Chetan Ahimsa : ದೈವ ದೃಶ್ಯಗಳಿಗೆ ಯಾಕೆ ರೀಲ್ಸ್ ಮಾಡಬಾರದು : ನಟ ಚೇತನ್

ಬೆಂಗಳೂರು : ಡಿ.3 : ದೇಶದಾದ್ಯಂತ ಸದ್ದು ಮಾಡಿದ ಕಾಂತಾರ ಸಿನಿಮಾ ದಲ್ಲಿ ಬರುವಂತಹ ದೈವದ ದೃಶ್ಯಗಳಿಗೆ ಯಾರೂ ರೀಲ್ಸ್ ಮಾಡುವುದು ಬೇಡ ಎಂದು ರಿಷಬ್ ಶೆಟ್ಟಿ ನೀಡಿರುವ ಹೇಳಿಕೆಗೆ ನಟ ಚೇತನ್ ಅಹಿಂಸಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿನಿಮಾಗಳಲ್ಲಿ ದೈವದ ವೇಷ ಹಾಕಿ, ಆದಿವಾಸಿಗಳ ಆಚರಣೆಯನ್ನು ಹೈಜಾಕ್ ಮಾಡಿ ಕೋಟ್ಯಾಂತರ ರೂ.ಗಳು ಸಂಪಾದನೆ ಮಾಡ್ತೀರಾ‌. ಆದರೆ, ಬೇರೆಯವರು ದೈವದ ವೇಷದಲ್ಲಿ ರೀಲ್ ಮಾಡುವಂತಿಲ್ಲ ಎನ್ನುವುದು ತಪ್ಪು ಎಂದು ಚೇತನ್ ಹೇಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರ್ಕೊಂಡಿದ್ದಾರೆ.

ನೀವುಗಳು ಆರ್ಥಿಕ ಲಾಭಕ್ಕಾಗಿ ನಮ್ಮ ಆದಿವಾಸಿ ಸಂಸ್ಕೃತಿಯನ್ನು ಹೈಜಾಕ್ ಮಾಡಿ ಉಪಯೋಗಿಸಿಕೊಂಡು, ನಮ್ಮ ಮೂಲನಿವಾಸಿಗಳನ್ನು ಯಾವುದೇ ರೀತಿಯಲ್ಲೂ ಎತ್ತಿ ಹಿಡಿಯುವ ಕೆಲಸ ಮಾಡದೇ ಇರುವವರು, ಬೇರೆಯವರು ಇತರೆ ವೈಯಕ್ತಿಕ ಕ್ಷೇತ್ರಗಳಲ್ಲಿ ಆ ರೀತಿ ತೋರಿಸಬಾರದು ಎಂದು ಆದೇಶಿಸುವುದು ವಿಪರ್ಯಾಸ.
ನೀವು ತೋರಿಸಿದರೆ ಅದು ಸರಿ, ಬೇರೆಯವರು ತೋರಿಸಿದರೆ ತಪ್ಪು ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಅನೇಕರು ಚೇತನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಚೇತನ್ ನೀಡಿದ ಹೇಳಿಕೆ ದೈವಾರಾಧನೆ ಹಿಂದೂ ಸಂಸ್ಕೃತಿಯದ್ದಲ್ಲ ಎಂಬುದು ಸಾಕಷ್ಟು ಟೀಕೆಗೆ ಗುರಿಯಾಗಿದ್ದ ನಟ ಚೇತನ್, ಈ ಬಾರಿ ರೀಲ್ಸ್ ವಿರುದ್ಧ ದನಿ ಎತ್ತಿದ್ದಕ್ಕೆ ಕೆಲ ನೆಟ್ಟಿಗರಿಂದ ಬೆಂಬಲವನ್ನೂ ಪಡೆದಿದ್ದಾರೆ‌ ಚೇತನ್.. ಚೇತನ್
ಹೇಳಿರುವ ಹೇಳಿಕೆ ಸರಿಯಾಗಿಯೇ ಇದೆ. ರಿಷಬ್ ಶೆಟ್ಟಿ ದೈವದ ವೇಷ ಹಾಕಿಕೊಳ್ಳಬಹುದು. ಬೇರೆಯವರು ಹಾಕಿದರೆ ಅದಕ್ಕೆ ಯಾಕೆ ವಿರೋಧ. ಇನ್ನೂ ಕೆಲವರು ಹಿಂಗೆ ಬೇಕಾಬಿಟ್ಟಿ ರೀಲ್ಸ್ ಮಾಡುವುದು ಸರಿಯಲ್ಲ ಅಂತ ಹೇಳಿದ್ದಾರೆ.

ದೇಶದಲ್ಲಿ ಸುಮಾರು ನೂರಾರು ಕೋಟಿ ಬಾಚಿದ ಕಾಂತಾರ ಸಿನಿಮಾ ಹಲವಾರು ಟೀಕೆಗಳಿಗೆ ಗುರಿಯಾಗಿತ್ತು. ಈ ಸಿನಿಮಾ ಹಲವು ವಿವಾದಗಳನ್ನು ಎದುರುಗೊಂಡು ಕೋರ್ಟ್ ಮೆಟ್ಟಿಲೇರಿತ್ತು. ಇದರ ನಡುವೆ ಸಹ ಚೇತನ್ ಸಿನಿಮಾ ಬಗ್ಗೆ ಟೀಕೆ‌ ಮಾಡಿ ಸುದ್ದಿಯಾಗಿದ್ದರು. ಕೋಲ ಮತ್ತು ಭೂತಾರಾಧನೆ ಆದಿವಾಸಿಗಳ ಆಚರಣೆ, ಹಿಂದೂ ಧರ್ಮ ಹುಟ್ಟುವುದಕ್ಕೂ ಮುನ್ನ ಆದಿವಾಸಿಗಳಿದ್ದರು ಹಾಗೂ ಈ ಕೋಲ ಹಾಗೂ ಭೂತರಾಧನೆ ಇವೆರಡೂ ಹಿಂದೂ ಧರ್ಮದ ಭಾಗವಲ್ಲ ಅಂತಾನೂ ಹೇಳಿದ್ದರು.

More News