ಬೆಂಗಳೂರು ಡಿ.2 : ಭಾರತಕ್ಕೆ ಜಿ-20 ಶೃಂಗಸಭೆ ಅಧ್ಯಕ್ಷ ಸ್ಥಾನ ಸಿಕ್ಕ ಹಿನ್ನೆಲೆಯಲ್ಲಿ ವಿಶ್ವ ಪಾರಂಪತಿಕ ತಾಣ ಹಂಪಿಯ ನಾಲ್ಕು ಸ್ಮಾರಕಗಳು ದೀಪಾಲಂಕಾರದಲ್ಲಿ ಕಂಗೊಳಿಸುತ್ತಿವೆ.

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲ ಮತ್ತು ವಿರೂಪಾಕ್ಷ ರಥಬೀದಿಯ ಮಂಟಪಗಳು, ಹೇಮಕೂಟ ಮಂಟಪದಲ್ಲಿನ ಜೈನ ದೇವಾಲಯಗಳ ಸಮೂಹ, ಎದುರು ಬಸವಣ್ಣ ಮಂಟಪ, ಸಾಸಿವೆ ಕಾಳು ಗಣೇಶ ದೇವಾಲಯದಲ್ಲಿ ದೀಪಾಲಂಕರದಿಂದ ಕಂಗೊಳಿಸುತ್ತಿದ್ದು, ಈ ನಾಲ್ಕು ಸ್ಮಾರಕಗಳ ಮುಂಭಾಗದಲ್ಲಿ ಜಿ-20 ಶೃಂಗಸಭೆಯ ಲೋಗೋ ಇರುವ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ.

ಜಿ-20ಶೃಂಗ ಸಮ್ಮೇಳನದ ಹಿನ್ನೆಲೆಯಲ್ಲಿ ಡಿ.1ರಂದು ಆರಂಭವಾಗಿರುವ ಪಾರಂಪರಿಕ ತಾಣದಲ್ಲಿನ ದೀಪಾಲಂಕರ ಡಿ.7 ರವರೆಗೆ ಒಂದು ವಾರದ ಕಾಲ ದೇಶದ ನೂರು ಸಂರಕ್ಷಿತ ಸ್ಮಾರಕಗಳನ್ನು ಅಲಂಕರಿಸಲಾಗಿದೆ.