅವರು ಕೇವಲ ಕಾದಂಬರಿ ಪಾತ್ರಧಾರಿಗಳು ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ವಸಂತ ಮುಳಸಾವಳಗಿ ವಿವಾದಾತ್ಮಕ ಹೇಳಿಕೆ ನೀಡದ್ದಾರೆ.
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಂವಿಧಾನ ಆಶಯ ಈಡೇರಿದೆಯೇ !? ಎನ್ನುವ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಶೋಕ್ ಚಕ್ರವರ್ತಿ ನಿಜವಾದ ಇತಿಹಾಸ ಪುರುಷ ಎಂದು ತಿಳಿಸಿದ್ದಾರೆ.
ಅಕ್ಬರ್ ಹೆಂಡತಿ ಹಿಂದೂವಾಗಿದ್ದೂ ಆಕೆ ಧರ್ಮಾಂತರ ಆಗಿರಲಿಲ್ಲ, ಆಕೆ ಹಿಂದೂವಾಗಿದ್ದು, ಆತ ಮುಸ್ಲಿಂನಾಗಿದ್ದ, ಅಕ್ಬರ್ ನ ಆಸ್ಥಾನದಲ್ಲಿ ಕೃಷ್ಣನ ಮಂದಿರ ಕಟ್ಟಿದ್ದಾನೆ ಹೋಗಿ ನೋಡಬಹುದು ಎಂದು ವಿವರಿಸಿದರು.

ಮುಸ್ಲಿಮರು ಹಾಗೆ ಮಾಡಿದ್ದಾರೆ, ಹೀಗೆ ಮಾಡಿದ್ದಾರೆ ಎಂದು ಹೇಳುವ ಅನೇಕರ ವಿರುದ್ಧ ಹರಿಹಾಯ್ದ ಅವರು, ಮುಸ್ಲಿಮರು ಏಳುನೂರು ವರ್ಷ ಆಳ್ವಿಕೆ ಮಾಡಿರೋದು ಇತಿಹಾಸ ಹೇಳುತ್ತೆ ಎಂದು ವಿವರಿಸಿದರು. ಅವರು ಆ ಸಂದರ್ಭದಲ್ಲಿ ಹಿಂದೂಗಳನ್ನು ವಿರೋಧ ಮಾಡಿದ್ರು ಅಂದ್ರೆ ಇದೀಗ ಒಬ್ಬ ಹಿಂದೂ ಭಾರತದಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದರು. ಮನಸ್ಸು ಮಾಡಿದ್ದರೆ ಎಲ್ಲರನ್ನೂ ಕೊಲ್ಲಬಹುದಿತ್ತು ಎಂದು ಹೆಳಿದ ವಸಂತ ಮುಳಸಾವಳಗಿ ಹೇಳಿದರು.

More News

You cannot copy content of this page