ಅನಧಿಕೃತ ವೆಬ್ ಸೈಟ್ ಗೆ ಹೋಗಿ ಜಾಲಾಡೋದು.. ಉಚಿತ ಅಂದ ಕೂಡಲೇ ಗೊತ್ತಿಲ್ಲದ ಗೇಮ್ಸ್.. ಸಾಪ್ಟ್ವೇರ್.. ವೀಡಿಯೋಗಳ ನ್ನು.. ಕ್ಲಿಕ್ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ.. ಅಂದಾಜಿಗೂ ನಿಲುಕದ ಅಪಾಯಕಾರಿ ಬಾಂಬ್ ವೈರಸ್ ನಿಮ್ಮ ಮೊಬೈಲ್ ಗೂ ದಾಳಿ ಇಡಬಹುದು.. ಸೈಬರ್ ಬಾಂಬ್.. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ರೂಪ ತಳೆದು ಬರುತ್ತಿರೋ ಸೈಬರ್ ಬಾಂಬ್ ಬಗ್ಗೆ ಸಣ್ಣದೊಂದು ನಡೆದ ಘಟನೆಯನ್ನು ಮೆಲುಕು ಹಾಕುವ ಮೂಲಕ ಇದರ ವಿಚಾರಕ್ಕೆ ಬರೋಣ..

ಸುಮಾರು 40 ವರ್ಷಗಳ ಹಿಂದಿನ ಘಟನೆ ಇದು.. ಕೋಲ್ಡ್ ವಾರ್ ನಡೆಯುತ್ತಿದ್ದ ಸಮಯ.. ಈ ವೇಳೆ
ರಷ್ಯಾದವರು ಯೂರೋಪ್ ರಾಷ್ಟ್ರಗಳಿಗೆ ಗ್ಯಾಸ್ ನ್ನು ಕೊಳವೆ ಮೂಲಕ ಕಳಿಸೋದಾಗಿ ಒಪ್ಪಂದ ಮಾಡಿಕೊಂಡರು. ಆದರೆ ದೊಡ್ಡಣ್ಣ ಅಮೇರಿಕಾಗೆ ಈ ಒಪ್ಪಂದ ಸಿಟ್ಟು ತರಿಸಿತ್ತು.. ತಮಗೆ ರಾಜಕೀಯವಾಗಿ ಹಿನ್ನಡೆ ಜೊತೆಗೆ ರಷ್ಯಾ ಪ್ರಾಭಲ್ಯವನ್ನು ಪಡೆಯಬಹುದೇನೋ ಎಂದು ಸಿಟ್ಟಾದ ಅಮೇರಿಕಾ ಗ್ಯಾಸ್ ಪೈಪ್ ಲೈನ್ ನ್ನು ವಿಫಲಗೊಳಿಸಬೇಕೆಂದು ಅವರು ಬಳಸುತ್ತಿದ್ದ ಕಂಪ್ಯೂಟರ್ ಗೆ ಮಾಲ್ ವೇರ್ ವೊಂದನ್ನ ಹಾಕಿದರು.. ಅಷ್ಟೇ.. ಪ್ರಾರಂಭದಲ್ಲಿ ಸಿಸ್ಟಮ್ ಒಳಗೆ ಸೈಲೆಂಟ್ ಆಗಿ ಕೂತಿದ್ದ ಈ ಮಾಲ್ ವೇರ್ ಒಂದು ದಿನ ಇದ್ದಕ್ಕಿದ್ದಂತೆ ಗ್ಯಾಸ್ ತುಂಬಿದ್ದ ಪೈಪ್ ಲೈನ್ ಸ್ಟೋಟಕ್ಕೆ ಕಾರಣವಾಯ್ತು.. ಇದು ದೊಡ್ಡ ಮಟ್ಟದ ಸುದ್ದಿಯೂ ಆಗಿತ್ತು.. ಈ ದುರಂತದಿಂದ ಪೈಪ್ ಲೈನ್ ಸುತ್ತಮುತ್ತಲಿದ್ದ ಮನೆ, ಕಟ್ಟಡ ಸೇರಿದಂತೆ ಎರಡು ರೈಲಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರು ಸುಟ್ಟು ಬೂದಿಯಾಗಿದ್ದರು.. ಇದಕ್ಕೆ ಕಾರಣ ಸೈಬರ್ ಬಾಂಬ್..
ಅಪಾಯಕಾರಿ ಜಿಪ್ ಬಾಂಬ್

ಪ್ರಸ್ತುತ ಬಳಕೆಯಲ್ಲಿರುವ ಅಪಾಯಕಾರಿ ಬಾಂಬ್ ಎಂದರೆ ಅದು ಜಿಪ್ ಬಾಂಬ್.. ಸುಖಾಸುಮ್ಮನೆ ಯಾವ್ದ್ ಯಾವುದೋ ವೆಬ್ ಸೈಟ್ ಗಳನ್ನ ಜಾಲಾಡಿದ ಸಂದರ್ಭದಲ್ಲಿ ಈ ಜಿಪ್ ಬಾಂಬ್ ಮೊಬೈಲ್ ಅಥವಾ ಸಿಸ್ಟಮ್ ನಲ್ಲಿ ಬಂದು ಬಿಡುತ್ತದೆ. ಬಂದಾಗ ಚಿಕ್ಕದಾಗಿ ಕಾಣುವ ಜಿಪ್ ಬಾಂಬ್ ಬರು ಬರುತ್ತಾ ಅನ್ ಜಿಪ್ ಆಗುತ್ತೆ.. 10 ಸಾವಿರ ಪಾಲು ದೊಡ್ಡದಾದ ಜಂಕ್ ಬೆಳೆಯುತ್ತದೆ. ಅಷ್ಟೇ ಅಲ್ಲ.. ಮೊಬೈಲ್ ಮೆಮೋರಿ, ಸಿಸ್ಟಮ್ ಸಿಪಿಯು ಮೆಮೇರಿ ಎಲ್ಲವನ್ನೂ ಈ ಜಿಪ್ ಬಾಂಬ್ ಆವರಿಸುತ್ತೆ.. ಇದ್ರಿಂದ ನೀವ್ ಕೆಲಸ ಮಾಡೋದು ನಿಲ್ಲಬಹುದು.. ಡಾಟ ಕಳುವಾಗಬಹುದು.. ಅಥವಾ ಸಿಸ್ಟಮ್ ಯೇ ಕ್ರ್ಯಾಶ್ ಆಗ್ಬಹುದು..

ಪ್ರಸ್ತುತ ಬಳಕೆಯಲ್ಲಿರುವ ಸೈಬರ್ ಬಾಂಬ್ ಗಳು ಯಾವುದು..?
ಲಾಜಿಕ್ ಬಾಂಬ್: ನಿಮಗೆ ಗಿಪ್ಟ್, ಪ್ರೈಜ್ಹ್ ಕೊಡೋ ನೆಪದಲ್ಲಿ ಮತ್ತೇ ಮತ್ತೇ ಮೆಸೇಜ್ ಬರ್ತಿದ್ರೆ ಅದನ್ನ ನೋಡಿ ಖುಷಿ ಪಟ್ಟು ಕ್ಲಿಕ್ ಮಾಡಿದರೆ ಹುಷಾರ್.. ಅದನ್ನೇ ಲಾಜಿಕ್ ಬಾಂಬ್ ಎಂದು ಕರೆಯಲಾಗುತ್ತೆ. ನಿಮ್ಮ ಸಿಸ್ಟಮ್ ಗಳಲ್ಲಿ ಪ್ರವೇಶ ಪಡೆಯುವ ಈ ಜಂಕ್ ಬರು ಬರುತ್ತಾ ನಿಮ್ಮ ಮಾಹಿತಿ, ಸಿಸ್ಟಮ್ ಕ್ಯಾಪಾಸಿಟಿಯನ್ನೇ ನಾಶ ಮಾಡಿ ಹೋಗುತ್ವೆ.. ಹೀಗೆ ಸಾಕಷ್ಟು ಸೈಬರ್ ಬಾಂಬ್ ಪ್ರಸ್ತುತ ಚಾಲ್ತಿಯಲ್ಲಿವೆ..
ಹಾಗಾಗಿ.. ಏನೇ ಡೌನ್‌ಲೋಡ್ ಮಾಡಬೇಕೆಂದರು ಅಧಿಕೃತವಾಗಿ ಬಂದಿದೆ.. ಎಂಬ ಮಾಹಿತಿ ಇದ್ದಾಗ ಮಾತ್ರ ಡೌನ್ಲೋಡ್ ಮಾಡಿ.. ಸಿಕ್ಕ ಸಿಕ್ಕಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡೋದು, ಯಾವುದೋ ಅನಾಮಿಕ ವೆಬ್ ಸೈಟ್ ನಲ್ಲಿ ಜಾಲಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ..




