ಬೆಂಗಳೂರು ಡಿ.1: ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೂ ಮೊದಲೇ ರೌಡಿಶೀಟರ್ ಒಬ್ಬನಿಗೆ ಅಧಿಕಾರ ನೀಡಿರುವ ಸುದ್ದಿ ಬೆಳಕಿಗೆ ಬಂದಿದೆ. ರೌಡಿಶೀಟರ್ ಮಂಜುನಾಥ್ ಅಲಿಯಾಸ್ ಉಪ್ಪಿಯನ್ನ ಬೆಂಗಳೂರು ಹೊರವಲಯದ ಆನೇಕಲ್ ಪುರಸಭೆಯ ನಾಮನಿರ್ದೇಶಿತ ಸದಸ್ಯನನ್ನಾಗಿ ಬಿಜೆಪಿ ಆಯ್ಕೆಮಾಡಿದೆ.

ಮೂರು ದಿನಗಳ ಹಿಂದೆ ಪುರಸಭೆಗೆ ರೌಡಿಶೀಟರ್ ನನ್ನಾಗಿ ಬಿಜೆಪಿ ಆಯ್ಕೆ ಮಾಡಿದೆ. ರೌಡಿಶೀಟರ್ ಮಂಜುನಾಥ್ ಗೆ ಪುರಸಭೆ ನಾಮನಿರ್ದೇಶಿತ ಸದಸ್ಯನ ಪಟ್ಟ ನೀಡಿದ್ದು, ಮಂಜುನಾಥನ ವಿರುದ್ದ ಮಡಿವಾಳ ಪೊಲೀಸ್ ಠಾಣೆಯಲ್ಲಿ ಕೊಲೆ ಆರೋಪ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

ಅಷ್ಟೆ ಅಲ್ಲದೆ ನಖರಬಾಬು ಮರ್ಡರ್ ಕೇಸ್ ನಲ್ಲಿ ಮಂಜುನಾಥ್ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ. ರೌಡಿ ಶೀಟರ್ ಕವಳ ಮರ್ಡರ್ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿದ್ದ ನಖರ ಬಾಬು. ಇಂತಹ ನಖರ ಬಾಬು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ ಅಲಿಯಾಸ್ ಉಪ್ಪಿಯಾಗಿದ್ದಾರೆ. ಈತನನ್ನು ಬಿಜೆಪಿ ಪುರಸಭೆ ಸದಸ್ಯನನ್ನಾಗಿ ನೇಮಕ ಮಾಡಿರುವುದು ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಒಂದೆಡೆ ರೌಡಿಗಳಿಗೆ ಬಿಜೆಪಿ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳಲ್ಲ ಎನ್ನುತ್ತಿರುವಾಗಲೇ ಪುರಸಭೆಗೆ ಆಯ್ಕೆ ಮಾಡಿರುವುದು ಬಿಜೆಪಿಯ ಇಬ್ಬಗೆಯ ನೀತಿ ಬಯಲಾಗಿದೆ.
#rowday #purasabhe #nominated #bjp #manjunath #rowda nakharababu #murder case #rowday kavala