RANAYANA IS DESTINATION FOR NAXALWADI: ರಂಗಾಯಣ ನಕ್ಸಲ್ ವಾದಿಗಳ ಗೂಡಾಗಿತ್ತು: ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಆರೋಪ

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡಬೇಕು ಎಂಬ ಕೂಗು ಎದ್ದಿರುವ ಬೆನ್ನಲ್ಲೇ ಅಡ್ಡಂಡ ಕಾರ್ಯಪ್ಪ, ರಂಗಾಯಣ ಈ ಮೊದಲು ಮಜಾವಾದಿಗಳ ತಾಣವಾಗಿತ್ತು. ತಿಂದುಂಡು ಹೋಗುವವರ ತಾಣವಾಗಿತ್ತು. ಅಷ್ಟೇ ಅಲ್ಲ. ಅದೊಂದು ನಕ್ಸಲ್ ವಾದಿಗಳ ಗೂಡಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಡ್ಡಂಡ ಕಾರ್ಯಪ್ಪ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಮೈಸೂರಿನಲ್ಲಿ ಪತ್ರ ಚಳವಳಿ ನಡೆಯುತ್ತಿದೆ. ಅರಸು ಪ್ರತಿಮೆ ಪ್ರತಿಷ್ಠಾನ ಸಂಘಟನೆಯಿಂದ ಅಡ್ಡಂಡ ಕಾರ್ಯಪ್ಪ ಅವರ ವಜಾಕ್ಕೆ ಪತ್ರ ಚಳವಳಿ ನಡೆಸಲಾಗಿದ್ದು, ಸಿಎಂಗೆ ಪತ್ರ ಬರೆಯಲಾಗಿದೆ. ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡ್ತಿದ್ದಾರೆ. ಇವರ ವಿಕೃತ ಮನಸ್ಸಿನಿಂದ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ ಹೀಗಾಗಿ ಕೂಡಲೇ ರಂಗಾಯಣ ನಿರ್ದೇಶಕ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯಿಸಲಾಗುತ್ತಿದೆ.
ರಂಗಾಯಣ ಉಳಿಸಿ ಎಂಬ ಪ್ರತಿಭಟನೆ ನಡೆಯುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಖಾಸಗಿ ಚಾನಲ್ ವೊಂದರಲ್ಲಿ ಮಾತನಾಡಿರುವ ಅವರು, ಅದು ಉಳಿಸಿ ಪ್ರತಿಭಟನೆ ಅಲ್ಲ. ಅಲ್ಲಿ ಮಜಾ ಮಾಡುತ್ತಿದ್ದ ತಂಡಕ್ಕೆ ನಾ ಹೋದ ಬಳಿಕ ತಿನ್ನೋಕೆ ಸಿಗ್ತಿಲ್ಲ ಎಂದು ಉಳಿಸಿ ಹೋರಾಟ ಮಾಡ್ತಿದ್ದಾರೆ. ಉಳಿಸುತ್ತಿರುವುದು ನಾನು ಎಂದು ಖಾರವಾಗಿ ಮಾತನಾಡಿದ್ದಾರೆ.

ರಂಗಾಯಣವನ್ನು ಕೋಮುವಾದದ ಅಡ್ಡಯಾಗಿ ಮಾರ್ಪಡಿಸುತ್ತಿರುವ ಬಗ್ಗೆ ದೂರಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸುಳ್ಳು. ಸುಮ್ಮನೆ ಹೇಳಿದರೆ ಆಗಲ್ಲ. ಯಾವುದು ಕೋಮು..? ಕೋಮು ಎಂದರೇನು ಎಂದರು. ಮುಂದುವರೆದು ಮಾತನಾಡಿದ ಅವರು, ನಾನು ನಿರ್ದೇಶಕನಾಗುವುದಕ್ಕಿಂತ ಮೊದಲು ರಂಗಾಯಣ ಮಜಾವಾದಿಗಳ ತಾಣವಾಗಿತ್ತು. ತಿಂದುಂಡು ಹೋಗುವವರ ತಾಣವಾಗಿತ್ತು. ಮತ್ತು ಅದೊಂದು ನಕ್ಸಲ್ ವಾದಿಗಳ ಗೂಡಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ರಂಗಾಯಣದಲ್ಲಿ ಇತ್ತೀಚೆಗೆ ಹೊಸ ಪ್ರೇಕ್ಷಕರು ಸೃಷ್ಟಿಯಾಗಿದ್ದಾರೆ. ಇದು ಅವಶ್ಯಕತೆ ಇತ್ತು. ಮಾಡಿದ್ದೇನೆ. ವಿವಾದ ಸೃಷ್ಟಿ ಮಾಡಲೆಂದೇ ಸೃಷ್ಟಿಲಾಗ್ತಿದೆ. ಅಲ್ಲಿ ಯಾವ ವಿವಾದವೂ ಇಲ್ಲ. ಇದು ಎಡ ಪಂಥದವರ ಆರೋಪ. ನಾನು ರಂಗಪಂಥದವನು. ಸಧ್ಯಕ್ಕೆ ನಿಷ್ಪಕ್ಷವಾಗಿ ಟೋಟಲ್ ರಂಗಾಯಣ ವನ್ನು ಕಟ್ಟಬೇಕಿರೋದು ಈಗ ನನ್ನ ಮುಂದಿರುವ ಜವಾಬ್ದಾರಿ ಎಂದು ತಿಳಿಸಿದರು.
“ಟಿಪ್ಪು ಮೈಸೂರು ಹುಲಿ ಅಲ್ಲ. ಕಳ್ಳ ಬೆಕ್ಕು”
ಟಿಪ್ಪು ದೇಶ ವಿರೋಧಿ ಎಂದು ನಾಟದ ಮೂಲಕ ತೋರಿಸಬೇಕಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಟಿಪ್ಪು ಒಬ್ಬ ಚರಿತ್ರೆ ಪುರುಷ. ಆತನ ಸುತ್ತ ಅನೇಕ ಘಟನೆಗಳು ನಡೆದಿವೆ. ಹಸಿ ಸುಳ್ಳು ನಮ್ಮ ಮೆದುಳಿಗೆ ತುರುಕುತ್ತಾ ಬಂದಿರುವುದರಿಂದ ನಿಜ ಬಯಲಾಗ್ಬೇಕಿತ್ತು.
ಅದನ್ನ ಮಾಡಿದ್ದೇನೆ. ಕಾರ್ನಾಡ್ ಟಿಪ್ಪು ಬಗ್ಗೆ ಬರೆದದ್ದು ‌ಹಸಿ ಸುಳ್ಳು. ಟಿಪ್ಪು ಹುಲಿ ಎಂದು ಅವನಿಗೆ ಅವನೇ ಕರೆದುಕೊಂಡ ಹೆಸರು. ಅವನು ಮೈಸೂರು ಹುಲಿ ಅಲ್ಲ. ಮೈಸೂರಿನ ಕಳ್ಳ ಬೆಕ್ಕು ಎಂದರು.

#RANGANAYANA #ADDANDA CARIYAPPA #DIRECTOR #LETTER PROTEST #TIPPU SULTHAN #LION #CAT #PLACE FOR ENJOY #ALLIGATION

More News